Viral: ಸೊಂಟದ ಮೇಲೆ ಕ್ಯೂಆರ್ ಕೋಡ್ ಟ್ಯಾಟೂ ಹಾಕಿಸಿಕೊಂಡ ಖ್ಯಾತ ಗಾಯಕಿ, ಇದರ ವಿಶೇಷತೆ ಏನು?
ವರ್ಷಗಳ ಹಿಂದೆ ಅಮೇರಿಕಾದ ಪಾಪ್ ಗಾಯಕಿ ಕೇಟಿ ಪೆರ್ರಿ ತೋಳಿನ ಮೇಲೆ ಸಂಸ್ಕೃತದಲ್ಲಿ ಹಚ್ಚೆ ಹಾಕಿಸಿಕೊಂಡು ಸಖತ್ ಸುದ್ದಿಯಲ್ಲಿದ್ದರು. ಇದೀಗ ಅವರು ಮತ್ತೊಮ್ಮೆ ತಮ್ಮ ಟ್ಯಾಟೂ ವಿಚಾರದಲ್ಲಿಯೇ ಸುದ್ದಿಯಲ್ಲಿದ್ದಾರೆ. ಹೌದು ಇತ್ತೀಚಿಗೆ ನಡೆದ 2024 ರ ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಸೊಂಟದ ಹಿಂಬದಿಯ ಮೇಲಿನ ಟ್ಯಾಟೂ ಕಾಣಿಸುವಂತೆ ಕ್ಯಾಮೆರಾಗೆ ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದು, ಈ ಫೋಟೊಗಳು ಸಖತ್ ವೈರಲ್ ಆಗುತ್ತಿವೆ.
ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಅಮೆರಿಕದ ಖ್ಯಾತ ಗಾಯಕಿ ಕೇಟಿ ಪೆರ್ರಿ ಇದೀಗ ತಾವು ಹಾಕಿಸಿಕೊಂಡಂತಹ ಹೊಸ ಟ್ಯಾಟೂವಿನಿಂದಲೇ ಸಖತ್ ಸುದ್ದಿಯಲ್ಲಿದ್ದಾರೆ. ವರ್ಷಗಳ ಹಿಂದೆ ತನ್ನ ಕೇಟಿ ಪೆರ್ರಿ ತನ್ನ ತೋಳಿನ ಮೇಲೆ ಸಂಸ್ಕೃತದಲ್ಲಿ ಟ್ಯಾಟು ಹಾಕಿಸಿಕೊಂಡು ಸುದ್ದಿಯಲ್ಲಿದ್ದರು. ಇದೀಗ ಅವರು ತನ್ನ ಸೊಂಟದ ಮೇಲೆ ಕ್ಯೂಆರ್ ಕೋಡ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇತ್ತೀಚಿಗೆ ನಡೆದ 2024 ರ ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆನ್ನು ಹುರಿ ಮೇಲಿನ ಟ್ಯಾಟೂ ಕಾಣಿಸುವಂತೆ ಕ್ಯಾಮೆರಾಗೆ ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದು, ಈ ಫೋಟೊಗಳು ಸಖತ್ ವೈರಲ್ ಆಗುತ್ತಿವೆ.
ತನ್ನ ವಿಶಿಷ್ಟ ಹಾಡು ಹಾಗೂ ಸೌಂದರ್ಯದಿಂದಲೇ ಸಖತ್ ಸುತ್ತಿಯಲ್ಲಿರುವ ಪಾಪ್ ತಾರೆ ಕೇಟಿ ಪೆರ್ರಿ ಇದೀಗ ತಾನು ಸೊಂಟದ ಮೇಲೆ ಹಾಕಿಸಿಕೊಂಡಂತಹ ಕ್ಯೂಆರ್ ಕೋಡ್ ಟ್ಯಾಟೂ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ವರ್ಷದ ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಪತಿಯೊಂದಿಗೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಕೇಟಿ ತನ್ನ ಸೊಂಟದ ಮೇಲಿನ ಕ್ಯೂಆರ್ ಕೋಡ್ ಟ್ಯಾಟೂ ಕಾಣಿಸುವ ಹಾಗೆ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ.
Katy Perry has a QR Code “tattooed” on her back #VMAs pic.twitter.com/bPTwI3Olz6
— Katy Perry Activity (@KatyActivity) September 11, 2024
ಈ ಕುರಿತ ಪೋಸ್ಟ್ ಒಂದನ್ನು KatyActivity ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ತನ್ನ ಬೆನ್ನಿನ ಮೇಲೆ ಕ್ಯೂಆರ್ ಟ್ಯಾಟೂ ಹಾಕಿಸಿದ ಕೇಟಿ ಪೆರ್ರಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಪಾಪ್ ಗಾಯಕಿಯ ಈ ಕ್ಯೂಆರ್ ಹಚ್ಚೆಯ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಕೇಟಿ ಪೆರ್ರಿ ಅಭಿಮಾನಿಗಳು ಈ ಕ್ಯೂಆರ್ ಕೋಡ್ ಟ್ಯಾಟೂ ಅರ್ಥವೇನಪ್ಪಾ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗಂಡ ಪ್ರತಿದಿನ ಸ್ನಾನ ಮಾಡೊಲ್ಲ, ಮದುವೆಯಾದ 40 ದಿನಕ್ಕೆ ಡಿವೋರ್ಸ್ ಕೇಳಿದ ಮಹಿಳೆ
ಕೇಟಿ ಹಾಕಿಸಿಕೊಂಡಿರುವ ಈ ಡಿಜಿಟಲ್ ಟ್ವಿಸ್ಟ್ ಹೊಂದಿರುವ ಹಚ್ಚೆ ಕೇವಲ ಫ್ಯಾಶನ್ ಸ್ಟೇಟ್‌ಮೆಂಟ್ ಮಾತ್ರವಲ್ಲದೆ ಇದು ಆಕೆಯ ಮುಂಬರುವ ಆಲ್ಬಮ್ “143” ಗೂ ಸಂಬಂಧಿಸಿದೆ. ಹೌದು ಇದು 134 ಯ ಪ್ರೀ-ಸೇವ್ ಪುಟಕ್ಕೆ ಲಿಂಕ್ ಮಾಡುವಂತಹ ಕ್ಯೂಆರ್ ಕೋಡ್ ಆಗಿದ್ದು, ಈ ಮುಖಾಂತರ ಸೆಪ್ಟೆಂಬರ್ 20 ರಂದು ಬಿಡುಗಡೆಯಾಗಲಿರುವ ʼ143ʼ ಅಲ್ಬಾಮ್ ಅನ್ನು ವಿಶಿಷ್ಟ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ