Video: ಎದ್ದೇಳು ಪ್ಲೀಸ್ ಎದ್ದೇಳು; ಸತ್ತು ಹೋದ ಸಂಗಾತಿಯನ್ನು ಎಬ್ಬಿಸಲು ಹಂಸದ ಪರದಾಟ
ಪಕ್ಷಿ ಮತ್ತು ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಿಸಿದ ಸಾಕಷ್ಟು ಅಚ್ಚರಿಯ, ಮನಕಲಕುವ ಮತ್ತು ಮುದ್ದು ಮುದ್ದಾದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಹೃದಯ ವಿದ್ರಾವಕ ದೃಶ್ಯವೊಂದು ವೈರಲ್ ಆಗಿದ್ದು, ಹಂಸವೊಂದು ಸತ್ತು ಹೋದ ತನ್ನ ಸಂಗಾತಿಯನ್ನು ಎಬ್ಬಿಸಲು ಹರಸಾಹಸ ಪಟ್ಟಿದೆ. ನಿಷ್ಕಲ್ಮಶ ಪ್ರೀತಿ, ಸಂಗಾತಿಯನ್ನು ಕಳೆದುಕೊಂಡ ಈ ಮೂಕ ಜೀವಿಯ ರೋಧನೆಯ ದೃಶ್ಯ ಕರುಳು ಹಿಂಡುವಂತಿದೆ.

ಪ್ರೀತಿ (Love) ಮತ್ತು ನಿಷ್ಠೆಗೆ ಇನ್ನೊಂದು ಹೆಸರೇ ಹಂಸ (swan). ಇವುಗಳು ತಮ್ಮ ಸಂಗಾತಿಯನ್ನು ಬಿಟ್ಟು ಇರಲಾರವು. ಯಾವಾಗಲೂ ಸಂಗಾತಿಯ ಜೊತೆಗೆಯೇ ಇರುತ್ತವೆ. ಅಷ್ಟೇ ಅಲ್ಲದೆ ಏನಾದರೂ ಸಂಗಾತಿ ಸಾವನ್ನಪ್ಪಿದರೆ, ಆ ಹಂಸ ಜೀವನಪರ್ಯಂತಹ ಒಂಟಿಯಾಗಿಯೇ ಜೀವನವನ್ನು ನಡೆಸುತ್ತದೆ. ಅದಕ್ಕಾಗಿಯೇ ಹಂಸಗಳನ್ನು ನಿಷ್ಠಾವಂತ ಜೀವಿಗಳು ಎಂದು ಹೇಳುವುದು. ಇದೀಗ ಇಲ್ಲೊಂದು ಜೋಡಿ ಹಂಸದ ವಿಡಿಯೋವೊಂದು ವೈರಲ್ ಆಗಿದ್ದು, ಸತ್ತು ಹೋಗಿರುವಂತಹ ಸಂಗಾತಿಯನ್ನು ಹಂಸ ಎಬ್ಬಿಸಲು ಯತ್ನಿಸುತ್ತಿರುವಂತಹ ದೃಶ್ಯ ಕರುಳು ಹಿಂಡುವಂತಿದೆ. ಎದ್ದೇಳು ಎದ್ದೇಳು ಎಂದು ಸತ್ತು ಹೋದಂತಹ ಸಂಗಾತಿಯನ್ನು ಹಂಸ ತನ್ನ ಕೊಕ್ಕಿನ ಸಹಾಯದಿಂದ ಎಬ್ಬಿಸಲು ಶತಪ್ರಯತ್ನಪಟ್ಟಿದ್ದು, ಈ ಹೃದಯವಿದ್ರಾವಕ ದೃಶ್ಯವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸತ್ತು ಹೋದ ಸಂಗಾತಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ಹಂಸ:
ಹಂಸಗಳ ನಿಷ್ಕಲ್ಮಶ ಪ್ರೀತಿಗೆ ಸಂಬಂಧಿಸಿದ ದೃಶ್ಯ ಇದೀಗ ವೈರಲ್ ಆಗಿದ್ದು, ಸತ್ತು ಹೋದ ಸಂಗಾತಿಯನ್ನು ಎಬ್ಬಿಸಲು ಹಂಸವೊಂದು ಹರಸಾಹಸಪಟ್ಟಿದೆ. ಮನಕಲಕುವ ಈ ದೃಶ್ಯವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ (susantananda3) ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಸಾವು ಕೂಡ ಮುರಿಯಲಾರದ ಪ್ರೀತಿ, ಈ ಹಂಸವು ಅದು ತನ್ನ ಜೀವನದುದ್ದಕ್ಕೂ ಆರಿಸಿಕೊಂಡ ಸಂಗಾತಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ದೃಶ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನ್ನ ಕೊಕ್ಕಿನ ಸಹಾಯದಿಂದ ಹಂಸವೊಂದು ಸತ್ತು ಹೋದ ಸಂಗಾತಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಎದ್ದೇಳು, ಪ್ಲೀಸ್ ಎದ್ದೇಳು ಎನ್ನುತ್ತಾ ಕೊಳದಲ್ಲಿ ಸತ್ತು ಬಿದ್ದಿದ್ದ ಸಂಗಾತಿಯನ್ನು ಎಬ್ಬಿಸಲು ಹಂಸ ಶತಪ್ರಯತ್ನಪಟ್ಟಿದ್ದು, ಈ ಮನಕಲಕುವ ದೃಶ್ಯ ಕಣ್ಣಂಚಲಿ ನೀರು ತರಿಸುವಂತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A love that even death can’t break🩷
This swan tries desperately to wake its lifeless partner — a soulmate it chose for life. Swans mate for life, and when one is gone… the other feels it deeply.
Some bonds are forever. pic.twitter.com/ykdxT3JECJ
— Susanta Nanda IFS (Retd) (@susantananda3) August 6, 2025
ಇದನ್ನೂ ಓದಿ: ಕಾರು ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಹಿಡಿದು ಗೋಳಾಡಿದ ತಾಯಿ ಕರಡಿ; ಮನಕಲಕುವ ವಿಡಿಯೋ ಇಲ್ಲಿದೆ
ಆಗಸ್ಟ್ 6 ರಂದು ಶೇರ್ ಮಾಡಲಾದ ಈ ವಿಡಿಯೋ 38 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ದುಃಖಕರ ಕ್ಷಣʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪರಿಶುದ್ಧ ಪ್ರೀತಿ, ಈ ದೃಶ್ಯವನ್ನು ಕಂಡು ಕಣ್ಣಂಚಲಿ ನೀರು ಬಂತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೃದಯ ವಿದ್ರಾವಕ ದೃಶ್ಯವಿದುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








