Video: ಅಪ್ಪನಿಗಿತ್ತು ಪುಸ್ತಕ ಓದುವ ಹವ್ಯಾಸ, ಇದು ಮುದ್ದಿನ ಮಗಳ ಬದುಕಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ್ದು ಹೇಗೆ ನೋಡಿ
ಈಗಿನ ಕಾಲದಲ್ಲಿ ಒಂದೋ ಎರಡೋ ಮಕ್ಕಳು, ಹೀಗಾಗಿ ಹೆಚ್ಚು ಮುದ್ದು ಮಾಡಿಯೇ ಬೆಳೆಸುತ್ತಾರೆ. ಹೀಗಾಗಿ ಮಕ್ಕಳಿಗೆ ಕಷ್ಟ, ನೋವಿನ ಅನುಭವ ಆಗುವುದೇ ಇಲ್ಲ. ಆದರೆ ಇದೀಗ ಇಲ್ಲೊಬ್ಬ ಅಪ್ಪನು ಮಗಳಿಗೆ ಕಷ್ಟದ ದಿನಗಳಿಗೆ ಹೇಗೆ ಬದುಕಬೇಕು ಎಂದು ಹೇಳಿಕೊಂಡಿದ್ದಾರೆ. ತಾನು ಓದಿದ ಪುಸ್ತಕದಲ್ಲಿ ಏನಿದೆ ವಿವರಿಸುತ್ತಾ ಆರ್ಥಿಕವಾಗಿ ಸದೃಢವಾಗುವುದು ಹೇಗೆ ಎಂದು ತಿಳಿಸಿದ್ದಾರೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ.

ಈಗಿನ ಕಾಲದ ಮಕ್ಕಳಿಗೆ (children ) ಶಾಲೆ, ಟ್ಯೂಷನ್, ಮನೆ, ಮೊಬೈಲ್ ಬಿಟ್ಟರೆ ಬೇರೇನೂ ತಿಳಿದೇ ಇಲ್ಲ. ಫೋಷಕರು ಕೂಡ ಮಕ್ಕಳ ಬದುಕು ಹಾಗೂ ಭವಿಷ್ಯಕ್ಕೆ ಬೇಕಾದ ಅಗತ್ಯ ಪಾಠಗಳನ್ನು ಕಲಿಸಿಕೊಡುವಲ್ಲಿ ಸೋತಿದ್ದಾರೆ. ಹೀಗಾಗಿ ಮಕ್ಕಳಿಗೆ ಕಷ್ಟಗಳು ಬಂದಾಗ ಹೇಗೆ ಎದುರಿಸಬೇಕು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಇದ್ಯಾವುದರ ಬಗ್ಗೆ ತಿಳಿದೇ ಇಲ್ಲ. ಆದರೆ ಇಲ್ಲೊಬ್ಬ ಅಪ್ಪನು ತನ್ನ ಮಗಳಿಗೆ ಬೇಕಾದ ಜೀವನ ಮೌಲ್ಯ ಹಾಗೂ ಆರ್ಥಿಕವಾಗಿ ಸ್ವಾತಂತ್ರ್ಯರಾಗಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂದು ಹೇಳಿಕೊಟ್ಟಿದ್ದಾನೆ. ಮಗಳ ಉತ್ತಮ ಕೆಲಸಕ್ಕೆ ಜೊತೆಯಾಗಿ ನಿಂತುಕೊಂಡಿದ್ದಾನೆ. ಏಳು ವರ್ಷದ ಪುಟಾಣಿ ಲೆಮನ್ ಜ್ಯೂಸ್ (lemon juice) ಮಾರಾಟ ಮಾಡುವ ಮಟ್ಟಿಗೆ ತಂದೆಯೂ ಸಂಪೂರ್ಣ ಬೆಂಬಲ ನೀಡಿದ್ದಾನೆ. ಅಪ್ಪ ಮಗಳ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
purvaagx ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇನ್‌ಫ್ಲುಯೆನ್ಸರ್ ರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಅಜ್ಜಿಯೊಂದಿಗೆ ಬೀದಿ ಬದಿಯಲ್ಲಿ ಲೆಮನ್ ಜ್ಯೂಸ್ ಮಾರುತ್ತಿದ್ದ 7 ವರ್ಷದ ಬಾಲಕಿಯನ್ನು ಭೇಟಿಯಾದೆ. ನಾನು ಅವಳ ತಂದೆಯನ್ನು ಮಾತನಾಡಿದಾಗ ನಗುತ್ತಲೇ ನೀವು ರಿಚ್ ಡ್ಯಾಡ್ ಪೂವರ್ ಡ್ಯಾಡ್ ಪುಸ್ತಕವನ್ನು ಓದಿದ್ದೀರಾ? ಎಂದು ಕೇಳಿದರು. ಆದರೆ ಅವರಿಬ್ಬರೂ ಈ ಪುಸ್ತಕವನ್ನು ಓದುತ್ತಿದ್ದಾರೆ. ಪುಸ್ತಕದಲ್ಲಿರುವ ವಿಷಯಗಳನ್ನು ತಮ್ಮ ಮಗಳಿಗೆ ಹೇಳುತ್ತಿದ್ದಾನೆ ಅಪ್ಪ. ಏಳನೇ ವಯಸ್ಸಿನಲ್ಲಿ, ಅವಳು ಈಗಾಗಲೇ ಆರ್ಥಿಕ ಸ್ವಾತಂತ್ರ್ಯವಾಗಿರುವುದನ್ನು ಕಲಿಯುತ್ತಿದ್ದಾಳೆ. ಈ ರೀತಿಯಾಗಿ ಮಕ್ಕಳನ್ನು ಬೆಳೆಸುವ ಪೋಷಕರು ಇರಬೇಕು. ಮಕ್ಕಳಿಗೆ ಅಂಕಗಳು ಮಾತ್ರವಲ್ಲ, ಮಕ್ಕಳಿಗೆ ಜೀವನ ಮೌಲ್ಯಗಳನ್ನು ಹೇಳಿ ಕೊಡುವ ಹಾಗೂ ಜವಾಬ್ದಾರಿಯುತವಾಗಿ ಜೀವನ ಕಟ್ಟಿಕೊಡಲು ಕಲಿಸುವ ಹೆತ್ತವರು ಇರಬೇಕು ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವೀಡಿಯೋದಲ್ಲಿ ಕಾಣುವಂತೆ ಬೀದಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ನಿಂಬೆಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದಾಳೆ. ಆಕೆಯ ಪಕ್ಕ ಅಜ್ಜಿಯೂ ಕುಳಿತಿದ್ದು, ಫೋಟೋ ತೆಗೆಯಬಹುದಾ ಎಂದು ಇನ್‌ಫ್ಲುಯೆನ್ಸರ್ ಕೇಳಿದ್ದಾರೆ. ಕೊನೆಗೆ ಈ ಬಾಲಕಿಯ ಜ್ಯೂಸ್ ಮಮಾರಾಟ ಮಾಡುತ್ತಿರುವ ಹಿಂದಿನ ಕಾರಣವೇನು? ಈ ರೀತಿ ನಿರ್ಧಾರ ಮಾಡಿದ್ದು ಯಾಕೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾರೆ.
ಈ ಪುಟ್ಟ ಹುಡುಗಿಯ ತಂದೆ ಈ ಬಗ್ಗೆ ಮಾತನಾಡಿದ್ದು, ಅಪ್ಪ ಮಗಳಿಬ್ಬರು ಖ್ಯಾತ ಲೇಖಕ ರಾಬರ್ಟ್ ಕಿಯೋಸಾಕಿ ಅವರ ರಿಚ್ ಡ್ಯಾಡ್ ಪೂವರ್ ಡ್ಯಾಡ್ ಪುಸ್ತಕವನ್ನು ಓದಿದ್ದು ಈ ಕೆಲಸಕ್ಕೆ ಪ್ರೇರಣೆ. ಈ ಪುಸ್ತಕದ ಮೊದಲ ಅಧ್ಯಾಯದಲ್ಲಿ ಇಬ್ಬರೂ ಹುಡುಗರು ಉದ್ಯಮವನ್ನು ಆರಂಭಿಸುವ ಕತೆಯಿದೆ. ಇದುವೇ ಪ್ರೇರಣೆಯಿಂದ ನಾವು ಈ ಉದ್ಯಮವನ್ನು ಆರಂಭಿಸಿದ್ದೇವೆ. ನಾವು ಮುಂದಿನ ಚಾಪ್ಟರ್‌ಗೆ ಹೋಗುವ ಮೊದಲು ಮೊದಲ ಚಾಪ್ಟರ್‌ನ್ನು ವೇರಿಫೈ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನನ್ನ ಮಗಳಿಗೆ 7 ವರ್ಷ, ಅವಳು ಪುಸ್ತಕವನ್ನು ಓದಿದ ಬಳಿಕ ಲೆಮನ್ ಜ್ಯೂಸ್ ಶಾಪ್ ಹಾಕ್ಬೇಕು ಎನ್ನುವ ಆಸೆ ವ್ಯಕ್ತಪಡಿಸಿದಳು. ನಾನು ಆಕೆಗೆ ನಿರಾಸೆ ಮಾಡದೇ, ಮಾಡುವ ಎಂದು ನಾನು ನಿನ್ನನ್ನು ಬೆಂಬಲಿಸಿದೆ ಎಂದು ಹೇಳಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Video: ಶಿಕ್ಷಕರು ಹೋಮ್ ವರ್ಕ್ ಯಾಕೆ ಮಾಡ್ಲಿಲ್ಲ ಎನ್ನುತ್ತಿದ್ದಂತೆ, ಈ ಹುಡುಗನ ಮೈ ಮೇಲೆ ಬಂತು ದೆವ್ವ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು ಇದು ಒಳ್ಳೆಯ ಪೋಷಕರಿಗೆ ನೈಜ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅವಳ ಅಪ್ಪನೇ ಆಕೆಯೇ ಮಾದರಿ ಎಂದಿದ್ದಾರೆ. ನಿಜಕ್ಕೂ ಇವರು ಉತ್ತಮ ಪೋಷಕರು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








