Video: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದ್ರು ವಿಮಾನದಲ್ಲಿ ಪ್ರಯಾಣ ಮಾಡ್ಬೇಕು. ಆ ಅನುಭವ ಹೇಗಿರುತ್ತದೆ ಎಂದು ನೋಡಬೇಕು ಎನ್ನುವುದಿರುತ್ತದೆ. ಇದೀಗ ತಾಯಿಯೊಬ್ಬಳ ಆಸೆಯೂ ಈಡೇರಿದೆ. ಮಗನೊಬ್ಬ ತನ್ನ ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ್ದಾನೆ. ಈ ಹೃದಯ ಸ್ಪರ್ಶಿ ಕ್ಷಣವು ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಾಯಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿದ ಯುವಕ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Jul 31, 2026 | 10:47 AM

ಪ್ರತಿಯೊಬ್ಬ ಮಕ್ಕಳಿಗೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಮ್ಮ ಹೆತ್ತವರನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಹೌದು, ಹೆತ್ತವರ ಸಣ್ಣ ಪುಟ್ಟ ಕನಸುಗಳನ್ನು ನನಸಾಗಿರುವುದರಲ್ಲಿ ಏನೋ ಖುಷಿ. ಇದೀಗ ಮಗನೊಬ್ಬ ತಾಯಿಯನ್ನು ಮೊದಲ ಬಾರಿಗೆ ವಿಮಾನ (flight) ಹತ್ತಿಸಿದ್ದಾನೆ. ತಾಯಿಯ ಜತೆಗೆ ವಿಮಾನ ಪ್ರಯಾಣದ ಭಾವನಾತ್ಮಕ ವಿಡಿಯೋ ಹಂಚಿಕೊಂಡಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಅನ್ಮೋಲ್‌ ಖಾತ್ರಿ (Anmol Khattri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ನನಗೆ 26 ವರ್ಷಗಳು ಬೇಕಾದವು. ಅವರಿಗೆ 50 ವರ್ಷಗಳು ಬೇಕಾದವು. ಅಮ್ಮನ ಮೊದಲ ವಿಮಾನಯಾನ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ತಾಯಿಯ ಜತೆಗೆ ವಿಮಾನ ಪ್ರಯಾಣ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಫ್ಲೈಟ್ ನಲ್ಲಿ ಕುಳಿತು ಕಿಟಕಿಯಿಂದ ಆಚೆಗೆ ನೋಡುತ್ತಿರುವ ದೃಶ್ಯವನ್ನು ಕಾಣಬಹುದು. ಮಗನು ತನ್ನ ತಾಯಿಯ ಕೈ ಹಿಡಿದು ಕುಳಿತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟ ಅಮ್ಮ; ತಾಯಿಯ ತ್ಯಾಗ ನೆನಪಿಸಿಕೊಂಡ ಮಗಳು

ಈ ವಿಡಿಯೋ ಹದಿನಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಮ್ಮನ ಕನಸನ್ನು ಈಡೇರಿಸುವುದಕ್ಕೆ ಯೋಗ ಕೂಡಿ ಬರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೃದಯಕ್ಕೆ ಹತ್ತಿರವಾದ ದೃಶ್ಯ ಎಂದರೆ, ಮತ್ತೊಬ್ಬರು, ನಿಮ್ಮ ಬಗ್ಗೆ ಹೆತ್ತವರಿಗೆ ಖುಷಿ ಅನಿಸುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us