Viral: ಅಮ್ಮ ಹಬ್ಬದ ದಿನವೇ ಬೈಯುತ್ತಾಳೆ, ಬೇಗ ಬನ್ನಿ ಮನೆಯಲ್ಲೇ ಇದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಮಗಳು
ಮಕ್ಕಳು ಮಾಡುವ ಕೆಲವೊಂದು ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ವೈರಲ್ ಆಗುತ್ತ ಇರುತ್ತದೆ. ಇಲ್ಲೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಮ್ಮ ಗದರಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಹಬ್ಬದ ದಿನ ಅಮ್ಮ ನನಗೆ ಇಷ್ಟವಿಲ್ಲದ ಬಟ್ಟೆಯನ್ನು ತಂದು ಧರಿಸಲು ಒತ್ತಾಯಿಸಿದ್ದಾಳೆ. ನಾನು ಅದನ್ನು ಹಾಕುವುದಿಲ್ಲ, ಅಮ್ಮ ಮನೆಯಲ್ಲೇ ಇದ್ದಾಳೆ, ಬೇಗ ಬನ್ನಿ ಎಂದು ಪೊಲೀಸರಿಗೆ ಪೋನ ಮಾಡಿ ಹೇಳಿದ್ದಾಳೆ.

ಮನೆಯಲ್ಲಿ ಒಂದು ಮಗುವನ್ನೇ ನಿಭಾಯಿಸುವುದೇ ಈ ಹೆತ್ತವರಿಗೆ ದೊಡ್ಡ ಸವಾಲು, ಅದರಲ್ಲೂ ಅವಳಿ ಮಕ್ಕಳಿದ್ದರೇ ಮುಗಿಯಿತು ಕಥೆ. ಈ ಮಗು ಮಾಡಿದ ಕೆಲಸಕ್ಕೆ ಪೊಲೀಸರು ಮನೆ ಬರುವಂತಾಗಿದೆ. ಅಮ್ಮ ಬೈದ್ರು ಎಂದು ಸಹಾಯವಾಣಿಗೆ ಫೋನ್ (Child Helpline) ಮಾಡಿ ಈ ಪುಟ್ಟ ಬಾಲಕಿ ದೂರು ನೀಡಿದ್ದಾಳೆ. ನಾಲ್ಕು ವರ್ಷದ ಹೆಣ್ಣು ಮಗು ತನ್ನ ತಾಯಿ ತನಗೆ ಗದರಿದ್ರು ಎಂದು ಅಪ್ಪನ ಫೋನ್ನಿಂದ ಪೊಲೀಸರಿಗೆ ಫೋನ್ ಮಾಡಿದ್ದಾಳೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ರೊಬ್ಬರು ತಮ್ಮ ಮನೆಯಲ್ಲಾದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ನಮಗೆ ಎರಡು ಅವಳಿ ಮಕ್ಕಳು, ಅದರಲ್ಲಿ ಒಂದು ಮಗು ತುಂಬಾ ಪಾಪ, ಶಾಂತ ಸ್ವಾಭಾವದ್ದು. ಇನ್ನೊಂದು ತುಂಬಾ ತುಂಟಾಟ ಹಾಗೂ ಕೋಪ ಹೆಚ್ಚು. ರಕ್ಷಾ ಬಂಧನದ ದಿನ ನಾನು ಮತ್ತು ನನ್ನ ಪತ್ನಿ ಎಲ್ಲಾ ತಯಾರಿ ಮಾಡಿಕೊಳ್ಳುವ ಗಡಿಬಿಡಿಯಲ್ಲಿದ್ದೆವು, ಒಂದು ಕಡೆ ನನ್ನ ಒಬ್ಬಳು ಮಗಳಿಗೆ ಡ್ರೆಸ್ ಮಾಡಿಸುತ್ತಿದ್ದೆ, ನನ್ನ ಪತ್ನಿ ಏನೋ ಕೆಲಸ ಮಾಡಬೇಕಾದರೆ, ನನ್ನ ಮತ್ತೊಂದು ಮಗಳು ಆಕೆಯಲ್ಲಿ ಏನೋ ಕೇಳಿಕೊಂಡಿದ್ದಾಳೆ. ಈ ಸಮಯದಲ್ಲಿ ನನ್ನ ಪತ್ನಿಗೆ ಕೋಪದಿಂದ ಗದರಿದ್ದಾಳೆ. ಇದರಿಂದ ಮಗಳು ಕೋಪಗೊಂಡು ನನ್ನ ಬಳಿ ಬಂದಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಅಪ್ಪ ನನಗೆ ಅಮ್ಮ ಬೈದ್ರು, ನಿಮ್ಮ ಫೋನ್ ಕೊಡು ಎಂದು ಹೇಳಿದ್ದಾಳೆ. ನಾನು ಕೂಡ ಫೋನ್ ಕೊಟ್ಟೆ, ಅವಳು ಪಕ್ಕದ ರೂಮ್ಗೆ ಹೋಗಿ ಸಹಾಯವಾಣಿಗೆ ಫೋನ್ ಮಾಡಿ ಅಮ್ಮನ ಬಗ್ಗೆ ದೂರಿದ್ದಾಳೆ. ಮಕ್ಕಳಿಗೆ ಮನೆಯಲ್ಲಿ ಇಬ್ಬರೇ ಇದ್ದರೆ ಸಹಾಯಕ್ಕೆ ಈ ಸಹಾಯವಾಣಿ ಉಪಯೋಗಿಸಿ ಎಂದು ಹೇಳಿಕೊಟ್ಟಿದೆ. ಆದರೆ ಅವಳು ಅದನ್ನು ಹೀಗೆ ಉಪಯೋಗಿಸಿಕೊಂಡಿದ್ದಾಳೆ. ಸಹಾಯವಾಣಿಗೆ ಫೋನ್ ಮಾಡಿ ತನ್ನ ಅಮ್ಮನ ಬಗ್ಗೆ ದೂರಿದ್ದಾಳೆ. ಅಮ್ಮ ಕೆಟ್ಟವಳು, ಅವಳು ನನಗೆ ಬೈಯುತ್ತಾಳೆ ಎಂದು ಪೊಲೀಸರಿಗೆ ಹೇಳಿದ್ದಾಳೆ. ಯಾಕೆಂದು ಪೊಲೀಸರು ಕೇಳಿದಾಗ, ನನಗಾಗಿ ಖರೀದಿಸಿದ ಬಟ್ಟೆಗಳು ನನಗೆ ಇಷ್ಟವಾಗಲಿಲ್ಲ, ಆದ್ದರಿಂದ ನಾನು ಅದನ್ನು ಧರಿಸುವುದಿಲ್ಲ ಎಂದು ಹೇಳಿದೆ. ಅಮ್ಮ ಈಗ ಮನೆಯಲ್ಲಿ ಇದ್ದಾಳೆ, ನೀವು ಬೇಗ ಬನ್ನಿ, ನಾನು ಅಪ್ಪ-ಅಮ್ಮ ತಂದ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಹೇಳಿ ಪೋನ್ ಇಟ್ಟಿದ್ದಾಳೆ.
ಇದನ್ನೂ ಓದಿ: Video: ನಿಮ್ಮ ಅಪ್ಪ ಸೂಪರ್ ಮ್ಯಾನಾ ಎಂದು ಕೇಳಿದ ಶಿಕ್ಷಕರು, ಕೈ ಮೇಲೆತ್ತಿ ಅಪ್ಪನನ್ನು ಬಿಟ್ಟು ಕೊಡದ ಪುಟಾಣಿಗಳು
ನಂತರ ಅಪ್ಪ-ಅಮ್ಮ ಮುಂದೆ ಬಂದು ನಾನು ಪೊಲೀಸರಿಗೆ ಕರೆ ಮಾಡಿದ್ದೇನೆ, ಅವರು ಮನೆಗೆ ಬರುತ್ತಿದ್ದಾರೆ ಎಂದು ಹೇಳಿದ್ದಾಳೆ. ಈ ಹುಡುಗಿಯ ಮಾತು ಕೇಳಿ ಆಕೆಯ ಮನೆಯವರು ಅಚ್ಚರಿಪಟ್ಟಿದ್ದಾರೆ. ರೆಡ್ಡಿಟ್ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆ ಪುಟ್ಟ ಹುಡುಗಿಯ ಧೈರ್ಯ ಮತ್ತು ಚತುರತೆಗೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಕೆಯ ವಯಸ್ಸಿಗೆ ತುಂಬಾ ಬುದ್ಧಿವಂತಳು ಎಂದು ಹಲವು ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








