Viral: ರಸ್ತೆ ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್ ಹೆಚ್ಚಳ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ
ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆ ತುಂಬೆಲ್ಲಾ ಗುಂಡಿ ಬಿದ್ದು ವಾಹನ ಓಡಾಡಲು ಕಷ್ಟ ಪಡುವಂತಾಗುತ್ತದೆ. ರಸ್ತೆ ಕಾಮಗಾರಿಗೆ ಕೈ ಹಾಕಿದರೂ ತಿಂಗಳು ಕಳೆದರೂ ಕೂಡ ಕಾಮಗಾರಿ ಪೂರ್ಣಗೊಳ್ಳುವುದೇ ಇಲ್ಲ. ಇದರಿಂದ ಕೆಲಸಕ್ಕೆ ಹೋಗುವವರಿಗೆ ಮಾತ್ರವಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ. ಇಂತಹದ್ದೇ ಪರಿಸ್ಥಿತಿಯೂ ಹೊರ ವರ್ತುಲದ ರಸ್ತೆಯ ಬಳಗೆರೆ ಟಿ ಜಂಕ್ಷನ್ ನಿರ್ಮಾಣವಾಗಿದ್ದು, ಟ್ರಾಫಿಕ್ ಜಾಮ್‌ನಿಂದ ಮಕ್ಕಳು ಒಂದು ಗಂಟೆ ತಡವಾಗಿ ಶಾಲೆಗೆ ತಲುಪುವಂತಾಗುತ್ತಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆ ಒಂದೆಡೆಯಾದರೆ, ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದು ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಗುರುವಾರ ಬೆಳಗ್ಗಿನ ವೇಳೆಯಲ್ಲಿ ಹೊರ ವರ್ತುಲದ ರಸ್ತೆಯ ಬಳಗೆರೆ ಟಿ ಜಂಕ್ಷನ್ (Balagere T-junction of Outer Ring Road) ಬಳಿ ಹಲವಾರು ಶಾಲಾ ಬಸ್‌ಗಳು ಒಂದು ಗಂಟೆಗೂ ಹೆಚ್ಚು ಕಾಲ ನಿಂತುಕೊಂಡಿದ್ದು, ಪೋಷಕರು ಹಾಗು ಮಕ್ಕಳು ಈ ಟ್ರಾಫಿಕ್ ಜಾಮ್‌ನಿಂದ ಹೈರಾಣಾಗಿ ಹೋಗಿದ್ದಾರೆ. ಹೌದು, ಇದರಿಂದ ಮಕ್ಕಳು ಒಂದು ಗಂಟೆಗಳ ಕಾಲ ತಡವಾಗಿ ಶಾಲೆಗೆ ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಪೋಷಕರು ಅಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರದ ಬಗ್ಗೆ ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ರಸ್ತೆ ಕಾಮಗಾರಿ ವಿಳಂಬ, ಶಾಲಾ ಮಕ್ಕಳಿಗೆ ತೊಂದರೆ
ಪಾಣತ್ತೂರು ಎಸ್-ಕ್ರಾಸ್ ಕಾಮಗಾರಿ ನಡೆಯುತ್ತಿದ್ದು, ಹೀಗಾಗಿ ಬಿಬಿಎಂಪಿ ಬಳಗೆರೆ ಟಿ-ಕ್ರಾಸ್ ಜಂಕ್ಷನ್ ಮತ್ತು ಪಾಣತ್ತೂರು ರೈಲ್ವೆ ಅಂಡರ್‌ಪಾಸ್ ನಡುವಿನ ಮಾರ್ಗವು ಕಾಂಕ್ರೀಟ್ ಕರಣಗೊಳ್ಳುತ್ತಿದೆ. ಆಗಸ್ಟ್ 6-10 ರವರೆಗೆ ಈ ರಸ್ತೆ ಸಂಚಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರು ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಹೀಗಾಗಿ ಸಾವಿರಾರು ಐಟಿ ವೃತ್ತಿಪರರು ಓಡಾಡುವ ಈ ಕಾರಿಡಾರ್‌ನಲ್ಲಿ ಪ್ರತಿದಿನ ನೂರಾರು ಶಾಲಾ ಬಸ್‌ಗಳು ಓಡಾಡುತ್ತವೆ. ಟ್ರಾಫಿಕ್ ಜಾಮ್‌ನಿಂದಾಗಿ ತಿಂಗಳಿಂದ ಮಕ್ಕಳು ಶಾಲೆಗೆ ಹೋಗಲು ಕಷ್ಟ ಪಡುತ್ತಿದ್ದು, ಈ ಸಮಸ್ಯೆಯ ಬಗ್ಗೆ ತಿಳಿದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಕಾಮಗಾರಿ ನಡೆಯುತ್ತಿದ್ದು ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಪೋಷಕರು ದಿ ಟೈಮ್ ಆಫ್ ಇಂಡಿಯಾದೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಸ್ತೆ ಕಾಮಗಾರಿ ಹಿನ್ನಲೆ ಸ್ಕೂಲ್ ಬಸ್ ಬರಲು ವಿಳಂಬ
ಐಟಿ ವೃತ್ತಿಪರರಾದ ಮುರಾಜ್ ಮುಕುಂದನ್ ಅವರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಗುರುವಾರ ತಮ್ಮ ಮಗಳು ಮೊದಲ ತರಗತಿಗೆ ಹಾಜರಾಗಲಿಲ್ಲ. ನಮ್ಮ ಕುಟುಂಬ ಪಾಣತ್ತೂರು ರಸ್ತೆಯ ಪಕ್ಕದಲ್ಲಿರುವ ಕ್ರೋಮಾ ರಸ್ತೆಯಲ್ಲಿ ನೆಲೆಸಿದ್ದೇವೆ. ನನ್ನ ಮಗುವಿನ ಶಾಲೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಶಾಲಾ ಬಸ್ ಸಾಮಾನ್ಯವಾಗಿ ಬೆಳಿಗ್ಗೆ 7.40 ರ ಸುಮಾರಿಗೆ ನನ್ನ ಮಗಳನ್ನು ಕರೆದುಕೊಂಡು ಹೋಗಲು ಬರುತ್ತದೆ. ಆದರೆ ಗುರುವಾರದ ವೇಳೆ ಶಾಲಾ ಬಸ್ ಬೆಳಿಗ್ಗೆ 8.30 ರ ಸುಮಾರಿಗೆ ಬಂದಿತು. ಶಾಲೆಗಳಿಗೆ ಪರಿಸ್ಥಿತಿಯ ಅರಿವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral: 2010 ರ ಆರಂಭದ ಬೆಂಗಳೂರನ್ನು ನೆನಪಿಸುವಂತಿದೆ ಈ ದೃಶ್ಯ; ಟ್ರಾಫಿಕ್ ರಹಿತ ಬೆಂಗಳೂರನ್ನು ಕಂಡು ಖುಷಿ ಪಟ್ಟ ವ್ಯಕ್ತಿ
ಶಾಲೆಯನ್ನು ಬದಲಾಯಿಸುತ್ತಿರುವ ಪೋಷಕರು
ಮಳೆಯಿಂದಾಗಿ ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿದ್ದರಿಂದ, ಗುರುವಾರ ಬೆಳಿಗ್ಗೆ ಬಾಳೆಗೆರೆ ಟಿ-ಜಂಕ್ಷನ್ ಬಳಿ ವಾಹನ ಸಂಚಾರ ದಟ್ಟಣೆ ಏರ್ಪಟ್ಟಿದೆ. ಹೀಗಾಗಿ ಈ ಪರ್ಯಾಯ ಮಾರ್ಗಗಳನ್ನು ಅವಲಂಬಿಸಿರುವುದು ಕಷ್ಟ. ಆದರೆ ಈ ಜಾಗ ಯಾರಿಗೆ ಸೇರಿದ್ದು – ಬಿಬಿಎಂಪಿ ಅಥವಾ ರೈಲ್ವೆ? ಎಂಬ ಬಗ್ಗೆ ಗೊಂದಲವಿದೆ?. ಸಾಮಾನ್ಯ ದಿನಗಳಲ್ಲಿ, ನಾವು ಆ ಪ್ರದೇಶದಲ್ಲಿ ಸಂಚರಿಸಲು ಕಷ್ಟಪಡುತ್ತೇವೆ, ಆದರೆ ಮಳೆ ಬರುವ ದಿನಗಳಲ್ಲಿ, ಆ ರಸ್ತೆಯನ್ನು ಬಳಸುವುದೇ ಸಾಧ್ಯವಿಲ್ಲ. ಕೆಲವು ಪೋಷಕರು ಈ ರೀತಿಯ ಅವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಕ್ಕಳಿಗಾಗಿ ಶಾಲೆಯನ್ನು ಸಹ ಬದಲಾಯಿಸಿದ್ದಾರೆ ಎಂದು ನಿವಾಸಿ ಶೀತಲ್ ಕುಲಕರ್ಣಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಪಾಣತ್ತೂರು ಮೂಲಕ ಪ್ರಯಾಣಿಸುವ ಪವಿತ್ರಾ ಹೊಳ್ಳ ಇತ್ತೀಚೆಗಷ್ಟೇ ಶಾಲೆಗೆ ಸೇರಿರುವ ನನ್ನ ಮಗು ಈ ರೀತಿ ಸಮಸ್ಯೆ ಅನುಭವಿಸುವುದನ್ನು ನೋಡಲು ಆಗುತ್ತಿಲ್ಲ. ಹೀಗಾಗಿ ನಾವು ಮನೆಯಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಶಾಲೆಯನ್ನು ಆರಿಸಿಕೊಂಡೆವು ಎಂದು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








