AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 79ನೇ ಸ್ವಾತಂತ್ರ್ಯೋತ್ಸವಕ್ಕೆ ಅದ್ಭುತ ಅರ್ಥ ನೀಡುವ ದೃಶ್ಯ; ಹುಲಿ-ನವಿಲು ಮುಖಾಮುಖಿ

ಭಾರತ 79ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ದಿನಕ್ಕೆ ಅರ್ಥ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸೋಶಿಯಲ್​​​ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಲವು ಎಕ್ಸ್​​​​ ಬಳಕೆದಾರರೂ ಹಂಚಿಕೊಂಡಿದ್ದಾರೆ. ಹುಲಿ ಮತ್ತು ನವಿಲು ಮುಖಾಮುಖಿಯಾಗಿರುವ ಒಂದು ಅದ್ಭುತ ದೃಶ್ಯ ಇದಾಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: 79ನೇ ಸ್ವಾತಂತ್ರ್ಯೋತ್ಸವಕ್ಕೆ ಅದ್ಭುತ ಅರ್ಥ ನೀಡುವ ದೃಶ್ಯ; ಹುಲಿ-ನವಿಲು ಮುಖಾಮುಖಿ
ವೈರಲ್​​ ವಿಡಿಯೋ Image Credit source: Twitter
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 15, 2025 | 2:10 PM

Share

ಭಾರತವು  79ನೇ ವರ್ಷದ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸಿಕೊಳ್ಳುತ್ತಿದೆ. ದೇಶದಲ್ಲಿ ಸಂಭ್ರಮಾಚರಣೆ ಹೆಚ್ಚಿದ್ದು, ಅದ್ಧೂರಿಯಾಗಿ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಭಾರತದ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿದೆ.  ಹುಲಿ ಮತ್ತು ನವಿಲು (Peacock and Tiger) ಒಟ್ಟಿಗೆ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇಂತಹ ದೃಶ್ಯ ತುಂಬಾ ಅಪರೂಪವಾಗಿದ್ದು, ಎಲ್ಲರಿಗೂ ತುಂಬಾ ಖುಷಿಯನ್ನು ನೀಡಿದೆ.

ಭಾರತವು 79ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ಸಮಯದಲ್ಲಿ ಈ ವೀಡಿಯೊ ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಹುಲಿ ಶಕ್ತಿ ಮತ್ತು ಧೈರ್ಯವನ್ನು ಪ್ರತಿನಿಧಿಸಿದರೆ, ನವಿಲು ಭಾರತದ ಚೈತನ್ಯವನ್ನು ಸೆರೆಹಿಡಿಯುವ ಗುಣಗಳಾದ ಕೃಪೆ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಈ ವಿಡಿಯೋವನ್ನು ರಾಕೇಶ್ ಭಟ್ ಸೆರೆಹಿಡಿದಿದ್ದಾರೆ. ಇದನ್ನು ಅರಣ್ಯ ಸಂರಕ್ಷಣಾಧಿಕಾರಿ (IFS) ಡಾ. ಪಿ.ಎಂ. ಧಾಕಟೆ ಅವರು ತಮ್ಮ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ, ಒಂದೇ ಚೌಕಟ್ಟಿನಲ್ಲಿ ಒಟ್ಟಿಗೆ ಇರುವ ಅದ್ಭುತ ವಿಡಿಯೋ! ಭಾರತದ ರೋಮಾಂಚಕ ಚೈತನ್ಯದ ಪರಿಪೂರ್ಣ ಸಂಕೇತ ಎಂದು ಈ ವಿಡಿಯೋ ಶೀರ್ಷಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ
Image
78 ವರ್ಷಗಳ ಬಳಿಕ ಶುಕ್ರವಾರ ಬಂದ ಸ್ವಾತಂತ್ರ್ಯ ದಿನ;1947ರ ಕ್ಯಾಲೆಂಡರ್ ನೋಡಿ
Image
ಮಹಿಳೆಗೆ ಒಳ್ಳೆಯ ಕಲ್ಲಂಗಡಿ ಹುಡುಕಿಕೊಟ್ಟ ChatGPT, ಹೇಗೆ ಗೊತ್ತಾ?
Image
ಹೆಣ್ಣಿನ ಆಸೆಗೆ 8 ಲಕ್ಷ ರೂ ಕಳೆದುಕೊಂಡ ಯುವಕ
Image
ಸತತ 11 ವರ್ಷಗಳಿಂದ ವಡಾ ಪಾವ್ ಮಾರಿ ಜೀವನ ಸಾಗಿಸುತ್ತಿರುವ ಯಶಸ್ವಿ ಮಹಿಳೆ

ವೈರಲ್ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: 1947 Calendar Viral: 78 ವರ್ಷಗಳ ಬಳಿಕ ಶುಕ್ರವಾರವೇ ಬಂದ ಸ್ವಾತಂತ್ರ್ಯ ದಿನ; 1947 ರ ಕ್ಯಾಲೆಂಡರ್ ವೈರಲ್​​​

ಹುಲಿಯು ನವಿಲಿನ ಹಿಂದೆ ಸದ್ದಿಲ್ಲದೆ ಬರುತ್ತಿರುವುದನ್ನು ಈ ದೃಶ್ಯದಲ್ಲಿ ನೋಡಬಹುದು.  ಈ ವಿಡಿಯೋ ನೋಡಿದ ಬಳಕೆದಾರರಲ್ಲಿ ಒಬ್ಬರು ಎಂತಹ ಅಪರೂಪದ ಮತ್ತು ಸುಂದರವಾದ ದೃಶ್ಯ, ಹುಲಿಯ ಶಕ್ತಿ ಮತ್ತು ನವಿಲಿನ ಕೃಪೆ ಸಾಮರಸ್ಯದಿಂದ ಕೂಡಿದೆ. ಈ ಸ್ವಾತಂತ್ರ್ಯ ದಿನದಂದು ಭಾರತದ ಶ್ರೀಮಂತ ನೈಸರ್ಗಿಕ ಪರಂಪರೆಗೆ ಸೂಕ್ತವಾದ ಗೌರವ ಎಂದು ಕಾಮೆಂಟ್​​ ಮಾಡಿದ್ದಾರೆ. ಈ ದೃಶ್ಯ ಎಷ್ಟು ಸುಂದರ ಮತ್ತು ಶಾಂತಿಯುತವಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಈ ಅಪರೂಪದ ದೃಶ್ಯಾವಳಿ ಇಂದಿನ ದಿನಕ್ಕೆ ತುಂಬಾ ಪರಿಪೂರ್ಣವಾದ ಅರ್ಥವನ್ನು ನೀಡುತ್ತದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Fri, 15 August 25