Viral: ಫುಡ್ ಪಾರ್ಸೆಲ್ ಕೊಡಲು ಬಂದು ಶೂ ಕದ್ದೊಯ್ದ ಸ್ವಿಗ್ಗಿ ಡೆಲಿವರಿ ಬಾಯ್
ಕೆಲ ತಿಂಗಳುಗಳ ಹಿಂದೆ ಗುರುಗ್ರಾಮ್‌ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ಕೊಡಲು ಬಂದು ಮನೆಯ ಹೊರಗಿದ್ದ ಒಂದು ಜೋಡಿ ದುಬಾರಿ ಶೂವನ್ನು ಕಳ್ಳತನ ಮಾಡಿದ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ ಗ್ರಾಹಕರಿಗೆ ಪಾರ್ಸೆಲ್ ಕೊಟ್ಟು ಬರುವಾಗ ಮನೆಯ ಮುಂದೆ ಇದ್ದ ಒಂದು ಜೋಡಿ ಶೂವನ್ನು ಎಗರಿಸಿಕೊಂಡು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಝೊಮ್ಯಾಟೊ, ಸ್ವಿಗ್ಗಿ, ಉಬರ್ ಈಟ್ಸ್ ಇತ್ಯಾದಿ ಫುಡ್ ಡೆಲಿವರಿ ಕೆಂಪೆನಿಗಳಲ್ಲಿ ಕೆಲಸ ಮಾಡುವಂತಹ ಡೆಲಿವರಿ ಬಾಯ್‌ಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋ ತುಣುಕುಗಳು, ಭಾವುಕ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಗ್ರಾಹಕರಿಗೆ ಫುಡ್ ಪಾರ್ಸೆಲ್ ಕೊಟ್ಟು ಬರುವಾಗ ಅಲ್ಲೇ ಇನ್ನೊಂದು ಮನೆಯ ಮುಂದಿದ್ದ ಒಂದು ಜೋಡಿ ಶೂಗಳನ್ನು ಎಗರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲ ತಿಂಗಳುಗಳ ಹಿಂದೆ ಗುರುಗ್ರಾಮ್‌ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ಕೊಡಲು ಬಂದು ಮನೆಯ ಹೊರಗಿದ್ದ ಒಂದು ಜೋಡಿ ದುಬಾರಿ ಶೂವನ್ನು ಕಳ್ಳತನ ಮಾಡಿದ್ದ ಪ್ರಸಂಗವೊಂದು ನಡೆದಿತ್ತು. ಇದೀಗ ಅಂತಹದ್ದೇ ಘಟನೆ ಮತ್ತೊಮ್ಮೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಅಪಾರ್ಟ್‌ಮೆಂಟ್ ಒಂದಕ್ಕೆ ಫುಡ್ ಡೆಲಿವರಿ ಮಾಡಲು ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಯಾರೋ ಮನೆಯ ಹೊರ ಭಾಗದಲ್ಲಿ ಶೂ ರ್ಯಾಕ್‌ನಲ್ಲಿ ಇಟ್ಟಿದ್ದಂತ ಒಂದು ಜೋಡಿ ಶೂ ಅನ್ನು ಕದ್ದುಕೊಂಡು ಹೋಗಿದ್ದಾನೆ. ಈ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
फ्लैट के बाहर रखे जूते चोरी। Swiggy डिलीवरी बॉय की भी कोई मजबूरी रही होगी…
📍नोएडा, उत्तर प्रदेश pic.twitter.com/bUTkC7nPeA
— Sachin Gupta (@SachinGuptaUP) September 17, 2024
ಈ ಕುರಿತ ವಿಡಿಯೋವನ್ನು ಸಚಿನ್ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಫ್ಲಾಟ್‌ನ ಹೊರಗೆ ಇಟ್ಟಿದ್ದ ಶೂಗಳನ್ನು ಕಳ್ಳತನ ಮಾಡಿದ ಡೆಲಿವರಿ ಬಾಯ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಫ್ಲಾಟ್ ಒಂದರಲ್ಲಿ ಪಾರ್ಸೆಲ್ ಕೊಟ್ಟು ಬರುವಾಗ ಡೆಲಿವರಿ ಬಾಯ್ ಅಲ್ಲೇ ಮೆಟ್ಟಿಲಿನ ಬದಿಯಲ್ಲಿದ್ದ ಶೂ ರ್ಯಾಕ್‌ನಿಂದ ಒಂದು ಜೋಡಿ ಶೂವನ್ನು ಕದ್ದು, ಅದನ್ನು ಮೆಲ್ಲಗೆ ತನ್ನ ಬ್ಯಾಗ್ ಒಳಗಿಟ್ಟು ಅಲ್ಲಿಂದ ಎಸ್ಕೇಪ್ ಆಗುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಸೊಂಟದ ಮೇಲೆ ಕ್ಯೂಆರ್ ಕೋಡ್ ಟ್ಯಾಟೂ ಹಾಕಿಸಿಕೊಂಡ ಖ್ಯಾತ ಗಾಯಕಿ, ಇದರ ವಿಶೇಷತೆ ಏನು?
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್ 22 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಒಂದೊಂದು ಬಾರಿ ಹೆಗಲ ಮೇಲಿನ ಜವಬ್ದಾರಿಗಳು ಈ ಕೆಲಸವನ್ನು ಮಾಡಿಸುತ್ತವೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಆ ಯುವಕ ಹೀಗೆ ಮಾಡಿರಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ