Video: ಇದು ಶುದ್ಧ ಪ್ರೀತಿ; ಮೈ ಮೇಲೆ ಹೊರಳಾಡುತ್ತಾ ವ್ಯಕ್ತಿಯ ಜತೆಗೆ ಮರಿಯಾನೆಯ ತುಂಟಾಟ
ಪುಟಾಣಿ ಆನೆಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ತನ್ನನ್ನು ಪ್ರೀತಿಯಿಂದ ಸಲಹುವ ವ್ಯಕ್ತಿಯೂ ಕಂಬಳಿ ಹೊದ್ದು ಮಲಗಿರುವುದನ್ನು ಕಂಡು ಮರಿಯಾನೆಯೂ ತನ್ನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿದೆ. ಇದೀಗ ಈ ಹೃದಯಸ್ಪರ್ಶಿ ವಿಡಿಯೋ ಬಳಕೆದಾರರ ಹೃದಯ ಗೆದ್ದುಕೊಂಡಿದೆ.

ಪ್ರಾಣಿಗಳೇ ಆಗಿರಲಿ, ಯಾರು ತನ್ನನ್ನು ಪ್ರೀತಿಸುತ್ತಾರೋ, ಆರೈಕೆ ಮಾಡುತ್ತಾರೋ ಅವರೊಂದಿಗೆ ಮಗುವಿನಂತೆ ವರ್ತಿಸುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೀವು ನೋಡಿರುತ್ತೀರಿ. ಇದೀಗ ಪುಟಾಣಿ ಆನೆಯೊಂದು (baby elephant) ಸಹಾಯಕನ ಜೊತೆಗೆ ಎಷ್ಟು ಸಲುಗೆ ಇಟ್ಟುಕೊಂಡಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಕಂಬಳಿ ಹೊದ್ದು ಮಲಗಿರುವ ವ್ಯಕ್ತಿಯನ್ನು ಎಬ್ಬಿಸಿ ತಾನು ನಿನ್ನ ಜೊತೆಗೆ ಮಲಗ್ತೇನೆ, ಜಾಗ ಬಿಡು ಎಂದು ಹೇಳುವಂತಿದೆ ಈ ದೃಶ್ಯ. ಮರಿಯಾನೆ ಈ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತದೆ ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿಗೆ ಮನಸೋತಿದ್ದಾರೆ.
elephantsofworld ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಮರಿಯಾನೆ ತನ್ನ ಸ್ನೇಹಿತನನ್ನು ಒಟ್ಟಿಗೆ ಮಲಗಲು ಎಬ್ಬಿಸುತ್ತದೆ. ಶುದ್ಧ ಪ್ರೀತಿಯ ಸಂಬಂಧ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ನೆಲದ ಮೇಲೆ ಕಂಬಳಿ ಹೊದ್ದು ಮಲಗಿದ್ದಾನೆ. ಇದನ್ನು ನೋಡಿದ ಮರಿಯಾನೆಯೂ ಆತನತ್ತ ಧಾವಿಸಿ, ಸಲುಗೆಯಿಂದ ಆತನನ್ನು ತಳ್ಳುವುದು ಹಾಗೂ ಆತನ ಮೈ ಮೇಲೆ ಹೊರಳಾಡುವುದನ್ನು ನೀವಿಲ್ಲಿ ನೋಡಬಹುದು. ಆ ಬಳಿಕ ವ್ಯಕ್ತಿಯೂ ತನ್ನ ಮೈ ಮೇಲೆ ಇರುವ ಕಂಬಳಿಯನ್ನು ಮರಿಯಾನೆಗೂ ಹೊದಿಸಿ, ನಿಧಾನವಾಗಿ ತಟ್ಟಿ ಮಲಗಿಸಲು ಪ್ರಯತ್ನಿಸಿದ್ದಾನೆ. ತಾನು ಕೂಡ ಅದರ ಪಕ್ಕ ಕಂಬಳಿ ಹೊದ್ದು ಮಲಗಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Video: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ
ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರೊಬ್ಬರು, ಈ ಮರಿಯಾನೆ ತನ್ನ ತಾಯಿಯೊಂದಿಗೆ ಯಾಕಿಲ್ಲ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಶುದ್ಧ ಪ್ರೀತಿ ಹಾಗೂ ಕಾಳಜಿಭರಿತ ಮನಸ್ಸು ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಈ ಪುಟಾಣಿ ಆನೆಯೂ ಆತನ ಪ್ರೀತಿಯಲ್ಲಿ ಕಳೆದೇ ಹೋಗಿದೆ. ಈ ಮುಗ್ಧ ಮನಸ್ಸಿನ ಶುದ್ಧ ಪ್ರೀತಿ ಹೇಗಿದೆ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








