Viral: IIM -B ಸಂಸ್ಥೆಯ ಜಾಕೆಟ್ ಹಾಕಿಕೊಂಡು ಆಟೋ ಓಡಿಸಿದ ಚಾಲಕ, ಇದರ ಹಿಂದಿದೆ ಆತನ ಜೀವನದ ಗುಟ್ಟು
ಸಾಮಾಜಿಕ ಜಾಲತಾಣದಲ್ಲಿ ಆಟೋ ಚಾಲಕರ ಬಗ್ಗೆ ಸಕಾರತ್ಮಕ ವಿಡಿಯೋ ಅಥವಾ ಸುದ್ದಿಗಳು ವೈರಲ್ ಆಗುತ್ತ ಇರುತ್ತದೆ. ಇದೀಗ ಆಟೋ ಚಾಲಕ ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಜಾಕೆಟ್ ಹಾಕಿಕೊಂಡು ಆಟೋ ಓಡಿಸಿರುವ ಬಗ್ಗೆ ಭಾರೀ ವೈರಲ್ ಆಗಿದೆ. ಆದರೆ ಈ ಜಾಕೆಟ್ನ ಹಿಂದೆ ಆತನ ಜೀವನದ ಗುಟ್ಟು ಇದೆ. ಅದೋನು ಎಂಬುದು ಇಲ್ಲಿದೆ ನೋಡಿ.

ಬಡತನ ಒಬ್ಬ ಮನುಷ್ಯನನ್ನು ಹೇಗೆಲ್ಲಾ ಶ್ರಮಪಡುವಂತೆ ಮಾಡುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ವೈರಲ್ ಆಗುತ್ತ ಇರುತ್ತದೆ. ಜೀವನ ಸಾಗಿಸಬೇಕು ಎಂಬ ಕಾರಣಕ್ಕೆ ಈ ರೀತಿ ಪರದಾಟವಲ್ಲ, ಜವಾಬ್ದಾರಿಗಳು ಇದೆ. ಆ ಕಾರಣಕ್ಕೆ ರಾತ್ರಿ ಹಗಲು ಎನ್ನದೇ ದುಡಿಯುವುದು. ಇದೀಗ ಇಲ್ಲೊಂದು ಆಟೋ ಚಾಲಕನ (auto driver) ಕಥೆ ಕೂಡ ಅಂತಹದ್ದೇ. ಬೆಂಗಳೂರಿನ ಆಟೋ ಚಾಲಕನ ಬಗ್ಗೆ ಯುವತಿಯೊಬ್ಬರು ಹಂಚಿಕೊಂಡಿರುವ ಹೃದಯಸ್ಪರ್ಶಿ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ( IIM -B) ಇದರ ಜಾಕೆಟ್ ಧರಿಸಿರುವ ಆಟೋ ಚಾಲಕನ ಬಗ್ಗೆ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಪೂರ್ವ ಎಂಬವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ನನ್ನ ಆಟೋ ಚಾಲಕ IIMB ಜಾಕೆಟ್ ಧರಿಸಿದ್ದರು. ಕುತೂಹಲದಿಂದ ನಾನು ಅವರ ಜೊತೆ ಸ್ವಲ್ಪ ಮಾತನಾಡಿದೆ. ಆಗ ಅವರು ನಾನು IIMB ಹಾಸ್ಟೆಲ್ ಮೆಸ್‌ನಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿನ ವಿದ್ಯಾರ್ಥಿಗಳು ನನಗೆ ಉಡುಗೊರೆಯಾಗಿ ನೀಡಿದರು ಎಂದು ಹೇಳಿದ್ದಾರೆ. ಈ ಆಟೋ ಚಾಲಕ IIMB ಹಾಸ್ಟೆಲ್ ಮೆಸ್‌ನಲ್ಲಿ ಅರೆಕಾಲಿಕ ಕೆಲಸಗಾರನಾಗಿ ಅಂದರೆ ಪಾರ್ಟ್ ಟೈಂ ಕೆಲಸ ಮಾಡುತ್ತಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
My auto driver was wearing iimb jacket ofc curious me had a lil chat with him.. he mentioned he works in iimb hostel mess and the students over there gifted it him and also mentioned auto driving is his part time job 🙂 pic.twitter.com/jNShi89pQt
— Apoorva 🌤️ (@theanxiouslab) August 10, 2025
ಇದನ್ನೂ ಓದಿ:ಬೆಂಗಳೂರು: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ, ವಿಡಿಯೋ ವೈರಲ್
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಗ್ಗೆ ಗೌರವ ನೀಡಿದ್ರೆ, ನಮ್ಮ ಜೀವನದ ಪಯಣ ತುಂಬಾ ಅತ್ಯುತ್ತವಾಗಿರುತ್ತದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಐಐಎಂಬಿ ವಿದ್ಯಾರ್ಥಿಗಳು ವಾಸ್ತವವಾಗಿ ಅತ್ಯಂತ ಒಳ್ಳೆಯವರು, ಕಳೆದ ವಾರ ನನ್ನ ಅನುಭವಕ್ಕೆ ಬಂದ ಹಾಗೆ ಸುತ್ತಲಿನ ಪ್ರತಿಯೊಬ್ಬರನ್ನು ಹೇಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ನಾನು ಕಳಿತಿದ್ದೇನೆ ಎಂದು ಹೇಳಿದ್ದಾರೆ. ಬೆಂಗಳೂರಿನ ಆಟೋ ಚಾಲಕನೊಬ್ಬ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ನಗರದಲ್ಲಿ ಆಟೋ ಚಾಲಕರೊಬ್ಬರು ಉದ್ಯಮಿ ನವಲ್ ರವಿಕಾಂತ್ ಅವರ ಪಾಡ್‌ಕ್ಯಾಸ್ಟ್ ನೋಡಿಕೊಂಡು ಆಟೋ ಓಡಿಸಿರುವ ಬಗ್ಗೆ ಒಂದು ವಿಡಿಯೋ ವೈರಲ್ ಆಗಿತ್ತು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Wed, 13 August 25








