Viral: ಮನುಷ್ಯರ ಸಹವಾಸ ಯಾಕ್‌ ಬೇಕಪ್ಪಾ, ಹಾವುಗಳೊಂದಿಗೆ ಬರ್ತ್‌ ಡೇ ಪಾರ್ಟಿ ಮಾಡಿದ ವ್ಯಕ್ತಿ

ಬಹುತೇಕ ನಾವೆಲ್ರೂ ಹಾವುಗಳೆಂದರೆ ಸಿಕ್ಕಾಪಟ್ಟೆ ಭಯ ಪಡ್ತೇವೆ. ಇನ್ನೇನಾದ್ರೂ ಸಣ್ಣ ಪುಟ್ಟ ಹಾವುಗಳು ಕಣ್ಣೆದುರಿಗೆ ಕಾಣಿಸಿಕೊಂಡ್ರೂ ಕೂಡಾ ಮಾರು ದೂರ ಓಡಿ ಹೋಗುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ದೈತ್ಯ ಹೆಬ್ಬಾವುಗಳ ಜೊತೆಗೆಯೇ ಜಾಲಿಯಾಗಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈತನ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಮನುಷ್ಯರ ಸಹವಾಸ ಯಾಕ್‌ ಬೇಕಪ್ಪಾ, ಹಾವುಗಳೊಂದಿಗೆ ಬರ್ತ್‌ ಡೇ ಪಾರ್ಟಿ ಮಾಡಿದ ವ್ಯಕ್ತಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 10:36 AM

ಸಾಮಾನ್ಯವಾಗಿ ನಾವೆಲ್ಲರೂ ಹುಟ್ಟುಹಬ್ಬದ ದಿನ ಫ್ರೆಂಡ್ಸ್‌ ಹಾಗೂ ಫ್ಯಾಮಿಲಿ ಜೊತೆ ಸೇರಿ ಬರ್ತ್‌ ಡೇ ಪಾರ್ಟಿ ಮಾಡುತ್ತೇವೆ. ಇನ್ನೂ ಕೆಲವರು ಈ ವರ್ಷದ ಬರ್ತ್‌ ಡೇ ತುಂಬಾನೇ ವಿಶೇಷವಾಗಿರ್ಲಿ ಅಂತ ಅನಾಥಾಶ್ರಮದಲ್ಲಿನ ಅಥವಾ ವೃದ್ಧಾಶ್ರಮದಲ್ಲಿನ ಮುಗ್ಧ ಜೀವಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಈ ಮನುಷ್ಯರ ಸಹವಾಸ ಯಾಕ್‌ ಬೇಕಪ್ಪಾ ಎಂದು ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎನ್ನುತ್ತಾ ದೈತ್ಯ ಹೆಬ್ಬಾವುಗಳ ಜೊತೆ ಜಾಲಿಯಾಗಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದಿ ರೆಪ್ಟಿಲ್‌ ಮೃಗಾಲಯದ ಸಂಸ್ಥಾಪಕ ಹಾಗೂ ಪ್ರಾಣಿ ಪ್ರಿಯ ಆಗಿರುವ ಅಮೇರಿಕಾದ ಜೇ ಬ್ರೂವರ್‌ (jay brewer) ದೈತ್ಯ ಹೆಬ್ಬಾವುಗಳೊಂದಿಗೆ ತಮ್ಮ ಬರ್ತ್‌ ಡೇ ಪಾರ್ಟಿಯನ್ನು ಮಾಡಿದ್ದು, ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಜೇ ಯಾವುದೇ ಭಯವಿಲ್ಲದೆ ದೈತ್ಯ ಹೆಬ್ಬಾವುಗಳ ಜೊತೆ ಹಾಯಾಗಿ ಮಲಗಿರುವ ದೃಶ್ಯವನ್ನು ಕಾಣಬಹುದು. ಮೊದಲೇ ಪ್ರಾಣಿ ಪ್ರಿಯರಾಗಿರು ಜೇ ಈ ವರ್ಷ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಎಂದು ದೈತ್ಯ ಹೆಬ್ಬಾವುಗಳ ರಾಶಿಯ ಜೊತೆ ಮಲಗಿ ವಿಶಿಷ್ಟವಾಗಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾರೆ.

ಇದನ್ನೂ ಓದಿ; ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸುವಾಗ ಹಸಿವೆಂದು ಕೂಗಿದ ಕಳ್ಳನಿಗೆ ತನ್ನ ಕೈಯಾರೆ ಊಟ ತಿನ್ನಿಸಿದ ಯುವಕ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸೆಪ್ಟೆಂಬರ್‌ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾವುಗಳು ಕೂಡಾ ನಿಮ್ಮನ್ನು ತುಂಬಾ ಪ್ರೀತಿಸುತ್ತವೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಓಹ್‌ ನೀವು ನನ್ನ ಸಂಬಂಧಿಕ ಜೊತೆ ಪಾರ್ಟಿ ಮಾಡ್ತಿದ್ದಿರಿ ಅಲ್ವಾʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ