Viral: ಲಸಿಕೆಯಿಂದ ಮೂಡಿದ ಬ್ರೆಜಿಲ್-ಭಾರತ ಪ್ರೀತಿ; ಜಾತಿ, ದೇಶಕ್ಕೂ ಮೀರಿದ ಲವ್ ಸ್ಟೊರಿ
ಪ್ರೀತಿಯೇ ಹಾಗೆ, ಎರಡು ಮನಸ್ಸು ಇಷ್ಟ ಪಟ್ಟರೆ ಎಷ್ಟೇ ಕಷ್ಟವಾದರೂ ಸರಿಯೇ, ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡುವವರನ್ನು ನೀವು ನೋಡಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅದೆಷ್ಟೋ ಪ್ರೇಮಕಥೆಗಳು ಬಳಕೆದಾರರ ಮನಸ್ಸನ್ನು ಗೆಲ್ಲುತ್ತದೆ. ಬ್ರೆಜಿಲ್ ಬೆಡಗಿಯೊಬ್ಬಳು ಭಾರತೀಯನನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಪ್ರೇಮಕಥೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಲವ್ ಸ್ಟೋರಿ ಸಖತ್ ವೈರಲ್ ಆಗುತ್ತಿದೆ.

ಪ್ರೀತಿಯೇ ಹಾಗೆ, ಯಾರನ್ನೋ ಇನ್ಯಾರ ಜೊತೆಗೆ ಬೆಸೆಯುತ್ತದೆ. ಹೊಸ ಮುಖದ ಪರಿಚಯವು ಸ್ನೇಹವಾಗಿ ಬೆಳೆದು ಮದುವೆಯವರೆಗೂ ತಲುಪುತ್ತದೆ. ಹೀಗಾಗಿ ಜಾತಿ ಧರ್ಮ, ಊರು ದೇಶ ಮರೆತು ಗಂಡು ಹೆಣ್ಣು ಪರಸ್ಪರ ಪ್ರೀತಿಸಿ ಮದುವೆಯಾದ ಕಥೆಯನ್ನು ನೀವು ಕೇಳಿರುತ್ತೀರಿ. ಇದೀಗ ಬ್ರೆಜಿಲ್‌ನ ಯುವತಿ ತೈನಾ ಶಾ (Brazil lady Tainashah) ಗುಜರಾತಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ತಮ್ಮ ಲವ್ ಸ್ಟೋರಿ (love story) ಹಾಗೂ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪರಿಚಯ ಹೇಗೆ ಬೆಳೆಯಿತು, ಮದುವೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವಿಶೇಷ ಲವ್ ಸ್ಟೋರಿ, ಮದುವೆಯು ನೆಟ್ಟಿಗರ ಗಮನ ಸೆಳೆದಿದೆ.
tainashah ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಈಕೆ ಹೀಗೆ ಬರೆದುಕೊಂಡಿದ್ದು, ನಾವು ನಮ್ಮ ಬಹುಸಂಸ್ಕೃತಿಯ ಪ್ರೇಮಕಥೆಯನ್ನು ಹಂಚಿಕೊಳ್ಳುತ್ತಿದ್ದೇವೆ, ಎಲ್ಲಾ ನಿಷೇಧಗಳನ್ನು ಮುರಿಯುತ್ತಿದ್ದೇವೆ. ವರ್ಣಭೇದ ನೀತಿಯ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡುತ್ತವೆ. ಸಂಸ್ಕೃತಿಗಳನ್ನು ದಾಟುವ, ಸಂಪ್ರದಾಯಗಳಿಗೆ ಸವಾಲು ಹಾಕುವ ಹಾಗೂ ವೈವಿಧ್ಯತೆಯನ್ನು ಸ್ವೀಕರಿಸಲು ಇತರರನ್ನು ಪ್ರೇರೇಪಿಸುವ ಪ್ರೀತಿಯನ್ನು ನಾವು ಸೆಲೆಬ್ರೇಟ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ನಮ್ಮ ಲವ್ ಸ್ಟೋರಿ ಶುರು ಆಗಿದ್ದು ಹೀಗೆ , ನಾನು ಬ್ರೆಜಿಲ್‌ನವಳು, ಆತ ಭಾರತದವನು. ಹೀಗಿರುವಾಗ ನಾವು 2020ರಲ್ಲಿ ಮೊದಲು ಭೇಟಿಯಾದೆವು. ಆತ ಕೋವಿಡ್ ಸಮಯದಲ್ಲಿ ಲಸಿಕೆಗಳೇ ಪತ್ತೆಯಾಗದ ಸಮಯದಲ್ಲಿ ಬ್ರೆಜಿಲ್‌ಗೆ ಬಂದ. ಆ ಮೊದಲ ಭೇಟಿಯ ಬಳಿಕ ನಾವು ಪ್ರೀತಿಯಲ್ಲಿ ಬಿದ್ದೆವು. ಇದಾದ ಕೇವಲ ಐದು ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. ನಮ್ಮಿಬ್ಬರ ಮದುವೆ ನಡೆದದ್ದು ಬ್ರೆಜಿಲ್‌ನಲ್ಲಿ ಎಂದು ಹೇಳಿದ್ದಾಳೆ.
ಆತನ ಮನೆಯವರು ನಮ್ಮ ಪ್ರೀತಿಗೆ ಆರಂಭದಿಂದಲೂ ಒಪ್ಪಿಗೆ ನೀಡಿದ್ದರು. ಆದರೆ ನನ್ನ ತಂದೆಯನ್ನು ನನ್ನ ಮದುವೆಗೆ ಒಪ್ಪಿಸುವುದೇ ದೊಡ್ಡ ಸವಾಲಿನ ವಿಷಯವಾಗಿತ್ತು. ನನ್ನ ಅಮ್ಮ ಹಾಗೂ ಸಹೋದರ ಕೂಡ ನಮ್ಮ ಪ್ರೀತಿ ಹಾಗೂ ಮದುವೆಯ ನಿರ್ಧಾರವನ್ನು ಒಪ್ಪಿಕೊಂಡರು. ಕೊನೆಗೆ ನನ್ನ ತಂದೆಯ ಆಶೀರ್ವಾದವು ಸಿಕ್ಕಿತು. ನಾವು ಬೇರೆ ಬೇರೆ ಸಂಪ್ರದಾಯದಿಂದ ಬಂದಿದ್ದೇವೆ. ಆದರೆ ನಮ್ಮಲ್ಲಿರುವ ಮೌಲ್ಯ ಒಂದೆಯಾಗಿದೆ. ನಮ್ಮ ಪ್ರೀತಿ ಹಾಗೂ ಪರಸ್ಪರರ ನಡುವಿನ ಅನ್ಯೋನ್ಯತೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ನಮ್ಮಿಬ್ಬರನ್ನು ಜೊತೆಯಾಗಿ ಸೇರಿಸಿದ್ದಕ್ಕೆ ಈ ವಿಶ್ವಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: Video: ನನ್ನನ್ನು ಯಾಕೆ ಮದುವೆಯಾದೆ ಎಂದ ವಿದೇಶಿ ಪತ್ನಿಗೆ ಪ್ರಾಮಾಣಿಕ ಉತ್ತರ ನೀಡಿದ ಭಾರತೀಯ
ಈ ಪೋಸ್ಟ್ ವೈರಲ್ ಆಗುತ್ತಿದ್ದು ಇಪ್ಪತ್ತೆರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬ್ಯೂಟಿಫುಲ್ ಲವ್ ಸ್ಟೋರಿ ಎಂದರೆ, ಮತ್ತೊಬ್ಬರು, ಪ್ರೀತಿ ಅಂದ್ರೆ ಪ್ರೀತಿ, ಎಷ್ಟು ದೂರವಿದ್ದರೂ ಅದು ಲೆಕ್ಕಕ್ಕೆ ಬರಲ್ಲ ಇಬ್ಬರಿಗೂ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಿಜಕ್ಕೂ ಪಾಸಿಟಿವ್ ಪೋಸ್ಟ್, ಎಲ್ಲಾ ಫೋಟೋಗಳು ಸುಂದರವಾಗಿವೆ. ಎಷ್ಟು ಮುದ್ದಾದ ಜೀವಗಳು. ಭಾರತೀಯರಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Tue, 19 August 25








