Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಕಂಡುಹಿಡಿಯಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೋಜಿನ ಆಟ ಅನ್ನೋದೇನೋ ನಿಜ. ಇದು ಮೆದುಳಿಗೆ ಕೆಲಸ ನೀಡುವುದಲ್ಲದೇ, ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಕೆಲವೊಮ್ಮೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಕಣ್ಣನ್ನು ಕೂಡ ಮೋಸಗೊಳಿಸುತ್ತವೆ. ಇದೀಗ ಇಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಏಳು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು.

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (optical illusion) ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇಂತಹ ಅನೇಕ ಚಿತ್ರಗಳು ಕಣ್ಣಿನ ಸೂಕ್ಷ್ಮತೆ ಹಾಗೂ ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಹೀಗಾಗಿ ಹೆಚ್ಚಿನವರು ಈ ಒಗಟಿನ ಚಿತ್ರ ಬಿಡಿಸುವ ಮೂಲಕ ತಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಮುಂದಾಗುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಶ್ವಾನವೊಂದು ಅಡಗಿದೆ. ಹೀಗಾಗಿ ನೀವು ಶ್ವಾನ ಎಲ್ಲಿದೆ ಎಂದು ಹುಡುಕಿ ನೋಡೋಣ. ಈ ಒಗಟಿನ ಚಿತ್ರ ಬಿಡಿಸಲು ಏಳು ಸೆಕೆಂಡುಗಳು ಮಾತ್ರ, ನೀವು ಈ ಸವಾಲನ್ನು ಬಿಡಿಸಲು ಸಿದ್ಧವಿದ್ದೀರಾ.
ಈ ಚಿತ್ರದಲ್ಲಿ ಏನಿದೆ?
ಫೈಂಡ್ ದಿ ಸ್ನೈಪರ್’ ಸಬ್‌ರೆಡಿಟ್‌ನಲ್ಲಿ ಡಿಎಸ್‌ಕ್ರೀಮ್ ಎಂಬ ಬಳಕೆದಾರರು ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ರೂಮ್ ನಂತಿರುವ ಈ ಚಿತ್ರದಲ್ಲಿ ಅಡಗಿರುವ “ನಾಯಿಯನ್ನು ಹುಡುಕಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ತೀಕ್ಷ್ಣ ದೃಷ್ಟಿ ಹೊಂದಿರುವ ಜನರು ಮಾತ್ರ ಏಳು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಬಹುದು.
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಉತ್ತರ ಹೇಳಲು ಪ್ರಯತ್ನ ಪಟ್ಟಿದ್ದಾರೆ. ಒಬ್ಬ ಬಳಕೆದಾರರು ನಾಯಿಯೂ ಕಪ್ಪು ಬಣ್ಣದ ಮ್ಯಾಟ್ ಮೇಲೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾಯಿ ಕಪ್ಪು ಬಣ್ಣದ್ದಾಗಿದ್ದು, ಮ್ಯಾಟ್ ಮೇಲೆ ಇದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಚಿತ್ರದಲ್ಲಿ ಉತ್ತರ ಹುಡುಕುವುದು ಸುಲಭವಾಯಿತು, ನನ್ನ ಕಣ್ಣಿಗೆ ಶ್ವಾನ ಕಂಡಿತು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು 12 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಉತ್ತರ ಇಲ್ಲಿದೆ

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದತ್ತ ಎಷ್ಟೇ ಗಮನ ಹರಿಸಿದರೂ ಕೂಡ ಶ್ವಾನ ಎಲ್ಲಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಬಾಗಿಲ ಮುಂಭಾಗದಲ್ಲಿ ಕಪ್ಪು ಬಣ್ಣದ ಡೋರ್ ಮ್ಯಾಟ್ ಹಾಕಿರುವುದನ್ನು ನೋಡಬಹುದು. ಆದರೆ ಈ ಡೋರ್ ಮ್ಯಾಟ್‌ನನ್ನು ಸರಿಯಾಗಿ ಗಮನಿಸಿ, ಈ ಡೋರ್ ಮ್ಯಾಟ್ ಮೇಲೆ ಕಪ್ಪು ಬಣ್ಣದ ಶ್ವಾನವಿದೆ. ಏಕಾಗ್ರತೆಯಿಂದ ನೋಡಿದರೆ ಈ ಶ್ವಾನವು ನಿಮ್ಮ ಕಣ್ಣಿಗೆ ಕಾಣುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Mon, 11 August 25








