Optical Illusion : ಜಸ್ಟ್ 10 ಸೆಕೆಂಡುಗಳಲ್ಲಿ ಹಾರುವ ಹಕ್ಕಿಗಳ ನಡುವೆ ಅಡಗಿರುವ ಮನುಷ್ಯನ ಮುಖವನ್ನು ಹುಡುಕಿ
ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್ ಚಿತ್ರಗಳನ್ನು ಬಿಡಿಸಲು ಮುಂದಾಗುತ್ತಾರೆ. ಇದು ಟೈಮ್ ಪಾಸ್ ಮಾತ್ರವಲ್ಲ, ಮೆದುಳು ಹಾಗೂ ಕಣ್ಣಿಗೆ ಕೆಲಸ ಕೊಡುತ್ತದೆ.ಇದೀಗ ಕಠಿಣ ಸವಾಲಿನ ಫೋಟೋವೊಂದು ವೈರಲ್ ಆಗಿದೆ. ಹಾರಾಡುವ ಹಕ್ಕಿಗಳ ನಡುವೆ ಅಡಗಿರುವ ಮನುಷ್ಯನ ಮುಖವನ್ನು ಹತ್ತು ಸೆಕೆಂಡುಗಳೊಳಗೆ ಕಂಡುಹಿಡಿಯಬೇಕು. ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ, ಒಮ್ಮೆ ಚಿತ್ರದತ್ತ ಕಣ್ಣು ಹಾಯಿಸಿ.

ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳಲ್ಲಿನ ಒಗಟುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಈ ಒಗಟಿನ ಚಟುವಟಿಕೆಗಳು ನಮ್ಮನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡುವುದರೊಂದಿಗೆ ನಿಮ್ಮ ಬುದ್ಧಿ ಸಾಮರ್ಥ್ಯ ಹಾಗೂ ನೀವೆಷ್ಟು ಶಾರ್ಪ್ ಇದ್ದೀರಾ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಒಗಟುಗಳು ತುಂಬಾನೇ ಟ್ರಿಕ್ಕಿಯಾಗಿರುವ ಕಾರಣ ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದೀಗ ಮೆದುಳಿಗೆ ಕೆಲಸ ನೀಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಕಠಿಣ ಸವಾಲೊಂದನ್ನು ನೀಡಲಾಗಿದ್ದು, ಹಾರುವ ಹಕ್ಕಿಗಳ ನಡುವೆ ಅಡಗಿರುವ ಮುಖವನ್ನು ಪತ್ತೆ ಹಚ್ಚಬೇಕು. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವೂ ಭ್ರಮೆಯನ್ನು ಉಂಟು ಮಾಡುತ್ತವೆ. ಈ ಒಗಟನ್ನು ಬಿಡಿಸುವ ಮುನ್ನ ನಿಮಗಿರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿ ಇರಲಿ.
ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಭ್ರಮೆಯಲ್ಲೂ ಸಿಲುಕಿಸಬಹುದು, ನಿಮ್ಮ ಕಣ್ಣನ್ನು ಮೋಸಗೊಳಿಸಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವನ್ನು ನೋಡಿದಾಗ ಮೊದಲು ಕಣ್ಣಿಗೆ ಬೀಳುವುದೇ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ಹಕ್ಕಿಗಳ ಹಿಂಡು. ಆದರೆ ಈ ಹಕ್ಕಿಗಳ ನಡುವೆ ಅಡಗಿರುವ ಮನುಷ್ಯನ ಮುಖವನ್ನು ಪತ್ತೆ ಹಚ್ಚಬೇಕು. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನೀವು ಈ ಒಗಟು ಬಿಡಿಸಲು ಸಾಧ್ಯ. ಈ ಕಠಿಣ ಸವಾಲಿನ ಒಗಟು ಬಿಡಿಸಲು ನಿಮಗೆ ಇರುವ ಸಮಯ ಹತ್ತು ಸೆಕೆಂಡುಗಳು ಮಾತ್ರ. ಬೇರೆಡೆ ಗಮನ ಕೊಡದೇ ಈ ಚಿತ್ರವನ್ನೇ ನೋಡಿ, ನೀವು ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Optical Illusion: ಈ ಎರಡು ಚಿತ್ರಗಳ ನಡುವೆ ಏಳು ವ್ಯತ್ಯಾಸಗಳಿವೆ, 15 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ ನೋಡೋಣ
ಉತ್ತರ ಇಲ್ಲಿದೆ
ನಿರ್ದಿಷ್ಟ ಸಮಯದೊಳಗೆ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಬಿಡಿಸಲು ಸಾಧ್ಯವಾಗಿದೆ ಎಂದು ನಾವು ಭಾವಿಸುತ್ತೇವೆ. ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ನಿಮಗೆ ಸಣ್ಣ ಸುಳಿವನ್ನು ನಾವು ನೀಡುತ್ತೇವೆ. ಈ ಚಿತ್ರವನ್ನು ಬಹಳ ಸ್ಪಷ್ಟವಾಗಿ ಹತ್ತಿರದಿಂದ ನೋಡಿ, ಪಕ್ಷಿಯ ರೆಕ್ಕೆಗಳು ಹಾಗೂ ದೇಹವೂ ಮಾನವ ಮುಖದ ಬಾಹ್ಯ ರೇಖೆಯನ್ನು ರೂಪಿಸುತ್ತದೆ. ಪಕ್ಷಿಗಳ ನಡುವೆ ಇರುವ ಖಾಲಿ ಜಾಗವೂ ಕಣ್ಣುಗಳು, ಮೂಗು ಹಾಗೂ ಬಾಯಿಯಂತೆ ಕಾಣುತ್ತದೆ. ಆದರೆ ಒಮ್ಮೆ ನೋಡಿದ ಕೂಡಲೇ ಮುಖವು ನಿಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಮೇಲೆ ಹೇಳಿದ ಪ್ರದೇಶದ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರಿಕರಿಸಿ, ಆಗ ಖಂಡಿತ ಉತ್ತರ ಸಿಗುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








