AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಿಮ್ಮ ಅಪ್ಪ ಸೂಪರ್ ಮ್ಯಾನಾ ಎಂದು ಕೇಳಿದ ಶಿಕ್ಷಕರು, ಕೈ ಮೇಲೆತ್ತಿ ಅಪ್ಪನನ್ನು ಬಿಟ್ಟು ಕೊಡದ ಪುಟಾಣಿಗಳು

ತಂದೆ ಮಗಳ ನಡುವಿನ ಬಾಂಧವ್ಯವೇ ಹಾಗೆ, ಅದನ್ನು ವಿವರಿಸಲು ಪದಗಳೇ ಸಾಲಲ್ಲ. ಮಗಳಿಗೆ ಅಪ್ಪನೇ ನಿಜವಾದ ಹೀರೋ, ಹೀಗಾಗಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ತನ್ನ ತಂದೆಯನ್ನು ಬಿಟ್ಟು ಕೊಡಲ್ಲ. ಆದರೆ ಪುಟಾಣಿ ಹೆಣ್ಣು ಮಕ್ಕಳು ತಮ್ಮ ಅಪ್ಪ ಸೂಪರ್ ಮ್ಯಾನ್ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Video: ನಿಮ್ಮ ಅಪ್ಪ ಸೂಪರ್ ಮ್ಯಾನಾ ಎಂದು ಕೇಳಿದ ಶಿಕ್ಷಕರು, ಕೈ ಮೇಲೆತ್ತಿ ಅಪ್ಪನನ್ನು ಬಿಟ್ಟು ಕೊಡದ ಪುಟಾಣಿಗಳು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 11, 2025 | 4:31 PM

Share

ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ (father) ಎಲ್ಲವೂ ಆಗಿರುತ್ತಾನೆ. ತಂದೆಗೂ ಮಗಳೆ ತನ್ನ ಪುಟ್ಟ ಪ್ರಪಂಚ. ಹೀಗಾಗಿ ಹೆಣ್ಣು ಮಕ್ಕಳಿಗೆ ಅಪ್ಪ ಜೊತೆಗೆ ಇದ್ದರೆ ಏನೋ ಧೈರ್ಯ. ಮಗಳ ಎಲ್ಲಾ ಆಸೆ ಕನಸುಗಳನ್ನು ಈಡೇರಿಸುವ, ಯಾವುದಕ್ಕೂ ಬೇಡ ಎನ್ನದ ಹೃದಯಶ್ರೀಮಂತಿಕೆಯುಳ್ಳ ಅಪ್ಪ ನಿಜವಾದ ಹೀರೋ ಆಗಿರುತ್ತಾನೆ. ಆದರೆ ನಿಮ್ಮ ಮುದ್ದಿನ ಅಪ್ಪ ಸೂಪರ್ ಮ್ಯಾನ್ (super man) ಆಗಿರುವುದನ್ನು ನೀವು ನೋಡಿದ್ದೀರಾ. ಈ ಪುಟಾಣಿಗಳ ಅಪ್ಪಂದಿರು ಸೂಪರ್ ಮ್ಯಾನ್ ಗಳಂತೆ. ತರಗತಿಯಲ್ಲಿ ಶಿಕ್ಷಕರು ನಿಮ್ಮ ತಂದೆಗೆ ಹಾರುವ ಸಾಮರ್ಥ್ಯವಿದೆಯೇ ಎಂದು ಕೇಳಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳು ತಮ್ಮ ಒಂದು ಕೈಯನ್ನು ಮೇಲಕ್ಕೆತ್ತುವ ಮೂಲಕ ಹೌದು ಎಂದಿದ್ದಾರೆ. ಈ ಮುಗ್ಧ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗುತ್ತಿದೆ.

the.indiantimes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು ಶಾಲಾ ತರಗತಿ ಕೋಣೆಯಲ್ಲಿ ಹುಡುಗ ಹುಡುಗಿಯರು ಕುಳಿತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಶಿಕ್ಷಕರು ಬಾಲಕಿಯರ ಮುಂದೆ ನಿಮ್ಮಲ್ಲಿ ಎಷ್ಟು ಜನರು ನಿಮ್ಮ ಅಪ್ಪ ರಾತ್ರಿ ಸಮಯದಲ್ಲಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಸೂಪರ್ ಮ್ಯಾನ್ ಎಂದು ಭಾವಿಸುತ್ತೀರಾ ಎಂದು ಕೇಳಿದ್ದಾರೆ. ಈ ಹೆಣ್ಣು ಮಕ್ಕಳು ಪ್ರಾಮಾಣಿಕ ಉತ್ತರ ನೀಡಿರುವುದನ್ನು ನೀವಿಲ್ಲಿ ನೋಡಬಹುದು. ಶಿಕ್ಷಕರು ಹೀಗೆ ಪ್ರಶ್ನೆ ಕೇಳುತ್ತಿದ್ದಂತೆ ಪುಟಾಣಿಗಳು ಒಗ್ಗಟ್ಟಿನಲ್ಲಿ ತಮ್ಮ ಕೈಯನ್ನು ಮೇಲಕ್ಕೆತ್ತಿ ಹೌದು ನಮ್ಮಪ್ಪ ಸೂಪರ್ ಮ್ಯಾನ್ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದ ಪುಟಾಣಿ
Image
ಅಪ್ಪನಿಗೆ ಮೇಕಪ್ ಮಾಡೋದ್ರಲ್ಲಿ ಬ್ಯುಸಿ ಈ ಪುಟಾಣಿ
Image
ರೆಕ್ಕೆ ಮುರಿದ ಪಾರಿವಾಳಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದ ಬಾಲಕ
Image
ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ನನ್ನ ಅಪ್ಪ ಸುರಸುಂದರ, ಹೇಗಿದೆ ನನ್ನ ಅಪ್ಪನಿಗೆ ಮಾಡಿದ ಮೇಕಪ್​​​​

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದುವರೆಗೂ ಲಕ್ಷಾತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರು, ಇದೇ ನೋಡಿ ಮಗಳ ಪ್ರೀತಿ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, ಲಾಜಿಕ್ ವರ್ಸಸ್ ಎಮೋಷನ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೆಣ್ಣು ಮಗು ಬೇಕು ಎಂದು ಹೇಳಲು ಕಾರಣವೇ ಇದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ