AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಲು ಹೋಗಿ ಮನೆಯೊಂದರ ಕಾಂಪೌಂಡ್ ಹಾರಿದ ಟೆಕ್ಕಿ, ಕಳ್ಳ ಎಂದ ಮನೆಯವರು

ಬೆಂಗಳೂರಿನಲ್ಲಿ ನಾಯಿ ಕಡಿತ ಹೆಚ್ಚಾಗಿದೆ. 2024ರಲ್ಲಿ ಒಟ್ಟಾರೆಯಾಗಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಇದೀಗ ನಾಯಿಗಳ ದಾಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ ವ್ಯಕ್ತಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ದಾಳಿಯಿಂದ ತಪ್ಪಿಸಲು ಹೋಗಿ, ಮನೆಯೊಂದರ ಕಾಂಪೌಂಡ್ ಒಳಗೆ ಅಕ್ರಮವಾಗಿ ಹಾರಿದ್ದಾರೆ. ಆದರೆ ಇದನ್ನು ಮನೆ ನಿವಾಸಿಗಳು ತಪ್ಪಾಗಿ ತಿಳಿದುಕೊಂಡ ಕಳ್ಳ ಎಂದು ದೂರಿದ್ದಾರೆ.

Viral: ಬೆಂಗಳೂರಿನಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಲು ಹೋಗಿ ಮನೆಯೊಂದರ ಕಾಂಪೌಂಡ್ ಹಾರಿದ ಟೆಕ್ಕಿ, ಕಳ್ಳ ಎಂದ ಮನೆಯವರು
ಸಾಣದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 12, 2025 | 3:50 PM

Share

ಬೆಂಗಳೂರು, ಆಗಸ್ಟ್‌ 12 :ಬೆಂಗಳೂರಿನಲ್ಲಿ ನಾಯಿಗಳ ಕಾಟ (dog attack in Bengaluru) ಹೆಚ್ಚಾಗಿದೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಇತ್ತ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ನಾಯಿ ಕಡಿತ ಪ್ರಕರಣ ಹೆಚ್ಚಾಗಿದೆ. ಇದೀಗ ಇಲ್ಲೊಂದು ಘಟನೆಯ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ಒಂದು ಭಯಾನಕ ಘಟನೆಯೂ ಇದಾಗಿದ್ದು, ಬೀದಿ ನಾಯಿಗಳ ಗುಂಪೊಂದು ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮನೆಯೊಂದರ ಕಾಂಪೌಂಡ್​​​ ಹಾರಿದ್ದಾರೆ. ಇದೀಗ ಆ ಮನೆಯ ಮಾಲೀಕರು ಇವರನ್ನು ಕಳ್ಳ ಎಂದು ದೂರಿದ್ದಾರೆ.

ಉತ್ತರ ಭಾರತದ ಈ ವ್ಯಕ್ತಿ ಪ್ರಸ್ತುತ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬರಬೇಕಾದರೆ ನಾಯಿಗಳು ಇವರನ್ನು ಬೆನ್ನಟ್ಟಿದೆ. ನಿಲ್ಲಿಸಿದ ಕಾರಿನ ಬಳಿ ಇದ್ದ ನಾಯಿಗಳ ಗುಂಪು ದಾಳಿ ಮಾಡಲು ಮುಂದಾಗಿತ್ತು. ಈ ವೇಳೆ ಓಡಲು ಶುರು ಮಾಡಿ, ಅವುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅದೇ ಬೀದಿಯಲ್ಲಿದ್ದ ಮನೆಯೊಂದರ ಕಾಂಪೌಂಡ್ ಹಾರಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದು ನನಗೆ ಅನಿವಾರ್ಯವಾಗಿತ್ತು. ಈ ವೇಳೆ ಮೂವರು ನಿವಾಸಿಗಳು, 60ರ ಹರೆಯದ ಒಬ್ಬ ವ್ಯಕ್ತಿ ಮನೆಯಿಂದ ಹೊರಗೆ ಬಂದರು. ನನ್ನನ್ನೂ ಕಳ್ಳ ಎಂದು ಹೇಳಿದ್ದಾರೆ. ಈ ವೇಳೆ ನಾನು ಕ್ಷಮೆಯಾಚಿಸಿ, ನಾನು ಕಳ್ಳ ಅಲ್ಲ, ನಾಯಿಗಳು ಓಡಿಸಿಕೊಂಡು ಬಂದಿದೆ ಎಂದು ಎಷ್ಟೇ ಹೇಳಿದ್ರೂ ನಂಬುವ ಸ್ಥಿತಿಯಲ್ಲಿ ಅವರು ಇರಲಿಲ್ಲ.

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

Viral Post

ಇದನ್ನೂ ಓದಿ
Image
ರಸ್ತೆ ಕಾಮಗಾರಿ ವಿಳಂಬ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ
Image
ಹಬ್ಬದ ದಿನ ಟ್ರಾಫಿಕ್ ರಹಿತ ಬೆಂಗಳೂರನ್ನು ನೋಡಿ ಖುಷಿ ಪಟ್ಟ ವ್ಯಕ್ತಿ
Image
ಮೂಲ ಸೌಕರ್ಯಕ್ಕಾಗಿ ಬೆಂಗಳೂರಿನ ನಾಗರಿಕರ ವಿಶಿಷ್ಟ ಪ್ರತಿಭಟನೆ
Image
ಬೆಂಗಳೂರಿನ ಸ್ನೇಹಿತೆ ಜತೆಗೆ ಸೇರಿ ಕನ್ನಡ ಕವಿತೆ ಹಾಡಿದ ರಷ್ಯಾದ ಹುಡುಗಿ

ನಿನ್ನನ್ನು ಯಾಕೆ ನಾಯಿಗಳು ಅಟ್ಟಿಸಿಕೊಂಡು ಬಂತು, ಅದಕ್ಕೆ ನಮ್ಮ ಮನೆಯ ಕಾಂಪೌಂಡ್ ಹಾರುವುದಾ? ಇದನ್ನು ನಾವು ನಂಬುವುದಿಲ್ಲ ಎಂದು ಗದರಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ವಿವರಿಸಿದ್ದಾರೆ. ನಾನು ಯಾರು, ನಿಜಾಂಶ ಏನು ಎಂಬುದನ್ನು ಅವರಿಗೆ ವಿವರಿಸಿದೆ. ಸಾಕ್ಷಿಗಾಗಿ ಪ್ಯಾನ್, ಆಧಾರ್ ನಂಬರ್, ವಿಳಾಸ ಮತನ್ನ ಕಂಪನಿಯ ಪ್ರೊಫೈಲ್ ನೀಡಿದ್ರು ಅವರ ನಂಬಲಿಲ್ಲ. ಕೊನೆಗೆ ನನ್ನ ಫೋನ್​​ ಕಿತ್ತುಎಲ್ಲವನ್ನೂ ಪರಿಶೀಲನೆ ಮಾಡಿದ ನಂತರ ಮರುದಿನ ಬೆಳಿಗ್ಗೆ ಫೋನ್​​​ ವಾಪಸ್ಸು ನೀಡಿದ್ದಾರೆ. ಒಮ್ಮೆ ನಿಮ್ಮ ಮನೆಯ ಸಿಸಿಟಿವಿ ನೋಡಿ, ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ಎಂದರು, ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೂ ನಾಯಿ ಕಡಿತ ಪ್ರಕರಣ ಗಣನೀಯ ಹೆಚ್ಚಳ: ಈ ವರ್ಷ 26 ಮಂದಿ ಸಾವು

ಕೊನೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ನೆರೆಹೊರೆಯವರಿಗೆ ಹೇಳಲಾಯಿತು. ನಂತರ ನಿಜಾಂಶ ತಿಳಿದು, ಫೋನ್​​​ ವಾಪಸ್ಸು ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎಂದಿಗೂ ನಾನು ಎದುರಿಸಿಲ್ಲ. ಜೀವ ರಕ್ಷಣೆ ಮಾಡಲು ಹೀಗೆ ಮಾಡಿದ್ರೆ, ಒಂದು ಸ್ವಲ್ಪವೂ ಕರುಣೆ ತೋರದೆ, ನನ್ನ ಜತೆಗೆ ಹೀಗೆ ನಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ರೆಡ್ಡಿಟ್‌ ಬಳಕೆದಾರರು ಪ್ರತಿಕ್ರಿಯಿಸಿದ್ದು, ಒಬ್ಬ ಬಳಕೆದಾರ ಅಪಾಯವನ್ನು ತಪ್ಪಿಸಲು ಖಾಸಗಿ ಆಸ್ತಿಗೆ ಪ್ರವೇಶಿಸಲು ಅನುಮತಿ ನೀಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 81 ಮತ್ತು 97 ಅನ್ನು ಉಲ್ಲೇಖಿಸಿ, ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ