Video: ಅಪ್ಪ ನಾನು ನಿನ್ನ ಜತೆಗಿದ್ದೇನೆ, ಮಾತು ಬಾರದ ತಂದೆಗೆ ಮಾತಾದ ಪುಟ್ಟ ಕಂದ
ಹೆಣ್ಣು ಮಕ್ಕಳಿಗೆ ತಂದೆಯಷ್ಟೇ ಅಚ್ಚು ಮೆಚ್ಚು. ತಂದೆಗೂ ಮಗಳೇ ಪ್ರಪಂಚ. ಮಗಳ ಕಷ್ಟದಲ್ಲಿ ಜೊತೆಯಾಗುವ, ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವ ವಿಶಾಲ ಹೃದಯದ ವ್ಯಕ್ತಿ ಅಪ್ಪ. ಆದರೆ ಇಲ್ಲೊಬ್ಬಳು ಮಗಳು ಮಾತು ಬಾರದ ಅಪ್ಪನಿಗೆ ವ್ಯವಹಾರದಲ್ಲಿ ಜೊತೆಯಾಗಿ ನಿಂತಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ತಾಯಿ ತನ್ನ ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ ಮಾತ್ರ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಈ ಹೆಣ್ಣು ಮಕ್ಕಳಿಗೆ ತಂದೆಯೆಂದರೆ (father) ಅಚ್ಚು ಮೆಚ್ಚು. ಮೊದಲ ಹೀರೋ ಅಪ್ಪನೇ ಆಗಿರುತ್ತಾನೆ. ಅಪ್ಪ ಮಗಳ (father daughter bonding) ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಆದರೆ ಈ ವಿಡಿಯೋ ನೋಡಿದ ಮೇಲೆ ನಿಮ್ಮ ಕಣ್ಣು ಒದ್ದೆಯಾಗುತ್ತದೆ. ಮಾತು ಬಾರದ ತಂದೆಗೆ ಮಗಳೇ ಎಲ್ಲಾ ಆಗಿದ್ದಾಳೆ. ಜೀವನ ನಿರ್ವಹಣೆಗಾಗಿ ಪುಟ್ಟ ಅಂಗಡಿ ಇಟ್ಟು ಕೊಂಡಿರುವ ತಂದೆಗೆ ಮಾತು ಬರಲ್ಲ. ಮಗಳು ಅಪ್ಪನ ಜೊತೆಗೆ ನಿಂತು ವ್ಯವಹಾರದಲ್ಲಿ ಸಾಥ್ ನೀಡುತ್ತಾ ಮಗಳೇ ಅಪ್ಪನಿಗೆ ಮಾತಾಗಿದ್ದಾಳೆ. ಈ ಹೃದಯಸ್ಪರ್ಶಿ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ.
ಮಾತುಬಾರದ ತಂದೆಗೆ ವ್ಯವಹಾರದಲ್ಲಿ ಸಾಥ್‌ನೀಡಿದ ಮಗಳು
ಅಡ್ವಾನ್ಸ್ . ಹೋಮಿ ದೇವಾಂಗ ಕಪೂರ್ (@Homidevang31) ಎಂಬುವವರು ಮಾತು ಬಾರದ ಅಪ್ಪನ ವ್ಯವಹಾರದಲ್ಲಿ ಮಗಳು ಸಾಥ್ ನೀಡುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಅಪ್ಪನಿಗೆ ಮಾತು ಬರುವುದಿಲ್ಲ, ಆದರೆ ಅವರ ಮಗಳು ಪ್ರತಿದಿನ ಅಂಗಡಿ ನಡೆಸುತ್ತಾ ಅವರಿಗೆ ಸಹಾಯ ಮಾಡುತ್ತಾಳೆ. ಪಾಣಿಪತ್: ಹಳೆಯ ಬಸ್ ನಿಲ್ದಾಣ, ಸುಕ್ದೇವ್ ನಗರ ಗೇಟ್ 1 ಬಳಿ, ಪರ್ವೀನ್ ಮೆಡಿಕಲ್ ಎದುರು, ನೀವು ಇಲ್ಲೇ ಹತ್ತಿರದಲ್ಲಿದ್ದರೆ, ಏನಾದರೂ ಖರೀದಿಸಿ, ನಿಮ್ಮ ಸ್ವಲ್ಪ ಸಹಾಯವು ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Papa can’t speak, but his daughter runs the shop helping him every day
📍 Panipat: Old Bus Stand, near Shukdev Nagar Gate 1, opposite Parveen Medical
If you’re nearby, buy something A little help can mean a lot 🙏🏻 pic.twitter.com/wfD7f8NgUQ
— Adv. Homi Devang Kapoor (@Homidevang31) October 19, 2025
ಈ ವಿಡಿಯೋದಲ್ಲಿ ಅಪ್ಪನಿಗೆ ಮಾತು ಬಾರದ ಕಾರಣ ಮಗಳು ತನ್ನ ತಂದೆಯೊಂದಿಗೆ ಮೂಕ ಭಾಷೆಯಲ್ಲೇ ವ್ಯವಹರಿಸುವುದನ್ನು ನೋಡಬಹುದು. ರಸ್ತೆ ಬದಿಯಲ್ಲಿ ಇರುವ ಮನೆಯ ಅಲಂಕಾರಿಕ ವಸ್ತುಗಳ ಸಣ್ಣದೊಂದು ಸ್ಟಾಲ್ ಇದಾಗಿದೆ. ಇಲ್ಲಿ ತಂದೆ ಮಗಳು ಇಬ್ಬರೂ ಕುಳಿತು ಅಂಗಡಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಗ್ರಾಹಕರು ಸ್ಟಾಲ್ ಹತ್ರ ಬಂದು ಕೇಳುವುದನ್ನು ತನ್ನ ತಂದೆಗೆ ಮೂಕ ಭಾಷೆಯಲ್ಲಿ ಮಗಳು ವಿವರಿಸಿದ್ದಾಳೆ. ಗ್ರಾಹಕರು ಕಡಿಮೆ ಬೆಲೆಗೆ ಕೆಲವು ವಸ್ತುಗಳನ್ನು ಕೊಡುವಂತೆ ಕೇಳಿದ್ದು ಈ ಬಗ್ಗೆ ತನ್ನ ತಂದೆಗೆ ಮಗಳು ವಿವರಿಸಿದ್ದು ಅಷ್ಟು ಕಡಿಮೆ ಬೆಲೆಗೆ ಕೊಡಲು ಸಾಧ್ಯವಿಲ್ಲ ಎಂದು ತಂದೆ ಮಗಳಿಗೆ ಮೂಕ ಭಾಷೆಯಲ್ಲಿ ವಿವರಿಸುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು
ಅಕ್ಟೋಬರ್ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಅವರ ಮೇಲೆ ಇರಲಿ. ಅವರ ಜೀವನವು ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅಪ್ಪ ಮಗಳ ಬಾಂಧವ್ಯ ಎಷ್ಟು ಸುಂದರವಾಗಿದೆ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಬಹುಷಃ ಅವರ ವ್ಯವಹಾರವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವಿಡಿಯೋ ಸಿಹಿಯಾಗಿದೆ. ಅವಳು ನಿಜವಾಗಿಯೂ ಅಪ್ಪನನ್ನು ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Tue, 21 October 25








