ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​

ವ್ಯಕ್ತಿಯೊಬ್ಬನನ್ನು ಬುಲೆಟ್​ನಿಂದ ಇ-ಸಿಗರೇಟ್ ರಕ್ಷಿಸುವ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು ಕೊನೆಗೆ ಇ-ಸಿಗರೇಟ್​ನಿಂದ ಬದುಕುಳಿದಿದ್ದಾರೆ.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​
ಇ-ಸಿಗರೇಟ್​

Updated on: Sep 18, 2024 | 9:37 AM

ಸಿಗರೇಟ್​ ಎಂದಾದರೂ ಮನುಷ್ಯನ ಜೀವ ಕಾಪಾಡಬಲ್ಲದೇ, ಧೂಮಪಾನದಿಂದ ಮನುಷ್ಯನ ಶ್ವಾಸಕೋಶಕ್ಕೆ ಪೆಟ್ಟಾಗುವುದೇ ವಿನಃ ಒಳ್ಳೆಯದಂತೂ ಇಲ್ಲ. ದೀವಾರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಎದೆಗೆ ಗುಂಡು ಹಾರಿಸಿದರೂ ಜೇಬಿನಲ್ಲಿದ್ದ ಬ್ಯಾಡ್ಜ್​ ಅವರ ಜೀವ ಉಳಿಸಿದಂತೆ ನಿಜ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿದೆ.

ಕೆಲವೊಮ್ಮೆ ನಾಣ್ಯಗಳು, ಕೆಲವೊಮ್ಮೆ ಐಫೋನ್ ವ್ಯಕ್ತಿಯ ಜೀವ ಉಳಿಸಿದಂತೆ ಈ ಬಾರಿ ಇ-ಸಿಗರೇಟ್​ ವ್ಯಕ್ತಿಯ ಜೀವ ಕಾಪಾಡಿದೆ.
ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು.

ಹೇಗೋ ವ್ಯಕ್ತಿ ಕಾರನ್ನು ಓಡಿಸಿಕೊಂಡು ಬಂದು, ಸಹಾಯಕ್ಕಾಗಿ ಕಾರ್​ವಾಶ್​ ಮಾಡಿಸುವ ಸ್ಥಳದಲ್ಲಿ ನಿಲ್ಲಿಸಿದಾಗ ಬುಲೆಟ್​ ತನ್ನ ಕಾರಿನ ಬಾಗಿಲು ತೂರಿಕೊಂಡು ಒಳಗೆ ಬಂದಿತ್ತು. ಅದು ಬಂದು ಇ-ಸಿಗರೇಟ್​ ಡಬ್ಬಿಗೆ ತಗುಲಿತ್ತು.

ಮತ್ತಷ್ಟು ಓದಿ: ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು

ಒಂದೊಮ್ಮೆ ಆ ಸಿಗರೇಟ್​ ಡಬ್ಬಿ ಮತ್ತೊಂದು ಪಾಕೆಟ್​ನಲ್ಲಿದ್ದರೆ ಅದು ಅವರ ಕಾಲಿಗೆ ಬೀಳುತ್ತಿತ್ತು. ಅದನ್ನು ಪೊಲೀಸರಿಗೆ ಕೊಟ್ಟಾಗ ಅವರೂ ಕೂಡ ಆಶ್ಚರ್ಯಗೊಂಡರು. ಪೊಲೀಸರು ಸಾಧನವನ್ನು ಮುರಿದು ನೋಡಿದಾಗ ಗುಂಡು ಇನ್ನೂ ಅದರೊಳಗಿತ್ತು.

ಸಿನೋಲಾ ಮೆಕ್ಸಿಕೋದ ಡ್ರಗ್ ಉದ್ಯಮವನ್ನು ನಡೆಸುತ್ತಿರುವ ಅತ್ಯಂತ ಹಿಂಸಾತ್ಮಕ ಡ್ರಗ್ ಕಾರ್ಟೆಲ್‌ಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ವಿಶೇಷ ಪಡೆಗಳ ಸೈನಿಕರು, ವಿಮಾನಗಳು ಮತ್ತು ಭಾರೀ ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರೂ, ಸ್ಥಳೀಯರಲ್ಲಿ ಭಯ ಮುಂದುವರೆದಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us