Video: ಇದೊಂದು ವಿಚಿತ್ರ ಉಷ್ಟ್ರಪಕ್ಷಿ, ಬಾಲಕನ ವೇಷ ನೋಡಿ ಬಿದ್ದು ಬಿದ್ದು ನಕ್ಕ ಜನ
ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಆಯೋಜಿಸುವುದು ಸರ್ವೇ ಸಾಮಾನ್ಯ. ತಮ್ಮ ಕ್ರಿಯೇಟಿವಿ ಬಳಸಿ ಮಕ್ಕಳಿಗೆ ಹೆತ್ತವರು ವಿಭಿನ್ನ ವೇಷ ಹಾಕುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬನು ಉಷ್ಟ್ರ ಪಕ್ಷಿ ವೇಷ ಧರಿಸಿ ವೇದಿಕೆಯ ಮೇಲೆ ಬಂದಿದ್ದಾನೆ. ಕೊನೆಗೆ ಆಗಿದ್ದೇನು ಎಂದು ತಿಳಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೇರಳ, ಆಗಸ್ಟ್ 19: ಫ್ಯಾನ್ಸಿ ಡ್ರೆಸ್ ಸ್ಪರ್ಧೆಯು (fancy dress competition) ನಡೆದಾಗ ಪುಟಾಣಿ ಮಕ್ಕಳನ್ನು ವಿಭಿನ್ನ ಹಾಗೂ ವಿವಿಧ ವೇಷಭೂಷಣಗಳಲ್ಲಿ ನೋಡುವುದೇ ಚಂದ. ಕೆಲವು ಪೋಷಕರು ತಮ್ಮ ಮಕ್ಕಳಿಗೆ ವಿಭಿನ್ನವಾದ ವೇಷ ಧರಿಸಿ ಮಕ್ಕಳನ್ನು ರೆಡಿ ಮಾಡುವುದನ್ನು ನೀವು ನೋಡಿರಬಹುದು. ಈ ಮಕ್ಕಳ ಛದ್ಮ ವೇಷ ಸ್ಪರ್ಧೆಯ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಕೇರಳದ ಅಡೂರಿನ ಆಲ್ ಸೇಂಟ್ಸ್ ಪಬ್ಲಿಕ್ ಶಾಲೆಯಲ್ಲಿ (All Saints Public School in Adoor of Kerala) ನಡೆದ ಮಕ್ಕಳ ಛದ್ಮವೇಷದ ಸ್ಪರ್ಧೆಯಲ್ಲಿ ಪುಟ್ಟ ಬಾಲಕನ ಉಷ್ಟ್ರಪಕ್ಷಿಯಂತೆ ವೇಷ ಧರಿಸಿ ತನ್ನ ವಿಭಿನ್ನ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
kailash_mannady ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಉಷ್ಟ್ರಪಕ್ಷಿಯಂತೆ ವೇಷ ಧರಿಸಿ ವೇದಿಕೆಯ ಮೇಲೆ ಬಂದಿದ್ದಾನೆ. ಈ ಪುಟ್ಟ ಬಾಲಕನು ದೊಡ್ಡ ಕೊಕ್ಕು, ಗರಿಗಳಿರುವ ರೆಕ್ಕೆಗಳು ಮತ್ತು ಉದ್ದವಾದ ಕಾಲುಗಳನ್ನು ಹೊಂದಿರುವ ವೇಷವನ್ನು ಧರಿಸಿರುವುದನ್ನು ನೋಡಬಹುದು. ಈ ಪಕ್ಷಿಯೇ ವೇದಿಕೆಯ ಮೇಲೆ ಬಂದಂತೆ ಕಂಡಿದ್ದು, ಇದನ್ನು ಕಂಡ ಜನರು ಜೋರಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಪುಟ್ಟ ಬಾಲಕನು ಆಸ್ಟ್ರಿಚ್‌ನಂತೆ ಮೊಟ್ಟೆ ಇಡುವುದನ್ನು ಅಭಿನಯಿಸಿದ್ದು, ತನ್ನ ಎರಡು ಕಾಲುಗಳ ನಡುವೆ ಇದ್ದ ಬಲೂನ್ ಕೆಳಗೆ ಬೀಳಿಸಿಕೊಂಡಿದ್ದಾನೆ. ಇದನ್ನೂ ನೋಡಿದ ಪ್ರೇಕ್ಷಕ ವರ್ಗ ಜೋರಾಗಿ ನಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಾರಂಭದಿಂದಲೂ ಈ ಪುಟಾಣಿ ತೊಂದರೆ ಅನುಭವಿಸಿದ್ದು ಪ್ರತಿಯೊಂದು ಹಂತದಲ್ಲೂ ಶಿಕ್ಷಕರು ಮಾರ್ಗದರ್ಶನ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ 3.7 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಬಳಕೆದಾರರೊಬ್ಬರು, ಇದು ನಿಜಕ್ಕೂ ಅಪ್ಪನದ್ದೇ ಐಡಿಯಾ ಇರಬೇಕು ಎಂದಿದ್ದಾರೆ. ಈ ಪುಟ್ಟ ಬಾಲಕನಿಗೆ ಆಸ್ಕರ್ ಅವಾರ್ಡ್ ನೀಡಿ, ಪ್ರಶಸ್ತಿಯು ದೊಡ್ಡದೇ ಇರಲಿ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಅದ್ಭುತ ಪ್ರದರ್ಶನ, ಬಲೂನ್ ಹಿಡಿದುಕೊಂಡು ಪ್ರದರ್ಶನ ನೀಡುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








