Video: ಅಬ್ಬಬ್ಬಾ… ಬರೀ ಪೈಪ್ ಬಳಸಿ ದೈತ್ಯಾಕಾರದ ಕಾಳಿಂಗ ಸರ್ಪವನ್ನು ಹಿಡಿದ ಧೀರ
ನಿಜ ಜೀವನದಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳಲ್ಲಿ ಹಾವನ್ನು ನೋಡಿದರೂ ಒಂದು ತಕ್ಷಣ ಭಯವಾಗುತ್ತದೆ. ಇನ್ನೂ ಬಹುತೇಕ ಹೆಚ್ಚಿನವರು ಹಾವು ಕಂಡರೆ ಓಡಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಧೀರ ಯಾವುದೇ ಭಯವಿಲ್ಲದೆ, ಪೈಪ್ ಬಳಸಿ ಬಹಳ ಚಾಣಾಕ್ಷತಣದಿಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದಿದ್ದು, ಈತನ ಧೈರ್ಯವನ್ನು ಕಂಡು ನೆಟ್ಟಿಗರಂತೂ ಫುಲ್ ಶಾಕ್ ಆಗಿದ್ದಾರೆ.

ಹಾವುಗಳನ್ನು (Snakes) ಕಂಡರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಬಹುತೇಕ ಎಲ್ಲರೂ ಒಂದು ಸಣ್ಣ ಹಾವು ಕಂಡರೂ ಎದ್ನೋ ಬಿದ್ನೋ ಅಂತ ಓಡಿ ಹೋಗ್ತಾರೆ. ಹೀಗೆ ಕನಸಲ್ಲೂ ಹಾವನ್ನು ಕಂಡು ಬೆಚ್ಚಿ ಬೀಳುವವರ ಮಧ್ಯೆ, ಹಾವುಗಳನ್ನು ಪ್ರೀತಿಸುವ, ಹಾವುಗಳನ್ನು ಹಿಡಿದು ರಕ್ಷಿಸುವಂತವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಧೈರ್ಯವಂತ ಯುವಕ ಕೂಡಾ ಜನ ವಸತಿ ಪ್ರದೇಶಕ್ಕೆ ಬಂದಂತಹ ಬೃಹದಾಕಾರದ ಹಾವನ್ನು ಹಿಡಿದು ರಕ್ಷಿಸಿದ್ದಾನೆ. ಈತ ಬರೀ ಪೈಪ್ ಬಳಸಿ ದೈತ್ಯ ಗಾತ್ರದ ಕಾಳಿಂಗ ಸರ್ಪವನ್ನು (Man Catches Massive King Cobra) ಹಿಡಿದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುವಕನ ಧೈರ್ಯಕ್ಕಂತೂ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಪೈಪ್ ಬಳಸಿ ಹಾವು ಹಿಡಿದ ಯುವಕ:
ಹಾವನ್ನು ಕಂಡರೆ ಈಡಿ ಹೋಗುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಯುವಕ ಧೈರ್ಯ ಮತ್ತು ಚಾಣಾಕ್ಷತನದಿಂದ ಪೈಪ್ ಬಳಸಿ ಬೃಹದಾಕಾರದ ಕಾಳಿಂಗ ಸರ್ಪವನ್ನು ಹಿಡಿದಿದ್ದಾನೆ.ಉರಗ ರಕ್ಷಕನಾದ ಅರ್ಶದ್ ಖಾನ್ ಎಂಬಾತ ಜನವಸತಿ ಪ್ರದೇಶದ ಕಡೆಗೆ ಬಂದಂತಹ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಣೆ ಮಾಡಿದ್ದಾನೆ.
ಈ ಬೃಹತ್ ಗಾತ್ರದ ಹಾವನ್ನು ಹೇಗಪ್ಪಾ ಹಿಡಿಯೋದು ಎಂದು ಯೋಚಿಸಿದ ಆತ, ಒಂದು ಪೈಪ್ ಸಹಾಯದಿಂದ ಹಾವನ್ನು ಹಿಡಿದು ಗೋಣಿಯೊಳಗೆ ಹಾಕಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
Wild_whisperper ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಯುವಕ ಬೃಹದಾಕಾರದ ಹಾವನ್ನು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆತ ಪೈಪ್ ಬಳಸಿ ಕಾಳಿಂಗ ಸರ್ಪವನ್ನು ಹಿಡಿದು ಗೋಣಿಯೊಳಗೆ ಹಾಕಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಇದು ಶುದ್ಧ ಪ್ರೀತಿ; ಮೈ ಮೇಲೆ ಹೊರಳಾಡುತ್ತಾ ವ್ಯಕ್ತಿಯ ಜತೆಗೆ ಮರಿಯಾನೆಯ ತುಂಟಾಟ
ಆಗಸ್ಟ್ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 93.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಹಾವನ್ನು ಗೋಣಿಯಲ್ಲಿ ಹಾಕಿ ಹೊತ್ತುಕೊಂಡು ಹೋದ್ರೆ, ಬೆನ್ನುನೋವು ಬರುವುದಂತೂ ಖಂಡಿತʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾನೇ ಅಪಾಯಕಾರಿ ಕೆಲಸʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯವನ್ನು ನೋಡಿ ನನಗಂತೂ ಸಿಕ್ಕಾಪಟ್ಟೆ ಭಯವಾಯ್ತುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








