Optical Illusion: ಈ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು 10 ಸೆಕೆಂಡಿನಲ್ಲಿ ಕಂಡು ಹಿಡಿಯಬಲ್ಲಿರಾ?
ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಹಾಗೂ ಮೆದುಳಿಗೆ ಸವಾಲೊಡ್ದುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ನೀವು ನೋಡಿದ್ದೀರಿ. ಕೆಲವರು ಈ ಒಗಟನ್ನು ಬಿಡಿಸಲು ಪ್ರಯತ್ನ ಪಟ್ಟಿರಬಹುದು. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಮಿಡತೆಯನ್ನು ಕಂಡು ಹಿಡಿಯಬೇಕು. ಆದರೆ ಈ ಒಗಟನ್ನು ಬಿಡಿಸಲು ನಿಮಗಿರುವ ಕಾಲಾವಕಾಶ ಹತ್ತು ಸೆಕೆಂಡುಗಳು ಮಾತ್ರ, ಇದಕ್ಕೆ ಉತ್ತರ ಕಂಡುಕೊಳ್ಳುವುದು ನಿಮ್ಮಿಂದ ಸಾಧ್ಯನಾ?.

ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಆಡುವತ್ತ ಆಸಕ್ತಿ ತೋರುತ್ತಾರೆ. ಇದರಿಂದ ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಬಹುದು. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಇಂತಹ ಒಗಟುಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ನೀವು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸಲು ರೆಡಿ ಇದ್ದೀರಾ ಅಂತಾದ್ರೆ ಇಲ್ಲೊಂದು ಚಿತ್ರವಿದೆ. ಮರದ ಸಣ್ಣ ಸಣ್ಣ ತುಂಡುಗಳ ನಡುವೆ ಅಡಗಿರುವ ಮಿಡತೆಯನ್ನು ಕೇವಲ ಹತ್ತು ಸೆಕೆಂಡುಗಳಲ್ಲೇ ಕಂಡು ಹಿಡಿಯಬೇಕು.
ಈ ಚಿತ್ರದಲ್ಲಿ ಏನಿದೆ?
ಫೈಂಡ್ ದಿ ಸ್ನೈಪರ್’ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಚಿತ್ರದಲ್ಲಿ ಸಣ್ಣ ಸಣ್ಣ ಮರದ ತುಂಡುಗಳಿರುವುದನ್ನು ಗಮನಿಸಬಹುದು. ಆದರೆ ಇದರಲ್ಲಿ ಅಡಗಿರುವ ಮಿಡತೆಯನ್ನು ಕಂಡು ಹಿಡಿಯುವ ಸವಾಲನ್ನು ನೀಡಲಾಗಿದೆ. ಈ ಒಗಟಿನ ಆಟಗಳು ಮನೋರಂಜನೆಯನ್ನು ನೀಡುವುದು ಮಾತ್ರವಲ್ಲ ನಿಮ್ಮ ಮೆದುಳಿಗೆ ನೂರಕ್ಕೆ ನೂರರಷ್ಟು ಕೆಲಸ ನೀಡುತ್ತವೆ. ಆದರೆ ಇದೀಗ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಒಬ್ಬ ಬಳಕೆದಾರ, ಈ ಚಿತ್ರದ ಬಲಭಾಗದಲ್ಲಿ ಮಿಡತೆಯಿದೆ. ಇದು ದೊಡ್ಡ ತುಂಡುಗಳ ನಡುವೆ ಮಿಡತೆಯೂ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ ಎಂದಿದ್ದಾರೆ. ಇನ್ನೊಬ್ಬರು, ಬಲಭಾಗದಲ್ಲಿ ಈ ಮಿಡತೆಯಿದೆ. ಇದು ಎಡಭಾಗದತ್ತ ಮುಖ ಮಾಡಿದೆ ಎಂದು ಬರೆದಿದ್ದಾರೆ. ಈ ಒಗಟಿನ ಆಟ ಬಿಡಿಸಲು ಸುಲಭವಾಯಿತು, ನಾನು ಮಿಡತೆ ಕಂಡುಕೊಂಡೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಕಂಡುಹಿಡಿಯಬಲ್ಲಿರಾ?
ಉತ್ತರ ಇಲ್ಲಿದೆ

ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಚಿಂತಿಸಬೇಡಿ. ಇಂತಹ ಟ್ರಿಕ್ಕಿ ಒಗಟಿನ ಚಿತ್ರ ಬಿಡಿಸಲು ಕೆಲವರಿಗೆ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಈ ಚಿತ್ರದಲ್ಲಿ ಮಿಡತೆ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಬಲಭಾಗದ ಮಧ್ಯಭಾಗದಿಂದ ಸ್ವಲ್ಪ ಮೇಲೆ ನೋಡಿದರೆ ಮಿಡತೆ ಕಾಣಿಸುತ್ತದೆ. ನೀವು ಬೇರೆಡೆ ಗಮನ ಕೊಡದೇ ತಾಳ್ಮೆಯಿಂದ ಚಿತ್ರವನ್ನು ಗಮನಿಸಿದರೆ ನಿಮ್ಮ ಕಣ್ಣಿಗೆ ಮಿಡತೆ ಖಂಡಿತ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Tue, 12 August 25








