Video: ರಾಯಲ್ ಟ್ರೀಟ್ಮೆಂಟ್ ಅಂದ್ರೆ ಇದೆ ಇರ್ಬೇಕು; ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
ಪುಟಾಣಿಗಳು ಹಾಗೆನೇ ಬಿಡಿ, ಪುಸ್ತಕ ಕಂಡರೆ ಓಡಿ ಹೋಗ್ತಾರೆ. ಹೀಗಾಗಿ ತಂದೆತಾಯಂದಿರು ಮಕ್ಕಳ ಜೊತೆಗೆ ಕುಳಿತು ಹೋಮ್ ವರ್ಕ್ ಮಾಡಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಈ ವಿಡಿಯೋದಲ್ಲಿ ಎಲ್ಲಾ ಉಲ್ಟಾ ಆಗಿದೆ. ಪುಟ್ಟ ಹುಡುಗನು ಹಾಯಾಗಿ ಕುಳಿತು ಬಿಸ್ಕೆಟ್ ತಿನ್ನುತ್ತಿದ್ದಾನೆ. ಇತ್ತ ಅಮ್ಮ ಹಾಗೂ ಅಜ್ಜಿ ಮಾಡುತ್ತಿರುವ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ನಾವೆಲ್ಲರೂ ಚಿಕ್ಕವರಿದ್ದಾಗ ಶಾಲೆಗೆ ಹೋಗೋದು, ಓದೋದು ಹಾಗೂ ಹೋಮ್ ವರ್ಕ್ (home work) ಮಾಡುವುದೆಂದರೆ ತಲೆ ನೋವಾಗಿತ್ತು. ಅಮ್ಮನ ಕೈಯಲ್ಲಿ ನಾಲ್ಕು ಏಟು ತಿಂದಾದರೂ ಹೋಮ್ ವರ್ಕ್ ಮಾಡಿ ಮುಗಿಸುತ್ತಿದ್ದೆವು. ಆದರೆ ಈಗಿನ ಕಾಲದ ಮಕ್ಕಳಿಗೆ ಮುದ್ದು ಜಾಸ್ತಿ. ಮಕ್ಕಳು ಹೋಮ್ ವರ್ಕ್ ಮಾಡಲ್ಲ ಎಂದು ಹಠ ಹಿಡಿದರೆ ಅಮ್ಮನೇ ಹೋಮ್ ವರ್ಕ್ ಮಾಡಿಸಿಕೊಡುವಷ್ಟು ಮುದ್ದು ಹೆಚ್ಚಾಗಿದೆ. ಇದಕ್ಕೆ ಈ ವಿಡಿಯೋನೆ ಸಾಕ್ಷಿ. ಮಧ್ಯರಾತ್ರಿ ಸೋಫಾದ ಮೇಲೆ ಕುಳಿತು ಪುಟಾಣಿ ಬಿಸ್ಕೆಟ್ ತಿನ್ನುತ್ತಿದ್ದರೆ, ಇತ್ತ ಈ ಪುಟ್ಟ ಬಾಲಕನ ಅಮ್ಮ ಹಾಗೂ ಅಜ್ಜಿ ಸೇರಿ ಹೋಮ್ ವರ್ಕ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಬಳಕೆದಾರರೂ ನೀವು ಶಾಲೆಗೆ ಹೋಗೋದು ಒಳ್ಳೆಯದು ಎಂದು ತಮಾಷೆ ಮಾಡಿದ್ದಾರೆ.
indianturthh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಮನೆಯ ಬಾಸ್ ಹಿಂದೆ ಕುಳಿತು ಬಿಸ್ಕೆಟ್ ತಿನ್ನುತ್ತಿದ್ದು, ಅಮ್ಮ ಹಾಗೂ ಅಜ್ಜಿ ಹೋಮ್ ವರ್ಕ್ ಮಾಡಿ ಮುಗಿಸುತ್ತಿದ್ದಾರೆ – ಇದು ದೇಸಿ ದಂತಕಥೆಗಳು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಸಮಯ ರಾತ್ರಿ 1-45 ತೋರಿಸುತ್ತಿದೆ. ಪುಟ್ಟ ಹುಡುಗ ಸೋಫಾದ ಮೇಲೆ ಆರಾಮವಾಗಿ ಕುಳಿತಿರುವ ದೃಶ್ಯವಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ಪುಟಾಣಿ ಬಿಸ್ಕೆಟ್ ಪ್ಯಾಕೆಟ್ ಹಿಡಿದು ತಿನ್ನುತ್ತಾ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ. ಇತ್ತ ಈ ಪುಟಾಣಿಯ ತಾಯಿ ನೆಲದ ಮೇಲೆ ನೋಟ್‌ಬುಕ್‌ಗಳನ್ನು ಹರಡಿಕೊಂಡು ಕುಳಿತಿರುವುದು ಕಾಣಬಹುದು. ಮಗನ ಹೋಮ್ ವರ್ಕ್‌ನ್ನು ತಾಯಿಯೇ ಮಾಡುತ್ತಿದ್ದು, ಇತ್ತ ಪುಟಾಣಿಯ ಅಜ್ಜಿಯು ಕೂಡ ತನ್ನಸೊಸೆಗೆ ಸಾಥ್ ನೀಡಿದ್ದಾರೆ. ಅಮ್ಮ ಹಾಗೂ ಅಜ್ಜಿಯೂ ಇಬ್ಬರೂ ಸೇರಿ ಪುಟಾಣಿಯ ಹೋಮ್ ವರ್ಕ್ ಮಾಡುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಅಪ್ಪನ ವರ್ಕ್ ಫ್ರಮ್ ಹೋಮ್ ಸ್ಥಿತಿಗತಿಯನ್ನು ಅನುಕರಣೆ ಮಾಡಿದ ಪುಟಾಣಿ
ಈ ವಿಡಿಯೋ ಅರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಒಬ್ಬ ಬಳಕೆದಾರರು, ಯಾವುದೇ ಕಾರಣಕ್ಕೂ ಓದುವ ವಿಷ್ಯದಲ್ಲಿ ಮುದ್ದು ಮಾಡ್ಬೇಡಿ ಎಂದಿದ್ದಾರೆ. ಇನ್ನೊಬ್ಬರು, ಅವರವರ ಕೆಲಸವನ್ನು ಅವರೇ ಮಾಡಿ ಮುಗಿಸುವಂತೆ ಮಾಡುವುದು ಹೆತ್ತವರ ಜವಾಬ್ದಾರಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮ್ಮ ಮಗ ಸೋಮಾರಿಯಾಗುವುದರಲ್ಲಿ ಡೌಟ್ ಇಲ್ಲ, ತಮಾಷೆಗಾಗಿಯೂ ಈ ರೀತಿ ಕೆಲಸ ಮಾಡ್ಬೇಡಿ ಎಂದು ಕಾಮೆಂಟ್‌ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








