Viral: 2010 ರ ಆರಂಭದ ಬೆಂಗಳೂರನ್ನು ನೆನಪಿಸುವಂತಿದೆ ಈ ದೃಶ್ಯ; ಟ್ರಾಫಿಕ್ ರಹಿತ ಬೆಂಗಳೂರನ್ನು ಕಂಡು ಖುಷಿ ಪಟ್ಟ ವ್ಯಕ್ತಿ
ಬೆಂಗಳೂರು ಅಂದ್ರೆ ಮೊದಲು ನೆನಪಾಗೋದೇ ಟ್ರಾಫಿಕ್. ಬದುಕು ಕಟ್ಟಿಕೊಡುವ ಮಾಯಾನಗರಿ ಬೆಂಗಳೂರಿನಲ್ಲಿ ನೆಲೆಸಿರುವ ಜನರು ಈ ಟ್ರಾಫಿಕ್ ಸಮಸ್ಯೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಆದರೆ, ವರಮಹಾಲಕ್ಷ್ಮಿ ಹಬ್ಬದ ದಿನ ಟ್ರಾಫಿಕ್ ರಹಿತ ಬೆಂಗಳೂರನ್ನು ಕಂಡು ವ್ಯಕ್ತಿಯೊಬ್ಬರು ಖುಷಿ ಪಟ್ಟಿದ್ದಾರೆ. ತಮಗಾದ ಈ ಸಂತೋಷವನ್ನು ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ

ಬೆಂಗಳೂರಿನಲ್ಲಿ (Bengaluru) ದೊಡ್ಡ ಸಮಸ್ಯೆ ಎಂದರೆಈ ಟ್ರಾಫಿಕ್. ಅಪ್ಪಿತಪ್ಪಿಯೂ ಈ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರೆ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್‌ನಲ್ಲೇ ಕಳೆಯಬೇಕು. ದಿನದ ಫೀಕ್ ಹವರ್‌ಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ಟ್ರಾಫಿಕ್ ರಹಿತ ಬೆಂಗಳೂರನ್ನು ಕಾಣಸಿಗುವುದೇ ಅಪರೂಪ. ಆದರೆ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಟ್ರಾಫಿಕ್ ರಹಿತ (traffic free) ಬೆಂಗಳೂರನ್ನು ಕಂಡು ಖುಷಿ ಪಟ್ಟಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ವಾಹನ ದಟ್ಟಣೆ ಇಲ್ಲದ ಬೆಂಗಳೂರಿನ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಹದಿನೈದು ವರ್ಷಗಳ ಹಿಂದೆ ಬೆಂಗಳೂರನ್ನು ಕಂಡ ಹಾಗಾಯ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
r/Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಟ್ರಾಫಿಕ್ ರಹಿತ ಬೆಂಗಳೂರಿನ ಬಗ್ಗೆ ಪೋಸ್ಟ್ ಹಂಚಿಕೊಂಡ ಬಳಕೆದಾರರೊಬ್ಬರು, ‘ಇಂದಿನ ಟ್ರಾಫಿಕ್ ಹಾಗೂ ಹವಾಮಾನವು 2010 ರ ದಶಕದ ಆರಂಭದ ಬೆಂಗಳೂರನ್ನು ನೆನಪಿಸುತ್ತಿತ್ತು. ನಿನ್ನೆ ಪ್ರಯಾಣಿಸಲು ನನಗೆ 2 ಗಂಟೆಗಳು ಬೇಕಾಯಿತು, ಇಂದು ನನಗೆ 35 ನಿಮಿಷಗಳಷ್ಟೇ ಸಾಕಾಯಿತು. ಇಂದು ನಮ್ಮಈ ಊರು ನನಗೆ ತುಂಬಾ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: Video: ತೆರಿಗೆ ಹಣ ವಾಪಾಸ್ ಕೊಡಿ, ನಾವೇ ಬೆಂಗಳೂರು ಅಭಿವೃದ್ಧಿ ಪಡಿಸುತ್ತೇವೆ ಎಂದ ಬೆಂಗಳೂರಿನ ನಾಗರಿಕರು
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಇಂದು ವಾಹನ ದಟ್ಟಣೆಯಿಲ್ಲದ ರಸ್ತೆಗಳು ಹಾಗೂ ಆಫೀಸ್ ಪ್ರಯಾಣ ತುಂಬಾ ಹಿತಕರ ಅನುಭವವನ್ನು ತಂದುಕೊಟ್ಟಿತು ಎಂದಿದ್ದಾರೆ. ಬೆಂಗಳೂರನ್ನು ಟ್ರಾಫಿಕ್ ರಹಿತವಾಗಿ ನೋಡಲು ಸಿಗುವ ಖುಷಿಯೇ ಬೇರೆ ಎಂದು ಮತ್ತೊಬ್ಬರು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ದಿನ ಮೆಟ್ರೋ ಕೂಡ ಅಷ್ಟೊಂದು ಜನದಟ್ಟಣೆಯಿಂದ ಕೂಡಿಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sun, 10 August 25








