AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು

18 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದ ಡೆಲಿವರಿ ಏಜೆಂಟ್​ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ. ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡಿ ಕೊನೆಗೆ ಸಾಕಾಯ್ತು ಎಂದು ತನ್ನ ಎಲೆಕ್ಟ್ರಿಕ್​ ಸ್ಕೂಟರ್​ನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ.

ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು
ಚೀನಾImage Credit source: South China Morning Post
Follow us
ನಯನಾ ರಾಜೀವ್
|

Updated on: Sep 18, 2024 | 8:46 AM

ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಕೊನೆಗೆ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಡೆಲಿವರಿ ಏಜೆಂಟ್​ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚೀನಾದಲ್ಲಿ ನಡೆದಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ಪ್ರಕಾರ, ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್‌ಝೌನಲ್ಲಿ ನಡೆದಿದೆ. ಡೆಲಿವರಿ ಏಜೆಂಟ್​ನನ್ನು 55 ವರ್ಷದ ಯುವಾನ್ ಎಂದು ಗುರುತಿಸಲಾಗಿದೆ. ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡಿ ಕೊನೆಗೆ ಸಾಕಾಯ್ತು ಎಂದು ತನ್ನ ಎಲೆಕ್ಟ್ರಿಕ್​ ಸ್ಕೂಟರ್​ನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ.

ಯುವಾನ್ ಪಟ್ಟು ಬಿಡದೆ ಕೆಲಸ ಮಾಡುತ್ತಿದ್ದರು, ಅವರಿಗೆ ಆರ್ಡರ್ ಕಿಂಗ್ ಎನ್ನುವ ಅಡ್ಡ ಹೆಸರೂ ಇದೆ. ಅವರು ದಿನಕ್ಕೆ 500-600 ಯುವಾನ್ ಹಣ ಗಳಿಸುತ್ತಿದ್ದರು. ಅವರು ಮಧ್ಯರಾತ್ರಿ 3 ಗಂಟೆಯವರೆಗೂ ಕೆಲಸ ಮಾಡಿ ಮಲಗಿ ಮತ್ತೆ 6 ಗಂಟೆಗೆ ಕೆಲಸ ಶುರು ಮಾಡುತ್ತಿದ್ದರು. ದಣಿವು ಅನಿಸಿದಾಗ ಬೈಕ್​ನಲ್ಲಿ ಸ್ವಲ್ಪಹೊತ್ತು ನಿದ್ರೆ ಮಾಡುತ್ತಿದ್ದರು. ಡೆಲಿವರಿ ಆರ್ಡರ್​ ಬಂದ ತಕ್ಷಣ ಮತ್ತೆ ಕೆಲಸಕ್ಕೆ ಮರಳುತ್ತಿದ್ದರು.

ಯುವಾನ್​ ಸಹೋದ್ಯೋಗಿ ನೀಡಿರುವ ಮಾಹಿತಿ ಪ್ರಕಾರ ಕಳೆದ ತಿಂಗಳು ಯುವಾನ್ ಕಾಲು ಮುರಿದುಕೊಂಡಿದ್ದರು. ಸುಮಾರು 10 ದಿನಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ಕೆಲಸಕ್ಕೆ ಮರಳಿದ್ದರು, ಎರಡು ವಾರಗಳ ಬಳಿಕ ಸಾವನ್ನಪ್ಪಿದ್ದಾರೆ.

ಅವರ ಓರ್ವ ಮಗನಿಗೆ ಮದುವೆಯಾಗಿ ಮಕ್ಕಳಿದ್ದಾರೆ ಮತ್ತೊಬ್ಬ ಮಗನಿಗೆ ಕೇವಲ 16 ವರ್ಷ ಹೀಗಾಗಿ ಆತನಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು. ಕುಟುಂಬಕ್ಕೆ ಅವರೊಬ್ಬರೇ ಆಧಾರವಾಗಿದ್ದರು.

ಮತ್ತಷ್ಟು ಓದಿ: ಚೀನಾ: ರಜೆ ಇಲ್ಲದೆ 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದ ವ್ಯಕ್ತಿ ಸಾವು

ರಜೆ ಪಡೆಯದೆ 104 ದಿನಗಳ ಕಾಲ ಕೆಲಸ ಮಾಡಿದ್ದ ವ್ಯಕ್ತಿ ಸಾವು ಸ್ವಲ್ಪವೂ ಬಿಡುವು ಪಡೆಯದೆ ಕೆಲಸ ಮಾಡಿಸಿದರೆ ಯಂತ್ರಗಳೇ ಹಾಳಾಗುತ್ತವೆ ಇನ್ನು ಮನುಷ್ಯ ಬದುಕಲು ಸಾಧ್ಯವೇ?. ರಜೆ ಪಡೆಯದೆ ನಿರಂತರ 104 ದಿನಗಳ ಕಾಲ ಕೆಲಸ ಮಾಡಿದ ವ್ಯಕ್ತಿಯೊಬ್ಬ ಅಂಗಾಂಗ್ಯ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದಲ್ಲಿ ಕಾರ್ಮಿಕ ಕಾನೂನುಗಳು ಕೂಡ ಅಷ್ಟು ಕಠಿಣವಾಗಿಲ್ಲ, ಅದಕ್ಕಾಗಿಯೇ ಚೀನಾ ಉತ್ಪಾದನಾ ವಲಯದ ಕೇಂದ್ರವಾಗಿದೆ. ಇತ್ತೀಚೆಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.

ಕಂಪನಿಯು ಆತನನ್ನು ಗುಲಾಮನಂತೆ ನಡೆಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ, ಅವರು 104 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರು, ಅಷ್ಟೇ ಅಲ್ಲದೆ ದಿನಕ್ಕೆ 8 ಗಂಟೆಗಳಲ್ಲ ಓವರ್​ ಟೈಮ್ ಕೂಡ ಮಾಡಿದ್ದರು. ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ