Video: ಕಣ್ಣು ಮುಚ್ಚಿಕೊಂಡು ಮುದ್ದು ಮುದ್ದಾಗಿ ರಾಷ್ಟ್ರಗೀತೆ ಹಾಡಿದ ಪುಟಾಣಿ
ಪುಟಾಣಿಗಳು ಏನು ಮಾಡಿದರೂ ನೋಡೋಕೆ ಚಂದ. ಆದರೆ ಇಲ್ಲೊಬ್ಬಳು ಶಾಲಾ ಸಮವಸ್ತ್ರ ಧರಿಸಿರುವ ಪುಟಾಣಿ ಹುಡುಗಿಯೊಂದು ನಮ್ಮ ದೇಶದ ರಾಷ್ಟ್ರಗೀತೆಗೆ ಕಣ್ಣು ಮುಚ್ಚಿಕೊಂಡು ದನಿಗೂಡಿಸಿರುವ ಹೃದಯದ ಸ್ಪರ್ಶಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಪುಟ್ಟ ಬಾಲಕಿಯೂ ಜನಗಣಮನ ಹಾಡು ಹಾಡುವ ದನಿಗೂಡಿಸಿದ ರೀತಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

ಅರುಣಾಚಲ ಪ್ರದೇಶ, ಆಗಸ್ಟ್ 12: ಕೆಲ ವಿಡಿಯೋಗಳೇ ಹಾಗೆ, ಬಹುಬೇಗನೇ ಎಲ್ಲರ ಮನಸ್ಸನ್ನು ಗೆಲ್ಲುತ್ತವೆ. ಅದರಲ್ಲೂ ಈ ಪುಟಾಣಿಗಳ ಮುಗ್ದತೆ ತುಂಬಿದ ನಡವಳಿಕೆ, ಅವರಾಡುವ ಆಟ ತುಂಟಾಟದ ಹಾಗೂ ವಿಭಿನ್ನ ಪ್ರತಿಭೆಯುಳ್ಳ ಮಕ್ಕಳನ್ನು ಕಂಡಾಗ ಬಾಚಿ ತಪ್ಪಿಕೊಂಡು ಬಿಡಬೇಕು ಎಂದೆನಿಸುವುದು ಸಹಜ. ಆದರೆ ಇದೀಗ ಅರುಣಾಚಲ ಪ್ರದೇಶದ (Arunachal Pradesh) ಪುಟ್ಟ ಬಾಲಕಿಯೊಬ್ಬಳು ತನ್ನ ಸಹಪಾಠಿಗಳ ಜೊತೆ ಸೇರಿ ರಾಷ್ಟ್ರಗೀತೆಯನ್ನು (National Anthem) ಹಾಡಿದ್ದಾಳೆ. ಆದರೆ ಜನಗಣಮನ ಹಾಡುವಾಗ ಕಣ್ಣು ಮುಚ್ಚಿ ಭಾವಪರವಶಳಾಗಿದ್ದು, ಈ ದೃಶ್ಯವು ಎಲ್ಲರ ಗಮನ ಸೆಳೆಯುತ್ತಿದೆ.
ಅರುಣಾಚಲ ಪ್ರದೇಶದ ರಾಜ್ಯ ಬಿಜೆಪಿ ವಕ್ತಾರ ತಮ್ಮ @Mutchu4 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋಗೆ ಹೀಗೆ ಶೀರ್ಷಿಕೆ ನೀಡಿದ್ದಾರೆ. ಅರುಣಾಚಲದಲ್ಲಿ ಸಣ್ಣ ಪ್ರಬಲವಾದ ಧ್ವನಿಯೂ ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಾ, ನಾನು ಭಾರತ, ಭಾರತ ನಾನು ಎಂದು ಇಡೀ ಜಗತ್ತಿಗೆ ಹೇಳುತ್ತಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
A little voice somewhere in Arunachal echoing a mighty nations anthem, letting the world know “I am India and India is me”. Jai Hind.@BJP4Arunachal @BJP4India @PemaKhanduBJP @TheAshokSinghal @KalingMoyongBJP pic.twitter.com/7RRjzRj6BR
— Mutchu Mithi (@Mutchu4) August 7, 2025
ಈ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಪುಟಾಣಿಯೊಂದು ಕಣ್ಣು ಮುಚ್ಚಿಕೊಂಡು ಜೋರಾಗಿ ಕೇಳುತ್ತಿರುವ ರಾಷ್ಟ್ರಗೀತೆಗೆ ಮುದ್ದಾಗಿ ದನಿಗೂಡಿಸಿದೆ. ಮೈಕ್‌ನಲ್ಲಿ ಜನಗಣಮನ ಹಾಡು ಜೋರಾಗಿ ಕೇಳುತ್ತಿದ್ದು, ಈ ಪುಟಾಣಿಯೂ ಹಾಡು ಹಾಡುವುದರಲ್ಲೇ ಮುಳುಗಿ ಹೋಗಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: Video: ಅಜ್ಜ ಅಜ್ಜಿ ಜತೆಗೆ ಮೊಮ್ಮಗಳ ಸಖತ್ ಡ್ಯಾನ್ಸ್
ಈ ಕೆಲವೇ ಕೆಲವು ಸೆಕೆಂಡುಗಳ ಕ್ಲಿಪಿಂಗ್‌ನ್ನು ಆಗಸ್ಟ್ 7 ರಂದು ಶೇರ್ ಮಾಡಿಕೊಳ್ಳಲಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಭಾರತದ ಈ ಹೆಮ್ಮೆಯ ಹೆಣ್ಣುಮಕಕ್ಕಳು ಹಾಗೂ ಪುಟಾಣಿಗಳು ರಾಷ್ಟ್ರದ ಹೆಮ್ಮೆಯ ರಕ್ಷಕರಾಗುತ್ತಾರೆ ಎಂದಿದ್ದಾರೆ. ದೇವರು ಒಳ್ಳೆಯದು ಮಾಡಲಿ, ತುಂಬಾ ಮುದ್ದಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪುಟಾಣಿ ತುಂಬಾ ಮುದ್ದಾಗಿದ್ದಾಳೆ. ಆಕೆಗಿರುವ ಏಕ್ರಾಗತೆ ನೋಡಿ ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








