AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಬ್ಬಾ ಎಂಥಾ ಭಂಡ ಧೈರ್ಯ ನೋಡಿ, ಹೋಗಿ ಹೋಗಿ ಕರಡಿ ಗುಹೆಯೊಳಗೆ ಕುಳಿತು ಬಿಡೋದಾ ಈ ಯುವಕ

ಸೋಷಿಯಲ್‌ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋ ತುಣುಕು ಹರಿದಾಡುತ್ತಿದ್ದು, ತನ್ನ ಗುಹೆಯೊಳಗೆಯೇ ಬಂದು ಹಾಯಾಗಿ ಕುಳಿತಿದ್ದಂತಹ ಯುವಕನೊಬ್ಬನಿಗೆ ಕರಡಿಯೊಂದು ನೀನ್ಯಾಕೆ ಇಲ್ಲಿ ಬಂದು ಕುಳಿತಿದ್ದು ಎಂದು ಜೋರು ಮಾಡಿದೆ. ಈ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ವರ್ತಿಸಿದ ಆ ಯುವಕ ಕರಡಿಯ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ.

Viral: ಅಬ್ಬಾ ಎಂಥಾ ಭಂಡ ಧೈರ್ಯ ನೋಡಿ, ಹೋಗಿ ಹೋಗಿ ಕರಡಿ ಗುಹೆಯೊಳಗೆ ಕುಳಿತು ಬಿಡೋದಾ ಈ ಯುವಕ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Sep 17, 2024 | 5:55 PM

Share

ಕಾಡಿನಲ್ಲಿರುವ ಇತರೆ ಪ್ರಾಣಿಗಳಂತೆ ಕರಡಿಗಳು ಕೂಡಾ ಮನುಷ್ಯನ ಮೇಲೆ ದಾಳಿ ನಡೆಸುತ್ತವೆ. ಇನ್ನೂ ಈ ದೈತ್ಯ ಕರಡಿಗಳೇನಾದ್ರೂ ಕಣ್ಣ ಮುಂದೆ ಬಂದ್ರೆ ನಾವೆಲ್ರೂ ಮಾರು ದೂರು ಓಡಿ ಬಿಡುತ್ತೇವೆ. ಆದ್ರೆ ಇಲ್ಲೊಬ್ಬ ಭಂಡ ಧೈರ್ಯದ ಯುವಕ ಹೋಗಿ ಹೋಗಿ ಕಾಡಿನಲ್ಲಿರುವ ಕರಡಿಯ ಗುಹೆಯೊಳಗೆಯೇ ಕೂರಲು ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ದೈತ್ಯ ಕರಡಿಯೊಂದು ಎಂಟ್ರಿ ಕೊಟ್ಟಿದ್ದು, ಅಯ್ಯೋ ದೇವ್ರೆ ಹೇಗಪ್ಪಾ ಈ ಕರಡಿಯಿಂದ ಪಾರಾಗೋದು ಎಂದು ಪರದಾಡಿದ್ದಾನೆ. ಜೊತೆಗೆ ಆ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ವರ್ತಿಸಿದ ಯುವಕ ಕರಡಿಯ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಕುರಿತ ಪೋಸ್ಟ್‌ ಒಂದನ್ನು ಸರ್ಬಿಯಾದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸ್ಟೀಫನ್‌ ಜಾಂಕೋವಿಕ್‌ (stefan_jankovich) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಡಿಗೆ ಹೋಗಿದ್ದಂತಹ ಜಾಂಕೋವಿಕ್‌ ಕರಡಿಗಳು ಮಲಗುವಂತಹ ಗುಹೆಗಳಿಗೆ ಒಮ್ಮೆ ಭೇಟಿ ಕೊಡ್ಬೇಕಲ್ವಾ ಎಂದು ಕರಡಿಯ ಗುಹೆಗೆ ಹೋಗಿದ್ದು, ಅಲ್ಲಿ ಅವರು ಹಾಯಾಗಿ ಕುಳಿತಿದ್ದ ಸಂದರ್ಭದಲ್ಲಿ ದೈತ್ಯ ಕರಡಿಯೊಂದಿ ಎಂಟ್ರಿ ಕೊಟ್ಟಿದೆ. ಆದ್ರೆ ವಿಶೇಷ ಏನಪ್ಪಾ ಅಂದ್ರೆ ಬೇರೆ ಕರಡಿಗಳಂತೆ ಈ ಕರಿಡಿಯೂ ಕೋಪದಲ್ಲಿ ಜಾಂಕೋವಿಕ್‌ ಮೇಲೆ ಯಾವುದೇ ದಾಳಿಯನ್ನು ಮಾಡಿಲ್ಲ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜಾಂಕೋವಿಕ್‌ ಗುಹೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಕರಡಿಯೊಂದು ಗುಹೆಯ ಸಮೀಪ ಬರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಬಂದ ಯಾವುದೇ ದಾಳಿಯನ್ನು ಮಾಡದೇ ಒಂದು ಬಾರಿ ಕ್ಯಾಮೆರಾ ಇನ್ನೊಂದು ಬಾರಿ ಜಾಂಕೋವಿಕ್‌ ಮುಖವನ್ನು ನೋಡುತ್ತಾ ತಾಳ್ಮೆಯಿಂದ ವರ್ತಿಸಿದೆ.

ಇದನ್ನೂ ಓದಿ: ಫುಡ್‌ ಪಾರ್ಸೆಲ್‌ ಕೊಡಲು ಬಂದು ಶೂ ಕದ್ದೊಯ್ದ ಸ್ವಿಗ್ಗಿ ಡೆಲಿವರಿ ಬಾಯ್‌

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 69.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕರಡಿ ಎಂಟ್ರಿ ಕೊಟ್ಟಿದ್ದು ನೋಡಿ ನನಗೆ ಒಮ್ಮೆಗೆ ಭಯವಾಯ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕರಡಿ ದಾಳಿ ಮಾಡದಿರುವುದನ್ನು ಕಂಡು ನನಗೆ ಆಶ್ಚರ್ಯವಾಯ್ತುʼ ಎಂದು ಹೇಳಿದ್ದಾರೆ.

ವೈರಲ್​​ ಸುದದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು