AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಳೆ ಬರ್ಲಿ, ರಸ್ತೆನೇ ತುಂಬಲಿ, ಪ್ಯಾಸೆಂಜರನ್ನು ಪಿಕಪ್ ಮಾಡೋದು ಮುಖ್ಯ; ಈ ಆಟೋ ಚಾಲಕನ ಐಡಿಯಾ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಜುಗಾಡ್ ಐಡಿಯಾಗಳಿಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಆಟೋ ಚಾಲಕನೊಬ್ಬನು ಪ್ಯಾಸೆಂಜರನ್ನು ಮಾತ್ರ ಮಿಸ್ ಮಾಡೋ ಮಾತೇ ಇಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ಪ್ರಯಾಣಿಕನನ್ನು ಆಟೋ ಚಾಲಕನ ಹೇಗೆ ಪಿಕಪ್ ಮಾಡಿದ್ದಾನೆ ಎನ್ನುವುದನ್ನು ತೋರಿಸುತ್ತದೆ ಈ ವಿಡಿಯೋ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಚಾಲಕನ ಬುದ್ಧಿವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Video: ಮಳೆ ಬರ್ಲಿ, ರಸ್ತೆನೇ ತುಂಬಲಿ, ಪ್ಯಾಸೆಂಜರನ್ನು ಪಿಕಪ್ ಮಾಡೋದು ಮುಖ್ಯ; ಈ ಆಟೋ ಚಾಲಕನ ಐಡಿಯಾ ನೋಡಿ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Aug 30, 2025 | 11:25 AM

Share

ಭಾರತೀಯರು ಸಿಕ್ಕಾಪಟ್ಟೆ ಬುದ್ಧಿವಂತರು. ಸಮಸ್ಯೆಗಳನ್ನು ಪರಿಹರಿಸುವುದರಲ್ಲಂತೂ ನಿಸ್ಸೀಮರು. ಮನೆಯಲ್ಲಿ ಯಾವುದಾದರೂ ವಸ್ತುಗಳು ಕೆಟ್ಟು ಹೋದರೆ ಅವುಗಳನ್ನು ಉಪಯೋಗಿಸಿಕೊಂಡು, ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಹೀಗಾಗಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ, ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರವಂತೂ ಇದ್ದೆ ಇರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದಾಗ ಈ ಮಾತು ನಿಜವೆನಿಸುತ್ತದೆ. ಆಟೋ ಚಾಲಕನು (Auto driver) ಪ್ರಯಾಣಿಕನನ್ನು ಪಿಕಪ್‌ ಮಾಡಲು ಹೋಗಿದ್ದಾನೆ. ಈ ವೇಳೆಯಲ್ಲಿ ರಸ್ತೆಯ ತುಂಬಾ ನೀರು ತುಂಬಿದ್ದು, ಪ್ರಯಾಣಿಕನಿಗೆ ತನ್ನ ಆಟೋ ಹತ್ತಲು ಬುದ್ಧಿ ಉಪಯೋಗಿಸಿ ವ್ಯವಸ್ಥೆ ಮಾಡಿದ್ದಾನೆ. ಈ ಜುಗಾಡ್ ಪ್ಲ್ಯಾನ್‌ಗೆ ನೆಟ್ಟಿಗರು ಏನೇ ಸಮಸ್ಯೆಯಿದ್ರು ಪರಿಹಾರ ಖಂಡಿತ ಇರುತ್ತದೆ ಎಂದು ಒಪ್ಪಿಕೊಂಡಿದ್ದಾರೆ.

@TARUNspeaks ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಆಧುನಿಕ ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳು ಬೇಕಾಗುತ್ತವೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆಟೋ ಚಾಲಕನೊಬ್ಬನು ವ್ಯಕ್ತಿಯನ್ನು ಪಿಕಪ್‌ ಮಾಡಲು ಆತನ ಮನೆಯ ಹತ್ತಿರ ಬಂದಿದ್ದಾನೆ. ಈ ವೇಳೆ ರಸ್ತೆಯ ತುಂಬಾ ನೀರು ತುಂಬಿ ಕೊಂಡಿದ್ದು, ಹೀಗಾಗಿ ವ್ಯಕ್ತಿಗೆ ಆಟೋ ಹತ್ತಲು ಕಷ್ಟವಾಗುತ್ತದೆ ಎಂದು ಚಾಲಕನಿಗೆ ತಿಳಿದಿದೆ. ಇದನ್ನು ಅರಿತ ಚಾಲಕನು ಆಟೋಗೆ ಹಗ್ಗದಿಂದ ಕಟ್ಟಿದ ಏಣಿಯನ್ನು ನಿಧಾನವಾಗಿ ವ್ಯಕ್ತಿಯ ಮುಂಭಾಗಕ್ಕೆ ಇಳಿಸಿದ್ದಾನೆ. ಈ ವ್ಯಕ್ತಿ ನಿಧಾನವಾಗಿ ಏಣಿಯ ಮೂಲಕ ಆಟೋವನ್ನು ಹತ್ತಿದ್ದಾನೆ. ಆಟೋಗೆ ಏಣಿಯ ಎರಡು ಬದಿಯನ್ನು ಹಗ್ಗದಿಂದ ಕಟ್ಟಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
IIM -B ಸಂಸ್ಥೆಯ ಜಾಕೆಟ್​​ ಹಾಕಿಕೊಂಡು ಆಟೋ ಓಡಿಸಿದ ಚಾಲಕ
Image
ಆಟೋ ಓಡಿಸಿಕೊಂಡು ಈ ಚಾಲಕ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
Image
ಚಾಲಕನಿಲ್ಲದೆ ಸ್ಟಾರ್ಟ್ ಆಗಿ ಮುಂದಕ್ಕೆ ಬಂದು ನಿಂತ ಟ್ರ್ಯಾಕ್ಟರ್
Image
ಭಾರತೀಯ ಕಾರು ಚಾಲಕರೆಲ್ಲರೂ ಹೀಗೆನಾ, ವಿದೇಶಿಗ ಹೀಗೆಂದಿದ್ದೇಕೆ?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Viral: IIM -B ಸಂಸ್ಥೆಯ ಜಾಕೆಟ್​​ ಹಾಕಿಕೊಂಡು ಆಟೋ ಓಡಿಸಿದ ಚಾಲಕ, ಇದರ ಹಿಂದಿದೆ ಆತನ ಜೀವನದ ಗುಟ್ಟು

ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು, ಇಡೀ ಜಗತ್ತು ವಿಶ್ವಗುರು ಮಟ್ಟದ ತಂತ್ರಜ್ಞಾನವನ್ನು ವೀಕ್ಷಿಸುತ್ತಿದೆ. ಇನ್ನೊಬ್ಬರು, ಈ ಸಾಧನವನ್ನು ಚಂದ್ರನ ಮೇಲೆ ಇಳಿಯಲು ಸುಲಭವಾಗಿ ಬಳಸಬಹುದು, ನಾಸಾಗೆ ಇದು ನಿಜವಾಗಿಯೂ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಆಧುನಿಕ ಸಮಸ್ಯೆಯಲ್ಲ, ಪ್ರತಿ ವರ್ಷ ಪ್ರವಾಹದಂತಹ ಸಮಸ್ಯೆ ಉಂಟಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Fri, 15 August 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್