Optical Illusion: ನಿಮ್ಮ ಕಣ್ಣಿಗೆ ಮೂರು ಬೆಕ್ಕು ಮಾತ್ರ ಕಾಣಿಸಿತಾ? ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ಹುಡುಕಿ
ಮೆದುಳಿನ ಚುರುಕುತನಕ್ಕೆ ಹಾಗೂ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತದೆ. ಇದು ಮೆದುಳಿಗೆ ವ್ಯಾಯಾಮವನ್ನು ನೀಡುವ ಆಟವಾಗಿದ್ದು, ನೋಡುವುದಕ್ಕೆ ಸುಲಭದಾಯಕವಾಗಿದ್ದರೂ ಕಂಡರೂ ಅಷ್ಟೇ ಕಠಿಣವಾಗಿದೆ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಮೂರು ಬೆಕ್ಕುಗಳಿದ್ದು, ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ಹತ್ತು ನಿಮಿಷಗಳಲ್ಲೇ ಕಂಡು ಹಿಡಿಯಬಲ್ಲಿರಾ.

ಈಗಂತೂ ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಬಹುದಾದ ಮೋಜಿನ ಒಗಟಿನ ಆಟಗಳನ್ನು ಆಡುವ ಮಜಾನೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು (Optical Illusion) ವೈರಲ್ ಆಗುತ್ತಿರುತ್ತವೆ. ಯೋಚನಾ ಶಕ್ತಿಗೆ ಸವಾಲು ನೀಡುವ ಇಂತಹ ಸವಾಲಿನ ಒಗಟನ್ನು ನೀವು ಈ ಹಿಂದೆ ಬಿಡಿಸಿರುತ್ತೀರಿ. ಇದೀಗ ನಿಮ್ಮ ಕಣ್ಣನ್ನು ಮೋಸಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ನಾಲ್ಕು ಬೆಕ್ಕುಗಳಿವೆ. ಆದರೆ ನಿಮ್ಮ ಕಣ್ಣಿಗೆ ಬೀಳುವುದೇ ಈ ಮೂರು ಬೆಕ್ಕುಗಳು ಮಾತ್ರ. ಆದರೆ ನಾಲ್ಕನೇ ಬೆಕ್ಕನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿದ್ರೆ ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಎಂದು ಅರ್ಥವಾಗುತ್ತದೆ. ಈ ಒಗಟನ್ನು ಬಿಡಿಸಲು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಅಡಗಿರುವ ನಾಲ್ಕನೇ ಬೆಕ್ಕನ್ನು ಕಂಡುಹಿಡಿಯಬಲ್ಲಿರೇ?
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ನಾಲ್ಕು ಬೆಕ್ಕುಗಳಿವೆ. ಆದರೆ ನಿಮ್ಮ ಕಣ್ಣಿಗೆ ನಿಂತಿರುವ ಕಪ್ಪು ಬಣ್ಣದ ಮೂರು ಬೆಕ್ಕುಗಳು ಮಾತ್ರ ಕಾಣಿಸುತ್ತವೆ. ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಕಾಡು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ. ಈ ಬೆಕ್ಕನ್ನು ಕೇವಲ ಹತ್ತು ಸೆಕೆಂಡುಗಳ ಒಳಗಾಗಿ ಹುಡುಕಿ, ನಿಮ್ಮ ಕಣ್ಣಿನ ದೃಷ್ಟಿ ಹಾಗೂ ಬುದ್ಧಿಶಕ್ತಿ ಎಷ್ಟು ಶಾರ್ಪ್ ಆಗಿದೆ ಎಂಬುದನ್ನು ಪರೀಕ್ಷಿಸಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: Optical Illusion: ಈ ಎರಡು ಚಿತ್ರಗಳ ನಡುವೆ ಏಳು ವ್ಯತ್ಯಾಸಗಳಿವೆ, 15 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ ನೋಡೋಣ
ಉತ್ತರ ಇಲ್ಲಿದೆ
ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನು ಮೋಸಗೊಳಿಸುತ್ತವೆ. ಹಾಗೂ ನಿಮ್ಮನ್ನು ಭ್ರಮೆಯಲ್ಲಿ ಸಿಲುಕುವಂತೆ ಮಾಡುತ್ತವೆ. ಈ ಚಿತ್ರದಲ್ಲಿ ನೀವು ಮೂರು ಬೆಕ್ಕುಗಳನ್ನು ಮಾತ್ರ ಸುಲಭವಾಗಿ ಗುರುತಿಸಬಹುದು. ಮೊದಲ ನೋಟದಲ್ಲಿ ಕಪ್ಪು ಬಣ್ಣದ ಮೂರು ಬೆಕ್ಕುಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ಎಷ್ಟೇ ಹುಡುಕಿದ್ರೂ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಉತ್ತರ ಹುಡುಕಲು ಸಾಧ್ಯವಾಗದೇ ತಲೆಕೆಡಿಸಿಕೊಂಡಿದ್ದೀರಾ? ಯೋಚನೆ ಮಾಡಬೇಡಿ ನಾವು ನಿಮಗೆ ಉತ್ತರ ಹೇಳುತ್ತೇವೆ. ಚಿತ್ರದ ಮೇಲಿನ ಎಡಭಾಗದಲ್ಲಿ ಮತ್ತೊಂದು ಮುದ್ದಾದ ಬೆಕ್ಕು ಇದೆ. ನಾಲ್ಕನೇ ಬೆಕ್ಕಿನ ಬಣ್ಣವು ನೆಲದ ಬಣ್ಣದೊಂದಿಗೆ ಬೆರೆತು ಹೋಗಿರುವುದರಿಂದ ಅದನ್ನು ಗುರುತಿಸುವುದು ಕಷ್ಟ. ನಿಮ್ಮ ಕಣ್ಣಿಗೆ ನಾಲ್ಕನೇ ಬೆಕ್ಕು ಬಿದ್ರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎನ್ನುವುದು ಖಚಿತವಾಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








