Video: ಅಜ್ಜ ಅಜ್ಜಿ ಜತೆಗೆ ಮೊಮ್ಮಗಳ ಸಖತ್ ಡ್ಯಾನ್ಸ್
ಅಜ್ಜ ಅಜ್ಜಿಯರ ಜೊತೆಗೆ ಸಮಯ ಕಳೆಯುವುದೆಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟ. ಹೀಗಾಗಿ ಸಮಯ ಸಿಕ್ಕಾಗಲ್ಲೆಲ್ಲಾ ಅಜ್ಜಿ ಮನೆಗೆ ತೆರಳುತ್ತಾರೆ. ಹಿರಿಜೀವಗಳ ಪ್ರೀತಿಯಲ್ಲಿ ಕಳೆದೇ ಹೋಗುತ್ತಾರೆ. ಇದೀಗ ಮೊಮ್ಮಗಳು ತನ್ನ ಮುದ್ದಿನ ಅಜ್ಜ ಅಜ್ಜಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದು, ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ.

ಅಜ್ಜ ಅಜ್ಜಿಯಂದಿರಿಗೆ (grandparents) ಮೊಮ್ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೊಮ್ಮಕ್ಕಳ ಜೊತೆಗೆ ತಾವು ಕೂಡ ಮಗುವಾಗಿ ಬಿಡುತ್ತಾರೆ. ತಮ್ಮ ಮೊಮ್ಮಕ್ಕಳು ಎಷ್ಟೇ ಬೆಳೆದು ನಿಂತರೂ ಅವರಿಗೆ ಯಾವತ್ತಿದ್ದರೂ ಮಕ್ಕಳೇ, ಹೀಗಾಗಿ ಅವರ ಜೊತೆಗೆ ಅತ್ಯಂತ ಪ್ರೀತಿ ಸಲುಗೆಯಿಂದ ವರ್ತಿಸುವುದನ್ನು ನೀವು ನೋಡಿರಬಹುದು. ಇದೀಗ ಕೆನಾಡ ಮೂಲದ ಕಂಟೆಂಟ್ ಕ್ರಿಯೇಟರ್ ಶೆಫಾಲಿ (Content Creator Shefali) ಭಾರತದಲ್ಲಿ ನೆಲೆಸಿರುವ ಅಜ್ಜ ಅಜ್ಜಿಯನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದಿದ್ದಾರೆ. ಆಯೆ ಮೇರಿ ಮೇರಿ ಜೋಹ್ರಾಜಬೀನ್ ಹಾಡಿಗೆ ಲಿವಿಂಗ್ ರೂಮಿನಲ್ಲಿ ಹಿರಿಜೀವಗಳ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
journeywithshefi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೇಟರ್ ಶೆಫಾಲಿ ತಮ್ಮ ಅಜ್ಜ ಅಜ್ಜಿಯೊಂದಿಗೆ ಆಯೆ ಮೇರಿ ಮೇರಿ ಜೋಹ್ರಾಜಬೀನ್ ಹಾಡಿಗೆ ಡ್ಯಾನ್ಸ್ ಮಾಡಿರುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ನನ್ನ ಅಜ್ಜ (ತಾಯಿಯ ತಂದೆ) ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಸ್ವಲ್ಪ ಶ್ರಮ ಹಾಕಿದರೂ ಅವರಿಗೆ ಎದೆ ನೋವು ಉಂಟಾಗುತ್ತದೆ. ಆದರೆ ಅವರು ಯಾವಾಗಲೂ ತುಂಬಾ ಕ್ರಿಯಾಶೀಲ ವ್ಯಕ್ತಿ, ಆದ್ದರಿಂದ ಅವರನ್ನು ಈ ರೀತಿ ನೋಡುವುದು ನಿಜವಾಗಿಯೂ ದುಃಖಕರವಾಗಿತ್ತು ಎಂದು ಬರೆಡುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಹಿಂದೆಂದೂ ನೋಡದೆ, ನಾನು ಅವರ ಬಳಿ ನೀವು ಸಿದ್ಧರಿದ್ದೀರಿಯೇ ಎಂದು ನಾನು ಕೇಳಿದೆ. ಅದಕ್ಕೆ ಅವರು ಖಂಡಿತವಾಗಿಎಂದು ಹೇಳಿದರು ಎಂದಿದ್ದಾರೆ ಶೆಫಾಲಿ. ನಾವು ಲಿವಿಂಗ್ ರೂಮಿನಲ್ಲಿ ಕುಣಿದು ಕುಪ್ಪಳಿಸುತ್ತಿರುವುದು, ಅವರ ಸಂತೋಷ/ನಗುವನ್ನು ನೋಡುವುದು ತುಂಬಾ ಖುಷಿಯಾಯಿತು. ನಿಮಗೆ ಇದು ಮೂರ್ಖತನ ಎನಿಸಬಹುದು. ಆದರೆ ಅಜ್ಜ ಅಜ್ಜಿಯೊಂದಿಗೆ ನೃತ್ಯ ಮಾಡಲು ಇದುವೇ ನಿಮಗೆಹುಮ್ಮಸ್ಸು ನೀಡಬಹುದು. ಈ ವಿಡಿಯೋ ನೀವು ಫಾಲೋ ಮಾಡಿ ಎಂದು ಇಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Viral: ಅಮ್ಮ ಹಬ್ಬದ ದಿನವೇ ಬೈಯುತ್ತಾಳೆ, ಬೇಗ ಬನ್ನಿ ಮನೆಯಲ್ಲೇ ಇದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಮಗಳು
ಈ ವಿಡಿಯೋವನ್ನು ಎಪ್ಪತ್ತು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು, ಹೆತ್ತವರು, ಅಜ್ಜ ಅಜ್ಜಿಯಂದಿರು ಹಾಗೂ ಹಿರಿಯರು ದೇವರ ಸಮಾನ ಎಂದು ಹೇಳಿದ್ದಾರೆ. ನಾನು ನೋಡಿದ ಹೃದಯ ಮುಟ್ಟಿದ ವಿಡಿಯೋ ಇದು, ಈ ವಿಡಿಯೋ ನೋಡಿದ ನಂತರ ನಾನು ನನ್ನ ಅಜ್ಜ ಅಜ್ಜಿಯನ್ನು ಮಿಸ್ ಮಾಡಿಕೊಂಡೆ ಮತ್ತೊಬ್ಬ ಬಳಕೆದಾರ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ವಿಡಿಯೋ ನನ್ನ ಕಣ್ಣನ್ನು ಒದ್ದೆಯಾಗಿಸಿತು. ವಯಸ್ಸಾಡವರು ಮಕ್ಕಳಾಗುತ್ತಾರೆ ಎನ್ನುವುದು ಇದಕ್ಕೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








