Video: ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಮರಿಯಾನೆ
ಯಾರಾದ್ರೂ ಗೊರಕೆ ಹೊಡೆದ್ರೆ ನಮಗೆ ಕಿರಿಕಿರಿ ಎನಿಸುತ್ತದೆ. ಆದರೆ ಈ ಮರಿಯಾನೆಯೊಂದು ನಿದ್ದೆಯಲ್ಲಿ ಗೊರಕೆ ಹೊಡೆಯುವುದನ್ನು ನೋಡಿದ್ರೆ ಎಷ್ಟು ಮುದ್ದಾಗಿದೆ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತೇವೆ. ನೋಡಲು ಮುದ್ದು ಮುದ್ದಾಗಿರುವ ಮರಿಯಾನೆ ಗೊರಕೆ ಹೊಡೆಯುವ ಈ ವಿಡಿಯೋ ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ. ಈ ವಿಡಿಯೋ ಕುರಿತಾದ ಸ್ಟೋರಿ ಇಲ್ಲಿದೆ.

ನಿಮ್ಮ ಪಕ್ಕ ಮಲಗಿಕೊಂಡವರು ಯಾರಾದ್ರೂ ಗೊರಕೆ ಹೊಡೆಯುತ್ತಿದ್ದರೆ ಎಷ್ಟೇ ಕಣ್ಣು ಮುಚ್ಚಿದ್ರೂ ನಿದ್ದೆಯಂತೂ ಬರುವುದೇ ಇಲ್ಲ. ಹೇಗೇಗೋ ಸಾಹಸ ಮಾಡಿ ಕಣ್ಣು ಮುಚ್ಚಿ ನಿದ್ರೆ ಮಾಡಿದ್ರು ಈ ಸೌಂಡ್‌ಗೆ ನಿದ್ದೆ ಓಡಿ ಹೋಗುತ್ತದೆ. ಆದರೆ ಇಲ್ಲೊಂದು ಮರಿಯಾನೆಯು (baby elephant) ನಿದ್ದೆಗೆ ಜಾರಿದ್ದು, ಗೊರಕೆ ಹೊಡೆದಿದೆ. ಮರಿಯಾನೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಪ್ರಾಣಿಗಳು ಗೊರಕೆ ಹೊಡೆಯುತ್ತಾ ಎಂದು ಕೆಲವರು ಕೇಳಿದ್ದಾರೆ.
ಗೊರಕೆ ಹೊಡೆಯುತ್ತಿರುವ ಮರಿಯಾನೆ
wildliferescuers ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಜೋಳಿಗೆಯಲ್ಲಿ ಮಲಗಿ ಪುಟಾಣಿ ಆನೆಯೊಂದು ಗಡದ್ದಾಗಿ ನಿದ್ದೆಗೆ ಜಾರಿದೆ. ಈ ವೇಳೆಯಲ್ಲಿ ಮರಿಯಾನೆ ಗೊರಕೆ ಹೊಡೆದಿದ್ದು, ಈ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದೊಂದಿಗೆ ಹೀಗೆ ಬರೆದುಕೊಳ್ಳಲಾಗಿದೆ. ರಕ್ಷಿಸಲ್ಪಟ್ಟ ಮರಿ ಆನೆಯೊಂದು ಥೈಲ್ಯಾಂಡ್‌ನ ಆನೆ ಅಭಯಾರಣ್ಯದಲ್ಲಿ, ನಿದ್ರೆಯ ವೇಳೆ ಗೊರಕೆ ಹೊಡೆಯುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಮಕ್ಕಳಂತೆ ಈ ಪುಟಾಣಿ ಆನೆಗಳು ನಿದ್ರೆಯಲ್ಲಿ ಗೊರಕೆ ಹೊಡೆಯುತ್ತವೆ. ಅವುಗಳು ಉಸಿರಾಡುವಾಗ ಅಥವಾ ಪಕ್ಕಕ್ಕೆ ಇಲ್ಲವಾದರೆ ಬೆನ್ನಿನ ಮೇಲೆ ಮಲಗಿರುವಾಗ ಅವುಗಳ ವಾಯುಮಾರ್ಗಗಳು ಕಂಪಿಸುತ್ತವೆ. ಹೀಗಾಗಿ ಈ ಶಬ್ದವು ಜೋರಾಗಿ ಮತ್ತು ಮುದ್ದಾಗಿಯೇ ಕೇಳಿಸುತ್ತವೆ. ಈ ಪ್ರಾಣಿಗಳು ಸುರಕ್ಷಿತವಾದ ಅನುಭವವಿದ್ದಾಗ ಎಷ್ಟು ಆರಾಮವಾಗಿ ನಿದ್ದೆಗೆ ಜಾರುತ್ತವೆ ಹಾಗೂ ಮನುಷ್ಯರಂತೆ ನಿದ್ದೆ ಮಾಡುತ್ತವೆ ಎನ್ನುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮರಿಯಾನೆಗಳು ಹುಟ್ಟುವಾಗಲೇ ಸುಮಾರು 200 ಪೌಂಡ್‌ಗಳ ತೂಕ ಇರುತ್ತವೆ. ಹುಟ್ಟಿದ ಕೆಲವೇ ಕೆಲವು ಜಗಂಟೆಗಳಲ್ಲಿ ಅವು ನಿಂತಬಲ್ಲದು ಹಾಗೂ ನಡೆಯಬಲ್ಲದು. ಹೊಸದ್ದನ್ನು ಕಲಿಯುವುದಕ್ಕೆ, ರಕ್ಷಣೆ ಹಾಗೂ ಎಲ್ಲಾ ರೀತಿಯ ಸೌಕರ್ಯಕ್ಕಾಗಿ ತಾಯಂದಿರು ಹಿಂಡಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತವೆ. ಈ ಮರಿಯಾನೆಗಳು ಕೆಲವು ತಿಂಗಳವರೆಗೆ ಹಾಲು ಕುಡಿಯುತ್ತವೆ, ಆ ಬಳಿಕ ಹುಲ್ಲು ಮತ್ತು ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ. ತುಂಟಾಟಗಳ ಮೂಲಕ ಪಕ್ಷಿಗಳನ್ನು ಬೆನ್ನಟ್ಟುವುದು, ನೀರಿನಲ್ಲಿ ಆಟವಾಡುವುದು, ಸೊಂಡಿಲನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳುತ್ತವೆ. ಆರೈಕೆಯಲ್ಲಿ ಬೆಳೆಯುವ ಆನೆಗಳು ಕೆಲವೇ ಕೆಲವು ವರ್ಷಗಳಲ್ಲಿ ಈ ಭೂಮಿಯ ದೈತ್ಯ ಪ್ರಾಣಿಯಾಗುತ್ತವೆ ಎಂದಿದ್ದಾರೆ.
ಇದನ್ನೂ ಓದಿ: Video: ತಾಯಿಯ ಧ್ವನಿ ಕೇಳುತ್ತಿದ್ದಂತೆ ಓಡೋಡಿ ಬಂದು ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ
ಈ ವಿಡಿಯೋವನ್ನು ನಲವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನೋಡಲು ನನ್ನ ಕಿರಿಯ ಸಹೋದರನಂತೆ ಇದೆ ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಮತ್ತೊಬ್ಬರು ನನ್ನ ಅಜ್ಜ ಮನೆಯಲ್ಲಿ ಹೀಗೆಯೇ ಇರುತ್ತಾರೆ ಎಂದಿದ್ದಾರೆ. ನೋಡೋದಕ್ಕೆ ಖುಷಿಯಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Mon, 18 August 25








