1947 Calendar Viral: 78 ವರ್ಷಗಳ ಬಳಿಕ ಶುಕ್ರವಾರವೇ ಬಂದ ಸ್ವಾತಂತ್ರ್ಯ ದಿನ; 1947 ರ ಕ್ಯಾಲೆಂಡರ್ ವೈರಲ್
ಭಾರತದ 78ನೇ ಸ್ವಾತಂತ್ರ್ಯೋತ್ಸವದಂದು, 1947 ಮತ್ತು 2025ರ ಕ್ಯಾಲೆಂಡರ್ ಹೋಲಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 15, 1947 ಮತ್ತು ಆಗಸ್ಟ್ 15, 2025 ಎರಡೂ ಶುಕ್ರವಾರದಂದು ಬಂದಿರುವುದನ್ನು ಕಾಣಬಹುದು. ಈ ಅಪರೂಪದ ಘಟನೆ 78 ವರ್ಷಗಳ ನಂತರ ಸಂಭವಿಸಿದೆ. ಈ ಈ ಹಳೆಯ ಕ್ಯಾಲೆಂಡರ್ನ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.

1947 ಆಗಸ್ಟ್ 15 ರಂದು ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದ ದಿನ. ಈ ದಿನವು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷ ಆಚರಿಸಲಾಗುತ್ತಿದೆಯಾದರೂ ಈ ವರ್ಷ ಬಹಳ ವಿಶೇಷವಾಗಿದೆ. 78 ವರ್ಷಗಳ ಬಳಿಕ ಸ್ವಾತಂತ್ರ್ಯೋತ್ಸವ ಶುಕ್ರವಾರದಂದು ಬಂದಿದೆ. ಅಂದರೆ 1947 ರ ಕ್ಯಾಲೆಂಡರ್ ಮತ್ತು 2025ರ ಕ್ಯಾಲೆಂಡರ್ನಲ್ಲಿ ಬಹಳಷ್ಟು ಹೋಲಿಕೆಯಿರುವುದನ್ನು ಕಾಣಬಹುದು. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
@anasuya.shastri.96 ಎಂಬ ಫೇಸ್ ಬುಕ್ ಖಾತೆಯಲ್ಲಿ 1947 ರ ಕ್ಯಾಲೆಂಡರ್ನ ಫೋಟೋ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ಕ್ಯಾಲೆಂಡರ್ನಲ್ಲಿ ಆಗಸ್ಟ್ 15 ಶುಕ್ರವಾರ ಬಂದಿರುವುದನ್ನು ಕಾಣಬಹುದು. ಅದಲ್ಲದೇ 2025ರ ಕ್ಯಾಲೆಂಡರ್ಗೂ ಈ ಕ್ಯಾಲೆಂಡರ್ಗೂ ಸಾಕಷ್ಟ ಹೋಲಿಕೆ ಇರುವುದು ಇದರ ವಿಶೇಷತೆ. ಈ ಕಾಕತಾಳೀಯ ಸಂಭವಿಸಲು ಸುಮಾರು 78 ವರ್ಷಗಳು ಬೇಕಾಯಿತು.
ಇದನ್ನೂ ಓದಿ: ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಈ ಕ್ಯಾಲೆಂಡರ್ ಮತ್ತೊಂದು ವಿಶೇಷತೆ ಏನೆಂದರೆ ಆಗಸ್ಟ್ 15 ರ ರಜೆ ಇರದ ಕೊನೆ ಯ ಕ್ಯಾಲೆಂಡರ್ ಕೂಡ ಇದು ಹೌದು. ಬೆಲ್ಲದ ಕಂಪೆನಿಯೊಂದರ ಕ್ಯಾಲೆಂಡರ್ ಎಂಬುದನ್ನು ಇಲ್ಲಿ ಕಾಣಬಹುದು. ಸದ್ಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರೊದಾಡಿತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Fri, 15 August 25




