
ಕೆಲಸದ ಸ್ಥಳದಲ್ಲಿ ಹೇಗಿರಬೇಕು ಎನ್ನುವುದನ್ನು ಈಗಿನ ಹೊಸ ಉದ್ಯೋಗಿಗಳಿಗೆ ಕಲಿಸುವ ಹಾಗೂ ತಿಳಿದುಕೊಳ್ಳುವ ಅಗತ್ಯ ಇದೆ. ಈಗಿನ ಕಾಲದ ಯುವಕ-ಯುವತಿಯರು ವರ್ಕ್ ಪ್ಲೇಸ್ ನಿಯಮಗಳನ್ನು (Workplace rules) ಪಾಲಿಸುವುದು ಕಡಿಮೆ, ಕೆಲಸ ಸ್ಥಳದಲ್ಲಿ ನಮ್ಮ ವರ್ತನೆ ಹೇಗಿರಬೇಕು ಎನ್ನುವ ಸಾಮಾನ್ಯ ಜ್ಞಾನ ಇರಬೇಕು ಎನ್ನುವುದು ಈ ಕಾರಣಕ್ಕೆ, ಇಲ್ಲೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಂಪನಿಗೆ ಸೇರಿಕೊಂಡ ದಿನದಂದೇ ಮ್ಯಾನೇಜರ್ ಮುಂದೆಯೇ ಈ ಹುಡುಗಿ attitude ತೋರಿಸಿದ್ದಾಳೆ. ಇದರಿಂದ ಮ್ಯಾನೇಜರ್ ಫುಲ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಹುಡುಗಿ ಮ್ಯಾನೇಜರ್ಗೆ ವಾಟಪ್ಸ್ನಲ್ಲಿ ಏನೆಂದು ಮೆಸೇಜ್ ಹಾಕಿದ್ದಾಳೆ ಗೊತ್ತಾ? ಮೂರು ತಿಂಗಳ ನಂತರ ಕಂಪನಿಯಲ್ಲಿ ಒಂದು ಪೋಸ್ಟ್ ಖಾಲಿ ಇತ್ತು. ಆ ಪೋಸ್ಟ್ಗೆ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಹೊಸ ಹುಡುಗಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಆ ಹುಡುಗಿ ಬಂದ ದಿನವೇ ಮ್ಯಾನೇಜರ್ಗೆ ಹೀಗೆ ಮೆಸೇಜ್ ಮಾಡಿದ್ದಾಳೆ, ಇಲ್ಲಿದೆ ನೋಡಿ.
ಸರ್ ನನ್ನ ಕೆಲಸ ಮುಗಿತ್ತು, ನಾನು ಈಗ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ನೋಡಬಹುದ ಎಂದು ಮ್ಯಾನೇಜರ್ ಬಳಿ ಕೇಳಿದ್ದಾಳೆ. ಈ ಬಗ್ಗೆ ಸ್ವತಃ ಮ್ಯಾನೇಜರ್ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ” ನನ್ನ ಪಕ್ಕದಲ್ಲೇ ಕೂತು ಸರ್ ನನ್ನ ಕೆಲಸ ಮುಗಿತ್ತು, ನಾನು ರಿಲ್ಸ್ ನೋಡಬಹುದು ಎಂದು ಕೇಳಿದ್ದಾಳೆ” ಎಂದು ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಅನೇಕ ಸೋಶಿಯಲ್ ಮೀಡಿಯಾ ವೈರಲ್ ಪೋಸ್ಟ್ಗಳಲ್ಲಿ ಮ್ಯಾನೇಜರ್ ಬಗ್ಗೆ ದೂರುವುದೇ ಆಗಿತ್ತು. ನಮ್ಮ ಮ್ಯಾನೇಜರ್ ಹೀಗೆ ಮಾಡಿದ್ರು, ಹಾಗೆ ಮಾಡಿದ್ರು, ಆದರೆ ಈಗ ಮ್ಯಾನೇಜರ್ ತಮ್ಮ ಉದ್ಯೋಗಿಗಳ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಮ್ಯಾನೇಜರ್ ಸ್ಕ್ರೀನ್ಶಾಟ್ವೊಂದನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ: ದೀಪಾವಳಿಯಂದು ದೆಹಲಿ ಜಗಮಗಿಸುತ್ತಿದೆ, ಬೆಂಗಳೂರು ಮಂಕಾಗಿದೆ, ಕಾರಣವೇನು?
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಇನ್ನು ಈ ಪೋಸ್ಟ್ ಸಾಮಾಜಿಕ ಜಾಲತಾಣಲ್ಲಿ ವ್ಯಾಪಕವಾಗಿ ಹರಡಿದೆ. ಇದೀಗ ಈ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಇಲ್ಲಿ ಹಿರಿಯ-ಕಿರಿಯ ಎಂಬ ಯಾವುದೇ ತಾರತಮ್ಯ ಇರುವುದಿಲ್ಲ. ಇಲ್ಲಿ ಅವಳಿಗೆ ಅನ್ನಿಸಿದನ್ನು ಮಾಡಿದ್ದಾಳೆ. ಅವಳ ಕೆಲಸ ಮುಗಿಯತು. ಅವಳು ಫ್ರೀ ಇದ್ದಾಗ ಇನ್ಸ್ಟಾಗ್ರಾಮ್ ನೋಡಿದ್ದಾಳೆ. ನೀವು ಹೇಳಿದ್ರ, ಕೇಳಿದ್ರು ಅವರು ವರ್ಕ್ ಸಮಯದಲ್ಲಿ ರಿಲ್ಸ್ ನೋಡಿಯೇ ನೋಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ನನ್ನ ಮ್ಯಾನೇಜರ್ ಕೂಡ ಹೀಗಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು. ನಮ್ಮ ಮ್ಯಾನೇಜರ್ ಎಲ್ಲದಕ್ಕೂ ಗದರಿಸುವವರು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಅವಳಿಗೆ ಕೆಲಸ ಕೊಡಿ ಅಥವಾ ಅವಳನ್ನು ಸ್ಕ್ರಾಲ್ ಮಾಡಲು ಬಿಡಿ. ಆದರೆ ನೀವು ಅವರಿಗೆ ಅಗತ್ಯವಿಲ್ಲ ಎಂದು ಹೇಳಬೇಡಿ ಎಂದು ಹೇಳಿದ್ದಅರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ