26ನೇ ಬಾರಿಗೆ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದ ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ

| Updated By: ಗಂಗಾಧರ​ ಬ. ಸಾಬೋಜಿ

Updated on: May 09, 2022 | 3:55 PM

ಕಾಮಿ ರೀಟಾ ಸೆವೆನ್ ಸಮ್ಮಿಟ್ ಟ್ರೆಕ್ಸ್‌ನಲ್ಲಿ ಹಿರಿಯ ಕ್ಲೈಂಬಿಂಗ್ ಗೈಡ್ ಆಗಿದ್ದಾರೆ. ಮತ್ತು 35 ವರ್ಷಗಳಿಗೂ ಅಧಿಕ ಪರ್ವತಾರೋಹಣ ಅನುಭವವನ್ನು ಹೊಂದಿದ್ದಾರೆ. ರೀಟಾ ಅವರು 1994 ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್​ನ್ನು ಏರಿದ್ದರು.

26ನೇ ಬಾರಿಗೆ ಮೌಂಟ್ ಎವರೆಸ್ಟ್ ಏರುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದ ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ
ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ
Follow us on

ಕಠ್ಮಂಡು : ಸಾಕಷ್ಟು ದಾಖಲೆ ಹೊಂದಿರುವ ನೇಪಾಳಿ ಕ್ಲೈಂಬಿಂಗ್ ಗೈಡ್ ಕಾಮಿ ರೀಟಾ ಶೆರ್ಪಾ ಅವರು 26ನೇ ಬಾರಿ ಮೌಂಟ್ ಎವರೆಸ್ಟ್​ನ್ನು ಏರುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಠ್ಮಂಡುವಿ ನ್ಯೂಸ್​ ವಾಹಿನಿ ಪೋಸ್ಟ್ ಮಾಡಿರುವ ಪ್ರಕಾರ, 52 ವರ್ಷದ ಆರೋಹಿ ನೇಪಾಳಿಯ  11 ಸದಸ್ಯರ ತಂಡದೊಂದಿಗೆ ಶನಿವಾರ ಸಂಜೆ 8,848.86 ಮೀಟರ್‌ಗಳ ಶಿಖರವನ್ನು ಹತ್ತಿದ್ದಾರೆ. ಕಾಮಿ ರೀಟಾ ತಮ್ಮದೇ ದಾಖಲೆಯನ್ನು ಮುರಿದಿದ್ದು, ಕ್ಲೈಂಬಿಂಗ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ರಾಜಧಾನಿ ಕಠ್ಮಂಡುವಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ತಾರಾನಾಥ್ ಅಧಿಕಾರಿ ಹೇಳಿದ್ದಾರೆ. ಇದು 2022 ರಲ್ಲಿ ವಿಶ್ವದ ಅತಿ ಎತ್ತರದ ಶಿಖರದ ಮೊದಲ ವಸಂತ ಆರೋಹಣವಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಕಾಮಿ ರೀಟಾ ಸೆವೆನ್ ಸಮ್ಮಿಟ್ ಟ್ರೆಕ್ಸ್‌ನಲ್ಲಿ ಹಿರಿಯ ಕ್ಲೈಂಬಿಂಗ್ ಗೈಡ್ ಆಗಿದ್ದಾರೆ. ಮತ್ತು 35 ವರ್ಷಗಳಿಗೂ ಅಧಿಕ ಪರ್ವತಾರೋಹಣ ಅನುಭವವನ್ನು ಹೊಂದಿದ್ದಾರೆ. ರೀಟಾ ಅವರು 1994 ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್​ನ್ನು ಏರಿದ್ದರು. ಮತ್ತು ಅಂದಿನಿಂದ ಪ್ರತಿ ವರ್ಷ ಶಿಖರಕ್ಕೆ ದಂಡಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಕಾಮಿ ರೀಟಾ ಶೆರ್ಪಾ 26 ನೇ ಬಾರಿಗೆ ಮೌಂಟ್ ಎವರೆಸ್ಟ್​ನ್ನು ಏರಿದ್ದು, ಈಗ ಮತ್ತೊಮ್ಮೆ ಅವರ ದಾಖಲೆಯನ್ನು ಮುರಿದಿದ್ದಾರೆ. ನೇಪಾಳದ ಒಳ್ಳೆಯ ಜನರಿಗೆ ಮತ್ತು ಹಿಮಾಲಯವನ್ನು ಏರುವ ವೀರ ಶೆರ್ಪಾಗಳಿಗೆ ಅಭಿನಂದನೆಗಳು ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್ ಹೇಳಿದರು. ರೆಕಾರ್ಡ್ ಹೊಂದಿರುವ ನೇಪಾಳಿ ಮಾರ್ಗದರ್ಶಿ ಕಳೆದ ವರ್ಷ ತನ್ನ ಆರೋಹಣವನ್ನು ರದ್ದುಗೊಳಿಸಿದ್ದರು. ಕಾಮಿ ರೀಟಾ ಮೊದಲ ಬಾರಿಗೆ ಮೇ 13, 1994 ರಂದು ಎವರೆಸ್ಟ್​ನ್ನು ಏರಿದರು.

ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮಿಂಗ್ಮಾ ಶೆರ್ಪಾ, ಕಾಮಿ ರೀಟಾ ಅವರು 8000 ಮೀಟರ್‌ಗಿಂತಲೂ ಹೆಚ್ಚು ಏರುವ ದಾಖಲೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಕಾಮಿ ರೀಟಾ ಎವರೆಸ್ಟ್​ನ್ನು 26 ಬಾರಿ, ಕೆ 2 ಮತ್ತು ಲೋಟ್ಸೆ ತಲಾ ಒಂದು ಬಾರಿ ಶಿಖರವನ್ನು ಏರಿದ್ದಾರೆ ಎಂದು ಕಠ್ಮಂಡು ಪೋಸ್ಟ್ ತಿಳಿಸಿದೆ. ಈ ವರ್ಷ ನೇಪಾಳವು ಪೀಕ್ ಋತುವಿನಲ್ಲಿ ಎವರೆಸ್ಟ್​ನ್ನು ಏರಲು 316 ಪರವಾನಗಿಗಳನ್ನು ನೀಡಿದೆ.

ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:43 pm, Mon, 9 May 22