Video: ಚೋಟ ಮಾಸ್ಕ್ ಮ್ಯಾನ್, ಪತ್ತೆಯಾಗದ ಹೊಸ ತಲೆಬುರುಡೆ
ಧರ್ಮಸ್ಥಳದ ಅರಣ್ಯ ಭಾಗಗಳಲ್ಲಿ ಶವ ಹೂತಿಡಲಾಗಿದೆ ಎನ್ನಲಾಗಿರುವ ಪ್ರಕರಣವು ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಹೀಗಿರುವಾಗ ಪುಟಾಣಿಗಳು ಧರ್ಮಸ್ಥಳ ತಲೆಬುರುಡೆ ಕೇಸಿಗೆ ಸಂಬಂಧಪಟ್ಟಂತೆ ಎಸ್‌ಐಟಿ ತಂಡವು ಈ ಶೋಧ ಕಾರ್ಯಾಚರಣೆಯನ್ನು ಹೇಗೆ ನಡೆಸಲಾಗಿತ್ತು ಎನ್ನುವ ದೃಶ್ಯವನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಧರ್ಮಸ್ಥಳದಲ್ಲಿ(Dharmasthala) ನೂರಾರು ಶವಗಳನ್ನು ಹೂತುಹಾಕಿದ್ದಾಗಿ ಅನಾಮಿಕ ವ್ಯಕ್ತಿಯೂ ನೀಡಿದ ದೂರಿನ ಆಧಾರದಲ್ಲಿ ಎಸ್ಐಟಿ ತಂಡವು ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಹದಿನೇಳು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ವೇಳೆ ಎರಡು ಕಡೆ ಮಾತ್ರ ಅಸ್ಥಿಪಂಜರದ ಕುರುಹು ಪತ್ತೆಯಾಗಿತ್ತು. ಆದರೆ ದಿನ ಕಳೆದಂತೆ ಈ ಕೇಸ್ ಸಂಚಲನ ಮೂಡಿಸುತ್ತಿದ್ದು, ಇದೀಗ ಈ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಎಲ್ಲೆಲ್ಲೂ ಮಾಸ್ಕ್ ಮ್ಯಾನ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಆದರೆ ಈ ಪುಟಾಣಿಗಳು (Children) ಸೇರಿ ಈ ಅನಾಮಿಕ ದೂರುದಾರ ಹಾಗೂ ಎಸ್ಐಟಿ ತಂಡದ ಕಾರ್ಯಾಚರಣೆಯನ್ನು ಮರುಸೃಷ್ಟಿಸಿದ್ದಾರೆ. ಇದು ಮಕ್ಕಳಾಟವಾಗಿದ್ದು, ಈ ವಿಡಿಯೋದಲ್ಲಿ ಏನಿದೆ? ಈ ಕುರಿತಾದ ಸ್ಟೋರಿ ಇಲ್ಲಿದೆ.
ತಲೆಬುರುಡೆ ಕೇಸ್‌ನಲ್ಲಿ ಅಪರಿಚಿತ ದೂರುದಾರ ಮಾಸ್ಕ್ ಮ್ಯಾನ್ ಎಲ್ಲರ ಗಮನ ಸೆಳೆದಿದ್ದಾನೆ. ಆದರೆ ಇದೀಗ ಪುಟಾಣಿಗಳು ತಲೆಬುರುಡೆ ಕೇಸ್‌ಗೆ ಸಂಬಂಧ ಪಟ್ಟ ಶೋಧ ಕಾರ್ಯಾಚರಣೆಯ ದೃಶ್ಯವನ್ನು ಮರುಸೃಷ್ಟಿಸಿರುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಒಬ್ಬ ಪುಟಾಣಿ ಅನಾಮಿಕ ದೂರುದಾರನಂತೆ ಮಾಸ್ಕ್ ಧರಿಸಿ ಸ್ಥಳವನ್ನು ತೋರಿಸುತ್ತಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: Video: ಇದೊಂದು ವಿಚಿತ್ರ ಉಷ್ಟ್ರಪಕ್ಷಿ, ಬಾಲಕನ ವೇಷ ನೋಡಿ ಬಿದ್ದು ಬಿದ್ದು ನಕ್ಕ ಜನ
ಉಳಿದ ಪುಟಾಣಿಗಳು ಎಸ್ಐಟಿ ಅಧಿಕಾರಿಗಳಂತೆ ಸ್ಥಳ ಗುರುತು ಮಾಡಿ ಉತ್ಖನನ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಬಹುದು. ಈ ದೃಶ್ಯವು ಶೋಧ ಕಾರ್ಯಾಚರಣೆ ಮಾಡಿದ ರೀತಿಯೇ ಇದ್ದು, ಸದ್ಯಕ್ಕೆ ಪುಟಾಣಿಗಳ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Thu, 21 August 25








