
ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ (Restaurant) ಹೋಗುವ ಮುನ್ನ ಸಾವಿರ ಸಲ ಯೋಚನೆ ಮಾಡ್ತೇನೆ. ಮೊದಲು ನಮ್ಮ ಬಳಿ ಹಣ ಇದೆಯೇ ಎಂದು ನೋಡುತ್ತೇವೆ. ಇದೀಗ ಮುಂಬೈನ ಶಿವಾನಿ ಎಂಬ ಯುವತಿಯು ಊಟಕ್ಕೆ ತನ್ನ ಆಪ್ತರ ಜತೆಗೆ ಹೋಟೆಲ್ ಗೆ ಹೋಗಿದ್ದಾಳೆ. ಊಟ ಮುಗಿಸಿ ಹಣ ಪಾವತಿಸಬೇಕು ಎನ್ನುವಷ್ಟರಲ್ಲಿ ಯುವತಿಗೆ ಬಿಲ್ ನೋಡಿಯೇ ಶಾಕ್ ಆಗಿದೆ. ಹೌದು, ಬಾಂದ್ರಾದಲ್ಲಿ ಮಧ್ಯಾಹ್ನದ ಇಬ್ಬರ ಊಟಕ್ಕೆ ಬರೋಬ್ಬರಿ 4,800 ರೂ ಬಿಲ್ ಪಾವತಿಸಿದ್ದಾಳೆ. ಈ ಬಗ್ಗೆ ಹಂಚಿಕೊಂಡ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಶಿವಾನಿ (Shivani) ಎಂಬ ಯುವತಿ ಎಕ್ಸ್ ಖಾತೆಯಲ್ಲಿ ರೆಸ್ಟೋರೆಂಟ್ ಗೆ ಹೋದಾಗ ತನಗಾದ ಕಹಿ ಅನುಭವ ಹಂಚಿಕೊಂಡಿದ್ದಾಳೆ. ಈ ಪೋಸ್ಟ್‌ನಲ್ಲಿ ಬಾಂದ್ರಾದಲ್ಲಿ ಲಂಚ್‌ಗೆ ಹೋಗಿದ್ದೆ. ಇಬ್ಬರಿಗೆ 4,800 ರೂ ಬಿಲ್ ಆಯ್ತು. ಮನೆಗೆ ಬಂದು ಲೆಕ್ಕ ಹಾಕಿದಾಗ ಕೇವಲ 1 ಗಂಟೆಯಲ್ಲಿ ನನ್ನ 7 ದಿನದ ಸಂಬಳ ಖಾಲಿಯಾಗಿದೆ ಎಂದು ತಿಳಿಯಿತು. ಮುಂಬೈನಲ್ಲಿ ಹೊರಗೆ ಊಟ ಮಾಡುವುದು ಈಗ ಐಷಾರಾಮಿಯಾಗಿದೆಯೇ ಅಥವಾ ನಾನೇ ಬಡವಳಾಗಿದ್ದೇನೆಯೇ? ಎಂದು ನೆಟ್ಟಿಗರಲ್ಲಿ ಕೇಳಿದ್ದಾಳೆ.
ಇದನ್ನೂ ಓದಿ: ರೈಲಿನ 3ಎಸಿ ಕೋಚ್‌ನಲ್ಲಿ ಸ್ಯಾಂಡ್‌ವಿಚ್ ತಯಾರಿಸಿದ ಗುಜರಾತ್‌ನ ಕುಟುಂಬ
ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಐಷಾರಾಮಿ ಹೋಟೆಲ್ ಗೆ ಹೋಗುವ ಮುನ್ನ ಯೋಚಿಸಬೇಕು ಎನ್ನುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ನೀವು ಹೇಳುವುದೇ ನಿಜವೇ, ಇದು ನಿಜಕ್ಕೂ ದುಬಾರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ