AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಶಿಕ್ಷಕರು ಹೋಮ್ ವರ್ಕ್ ಯಾಕೆ ಮಾಡ್ಲಿಲ್ಲ ಎನ್ನುತ್ತಿದ್ದಂತೆ, ಈ ಹುಡುಗನ ಮೈ ಮೇಲೆ ಬಂತು ದೆವ್ವ

ಈಗಿನ ಕಾಲದ ಮಕ್ಕಳು ಬಾರಿ ಚಾಲಾಕಿಗಳು, ಹೆತ್ತವರನ್ನು ಮಾತ್ರವಲ್ಲ ಶಿಕ್ಷಕರನ್ನು ಕೂಡ ಬೇಗನೇ ಯಾಮಾರಿಸಿ ಬಿಡುತ್ತಾರೆ. ಈ ವಿಡಿಯೋ ನೋಡಿದ ಬಳಿಕ ನಿಮಗೂ ಕೂಡ ಹೀಗೆ ಅನಿಸಬಹುದು. ಶಿಕ್ಷಕರೊಬ್ಬರು ಬಾಲಕನಿಗೆ ಯಾಕೆ ಹೋಮ್ ವರ್ಕ್ ಮಾಡ್ಲಿಲ್ಲ ಎಂದು ಕೇಳುತ್ತಿದ್ದಂತೆ ಈ ಪುಟ್ಟ ಹುಡುಗ ಏನ್ ಮಾಡಿದ್ದಾನೆ ಗೊತ್ತಾ? ಈತನ ಈ ಆಕ್ಟಿಂಗ್ ಲೆವೆಲ್ ನೋಡಿ ಎಲ್ಲರೂ ಶಾಕ್ ಆಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಶಿಕ್ಷಕರು ಹೋಮ್ ವರ್ಕ್ ಯಾಕೆ ಮಾಡ್ಲಿಲ್ಲ ಎನ್ನುತ್ತಿದ್ದಂತೆ, ಈ ಹುಡುಗನ ಮೈ ಮೇಲೆ ಬಂತು ದೆವ್ವ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 17, 2025 | 5:46 PM

Share

ಈಗಿನ ಮಕ್ಕಳು ಎಷ್ಟು ಬುದ್ಧಿವಂತರು, ಅಷ್ಟೇ ಖತರ್ನಾಕ್ ಆಗಿ ಯೋಚಿಸುತ್ತಾರೆ. ಅದರಲ್ಲಿ ಈ ಪುಟಾಣಿಗಳಿಗೆ ಹೋಮ್ ವರ್ಕ್ (home work) ಮಾಡುವಾಗ ಇದರಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಐಡಿಯಾಗಳು ತಲೆಯಲ್ಲಿ ಬರುತ್ತದೆ. ಆದರೆ ಈ ಮಕ್ಕಳನ್ನು ಸ್ವಲ್ಪ ಸಡಿಲ ಬಿಟ್ಟರೆ ಹೆತ್ತವರು ಹಾಗೂ ಶಿಕ್ಷಕರ ತಲೆ ಮೇಲೆ ಕೂರುತ್ತಾರೆ. ಇದೀಗ ಈ ವಿಡಿಯೋ ನೋಡಿದ್ರೆ ಹೋಮ್ ವರ್ಕ್ ಮಾಡದೇ ಶಾಲೆಗೆ ಬಂದ ಹುಡುಗನು ಅದರ ಸುದ್ದಿ ಕೇಳುತ್ತಿದ್ದಂತೆ ಮೈ ಮೇಲೆ ದೆವ್ವ ಬಂದವನಂತೆ ನಟನೆ ಮಾಡಿದ್ದಾನೆ. ಹುಡುಗನ ಆಕ್ಟಿಂಗ್ ನೋಡಿ ಶಿಕ್ಷಕರು ಶಾಕ್ ಆಗಿ ಹೋಗಿದ್ದಾರೆ.

the daily guru ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಕನ್ನಡ ಮೀಡಿಯಾಂನ ಸರ್ಕಾರಿ ಶಾಲೆಯಂತೆ ಕಾಣುತ್ತಿದ್ದು, ಹುಡುಗನೊಬ್ಬನು ಚೇರ್ ಮೇಲೆ ಕುಳಿತಿಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಶಿಕ್ಷಕರು ಯಾಕೆ ಹೋಮ್ ವರ್ಕ್ ಮಾಡಿಲ್ಲ ಎಂದು ಕೇಳಿದ್ದಾರೆ. ಹೋಮ್ ವರ್ಕ್ ಸುದ್ದಿ ಕೇಳುತ್ತಿದ್ದಂತೆ ಮೈ ಮೇಲೆ ದೆವ್ವ ಬಂದಂತೆ ನಟನೆ ಮಾಡಲು ಶುರು ಮಾಡಿದ್ದಾನೆ. ಯಾಕೆ ಹೋಮ್ ವರ್ಕ್‌ ಮಾಡಿಲ್ಲ ಎನ್ನುತ್ತಿದ್ದಂತೆ ಅಪ್ಪನ ಕೇಳು ಎಂದು ಕಣ್ಣುಮುಚ್ಚಿಕೊಂಡು ಉತ್ತರ ನೀಡಿದ್ದಾನೆ.

ಇದನ್ನೂ ಓದಿ
Image
ಕಣ್ಣು ಮುಚ್ಚಿಕೊಂಡು ಮುದ್ದು ಮುದ್ದಾಗಿ ರಾಷ್ಟ್ರಗೀತೆ ಹಾಡಿದ ಪುಟಾಣಿ
Image
ಅಮ್ಮ ನನಗೆ ಗದರುತ್ತಾಳೆ, ಬೇಗ ಬನ್ನಿ, ತಾಯಿ ವಿರುದ್ಧ ದೂರು ನೀಡಿದ ಮಗಳು
Image
ನಿಮ್ಮ ಅಪ್ಪ ಸೂಪರ್ ಮ್ಯಾನಾ ಎಂದು ಕೇಳಿದ ಶಿಕ್ಷಕರು, ಪುಟಾಣಿಗಳ ಉತ್ತರ ನೋಡಿ
Image
ಅತ್ತೆಯನ್ನು ನನ್ನಿಂದ ದೂರ ಮಾಡ್ತಿಯಾ ಎಂದು ಮಾವನಿಗೆ ಪುಟಾಣಿಯ ಕ್ಲಾಸ್‌

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by @the_daily_guruu

ಅಲ್ಲೇ ಇದ್ದ ಶಿಕ್ಷಕರು ಯಾರ ಅಪ್ಪನ ಕೇಳ್ಬೇಕು ಎಂದು ಪ್ರಶ್ನೆ ಕೇಳುತ್ತಿದ್ದಂತೆ ನಾನು ಮೈಮೇಲೆ ಬಂದಿದ್ನಲ್ಲ ಆ ಯುವಕನ ಅಪ್ಪನನ್ನು ಕೇಳು ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು. ಆ ಬಳಿಕ ಈ ಹುಡುಗನು ನಾನು ಹೋಗ್ಬೇಕು ಎಂದು ಹೇಳ್ತಾನೆ. ಇನ್ನು ಸಿನಿಮಾದಲ್ಲಿ ನಟನೆ ಮಾಡಿದ್ದೀಯಾ ಏನು, ನಿನ್ ಹೆಸರೇನಪ್ಪ ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಆತ ಫೋನ್ ಮಾಡಿ ಕೇಳು ಎಂದು ಹೇಳುತ್ತಾನೆ. ಯಾರನ್ನು ಎಂದು ಶಿಕ್ಷಕರು ಕೇಳುತ್ತಿದ್ದಂತೆ ಆತ ಇವರಪ್ಪಂಗೆ ಕಾಲ್ ಮಾಡಿ ಕೇಳು. ನಾನಿದ್ದೀನಲ್ಲ, ಈ ಹುಡುಗನ ಅಪ್ಪನ ಕೇಳು ಅವರಿಗೆ ಗೊತ್ತಾಗುತ್ತೆ ಎಂದು ಹೇಳಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

ನಿನ್ ಹೆಸರೇನು ಎಂದು ಕೇಳಿದ್ರೆ ನಾನು ಹೇಳಲ್ಲ, ನಾನು ಅವರ ಮನೆ ಕಾಯುವುದಕ್ಕೋಸ್ಕರ ಬಂದಿದ್ದೇನೆ ಎಂದು ಹೀಗೆ ಅರ್ಥವಿಲ್ಲದಂತೆ ಏನೇನೋ ಮಾತನಾಡುತ್ತಿದ್ದಾನೆ. ಅಲ್ಲೇ ಇದ್ದ ಶಿಕ್ಷಕಿಯೊಬ್ಬರು ಯಾರಿಗೆ ಫೋನ್ ಮಾಡ್ಬೇಕು ಎಂದು ಕೇಳುತ್ತಿದ್ದಂತೆ, ಅವರಪ್ಪನಿಗೆ ಕಾಲ್ ಮಾಡು ನಾನು ಮೈಮೇಲೆ ಬಂದ ಹುಡುಗನ ಅಪ್ಪನಿಗೆ ಫೋನ್ ಮಾಡಿ ಇದು ನ್ಯಾಯನ ಅಂತ ಕೇಳಿ ಅವರಿಗೆ ಗೊತ್ತು ಎಂದು ಬಾಲಕನ ಈ ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದು.

ಇದನ್ನೂ ಓದಿ: Video: ಕಣ್ಣು ಮುಚ್ಚಿಕೊಂಡು ಮುದ್ದು ಮುದ್ದಾಗಿ ರಾಷ್ಟ್ರಗೀತೆ ಹಾಡಿದ ಪುಟಾಣಿ

ಈ ವಿಡಿಯೋ ಹತ್ತೊಂಭತ್ತು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು,ಒಬ್ಬ ಬಳಕೆದಾರ ಸು ಫ್ರಮ್ ಸೋ ಪಾರ್ಟ್ 2 ಎಂದಿದ್ದಾರೆ. ಇನ್ನೊಬ್ಬರು, ಇವನು ನನಗೆ ಸ್ನೇಹಿತನಾಗಿ ಸಿಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ಹುಡುಗನ ನನ್ನನ್ನು ಖುಷಿ ಪಡಿಸಿದ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ಬಾಲಕನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ