Optical Illusion: ಈ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ನೀವು ಗುರುತಿಸಬಲ್ಲಿರಾ?
ದೃಷ್ಟಿ ಹಾಗೂ ಬುದ್ಧಿ ಸಾಮರ್ಥ್ಯವನ್ನು ಪರೀಕ್ಷಿಸುವ ಒಗಟಿನ ಆಟಗಳನ್ನು ಬಿಡಿಸುವುದೆಂದರೆ ಕೆಲವರಿಗೆ ತುಂಬಾನೇ ಇಷ್ಟ. ಹೀಗಾಗಿ ಬಿಡುವಿನ ಸಮಯದಲ್ಲಿ ಇಂತಹ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಇದೀಗ ಎಐ ರಚಿತ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಎಷ್ಟು ಸಿಂಹಗಳಿವೆ ಎಂದು ಕಂಡುಹಿಡಿಯುವ ಸವಾಲು ನೀಡಲಾಗಿದೆ.

ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ನೋಡಲು ಸರಳವಾಗಿ ಕಂಡರೂ ಅದನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವನ್ನು ನೋಡಿದಾಗ ನಾವು ನೋಡುವುದಕ್ಕಿಂತ ವಿಭಿನ್ನವಾದದ್ದು ಇದೆ ಎಂದೆನಿಸುತ್ತದೆ, ಒಂದು ಕ್ಷಣ ತಬ್ಬಿಬ್ಬಾಗುತ್ತೇವೆ, ಮೆದುಳು ಕೂಡ ಗೊಂದಲಕ್ಕೆ ಒಳಗಾಗುತ್ತದೆ. ಕಣ್ಣು ಕೂಡ ಮೋಸಗೊಳ್ಳುತ್ತದೆ. ಹೀಗಾಗಿ ಹೆಚ್ಚು ಗಮನಹರಿಸಿಯೇ ಇಂತಹ ಒಗಟಿನ ಚಿತ್ರ ಬಿಡಿಸಬೇಕಾಗುತ್ತದೆ. ಇದೀಗ ಇಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗುತ್ತಿರುತ್ತದೆ. ಇದೀಗ ಈ ಚಿತ್ರದಲ್ಲಿ ಅಡಗಿರುವ ಸಿಂಹಗಳೆಷ್ಟು ಎಂದು ಕಂಡುಹಿಡಿಯಬೇಕು. ಇದಕ್ಕೆ ಕಾಲದ ಮಿತಿಯಿಲ್ಲದಿದ್ರೂ ಉತ್ತರ ಕಂಡು ಹಿಡಿದ್ರೆ ನೀವು ಜಾಣರು ಎನ್ನುವುದು ಖಚಿತವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಸಿಂಹಗಳು ಅಡಗಿವೆ. ಇದೊಂದು ಪೆನ್ಸಿಲ್ ರೇಖಾಚಿತ್ರವಾಗಿದೆ. ಇಲ್ಲಿ ಹುಲ್ಲಿನ ಬಯಲಿನಲ್ಲಿ ಶಾಂತವಾಗಿ ಕುಳಿತ ಸಿಂಹವೊಂದನ್ನು ಕಾಣಬಹುದು. ಸಿಂಹಗಳ ಮುಖವನ್ನು ಎಲೆಗಳು ಹಾಗೂ ಪೊದೆಗಳಲ್ಲಿ ಮರೆ ಮಾಡಲಾಗಿದೆ. ಈ ಸವಾಲು ಸರಳವಾಗಿದ್ದು, ಈ ಚಿತ್ರದಲ್ಲಿ ಅಡಗಿರುವ ಸಿಂಹಗಳೆಷ್ಟು ಎನ್ನುವುದು ಕಂಡುಹಿಡಿಯಬೇಕು.
ನೀವು ಈ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಎಐ ರಚಿತ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ಗುರುತಿಸಬೇಕು. ಸಮಯದ ಮಿತಿಯಿಲ್ಲದಿದ್ದರೂ ಈ ಒಗಟನ್ನು ಬಿಡಿಸುವುದು ಸ್ವಲ್ಪ ಕಷ್ಟದಾಯಕ. ಇದು ಭ್ರಮೆಯಲ್ಲಿ ಸಿಲುಕಿಸುವ ಕಾರಣ ನಿಮಗೆ ನಿಖರವಾದ ಉತ್ತರ ಸಿಗುವುದು ಕಷ್ಟ. ಆದರೆ ಈ ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದು.
ಇದನ್ನೂ ಓದಿ: Optical Illusion: ಹಚ್ಚಹಸಿರಿನ ಮರಗಳ ನಡುವೆ ಅಡಗಿದೆ ಚಂದದ ಗಿಣಿ; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ ಹೇಳಿ
ಸಿಂಹಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತೆ?
ಎಷ್ಟೇ ಪ್ರಯತ್ನಿಸಿದರೂ ಒಗಟಿನ ಚಿತ್ರದಲ್ಲಿ ಅಡಗಿರುವ ಸಿಂಹಗಳೆಷ್ಟು ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ರೇಖಾಚಿತ್ರ ಗಮನಿಸಿದಾಗ ಎಷ್ಟು ನೋಡಿದರೂ ಕೂಡ ಹೆಚ್ಚು ಮುಖವು ಈ ಚಿತ್ರದಲ್ಲಿ ಅಡಗಿರುವಂತೆ ಭಾಸವಾಗುತ್ತದೆ. ಸ್ಥಿರವಾದ ಉತ್ತರ ಸಿಗದ ಕಾರಣ ವೀಕ್ಷಕರು ಹೆಚ್ಚಿನದ್ದನ್ನು ಹುಡುಕತ್ತಲೇ ಇರುತ್ತಾರೆ. ನೀವು ಸ್ವಲ್ಪ ಸಮಯ ತೆಗೆದುಕೊಂಡು ಈ ಚಿತ್ರದತ್ತ ಸಂಪೂರ್ಣ ಗಮನ ಹರಿಸಿ, ನೀವು ನಿಖರವಾಗಿ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ಹುಡುಕಲು ಸಾಧ್ಯವಾಗಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








