Viral: ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಕೆಲವರಿಗೆ ಕೆಲಸದ ಸ್ಥಳಗಳಲ್ಲಿ ಹೆಚ್ಚು ಒತ್ತಡವಿರುತ್ತದೆ. ಹೀಗಾದಾಗ ಕೆಲಸಕ್ಕೆ ರಾಜೀನಾಮೆ ನೀಡುವ ಎನ್ನುವ ನಿರ್ಧಾರಕ್ಕೂ ಬರುತ್ತಾರೆ. ಇನ್ನು ಕೆಲವರು ಯಾವುದೇ ಸುಳಿವು ನೀಡದೇನೇ ಏಕಾಏಕಿ ಜಾಬ್‌ಗೆ ರಿಸೈನ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿಯೂ ಸ್ಯಾಲರಿ ಕ್ರೆಡಿಟ್ ಆದ ಕೆಲವೇ ಕೆಲವು ನಿಮಿಷದಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಹೆಚ್ ಆರ್ ಈ ಬಗೆಗಿನ ಪೋಸ್ಟ್ ಹಂಚಿಕೊಂಡು ಇದು ನೈತಿಕತೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಓದು ಮುಗಿಯುತ್ತಿದ್ದಂತೆ ಕೈ ತುಂಬಾ ಸಂಬಳ ಸಿಗುವ ಜಾಬ್ ಸಿಕ್ಕರೆ ಸಾಕು ಎಂದು ಬಯಸುವುದು ಸಹಜ. ಹೆಚ್ಚಿನವರು ಖಾಸಗಿ ಕಂಪೆನಿ (Private company)ಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗವನ್ನು ಹುಡುಕುತ್ತಾರೆ. ಇನ್ನು ಕೆಲಸವೆಂದ ಮೇಲೆ ಕಿರಿಕಿರಿ, ಒತ್ತಡ ಇರುವುದು ಸರ್ವೇ ಸಾಮಾನ್ಯ. ಏನೇ ಆದ್ರೂ ಕಂಪನಿ ಹಾಕಿದ ನಿಯಮಗಳನ್ನು ಉದ್ಯೋಗಿಗಳು ತಪ್ಪದೇ ಪಾಲಿಸಬೇಕು. ಆದರೆ ಈ ಉದ್ಯೋಗಿಯೂ ವಿಭಿನ್ನವಾಗಿ ರಾಜೀನಾಮೆ ನೀಡಿದ್ದಾನೆ. ಸಾಲ್ಯರಿ ಅಕೌಂಟ್‌ಗೆ ಕ್ರೆಡಿಟ್ ಆದ ಐದೇ ನಿಮಿಷಕ್ಕೆ ಉದ್ಯೋಗಿಯೂ ರಾಜೀನಾಮೆಯನ್ನು (Job resign) ಇಮೇಲ್ ಮೂಲಕ ಹೆಚ್ ಆರ್‌ಗೆ ಕಳುಹಿಸಿದ್ದಾನೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಹೆಚ್ ಆರ್ ಈ ರೀತಿ ಮಾಡುವುದು ಸರಿಯೇ ಎಂದು ಕೇಳಿದ್ದಾರೆ. ಸದ್ಯಕ್ಕೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಲಿಂಕ್ಡ್ ಇನ್ ಖಾತೆಯಲ್ಲಿ ಹೆಚ್ ಆರ್ ವೃತ್ತಿಪರರೊಬ್ಬರು ಉದ್ಯೋಗಿಯ ದಿಢೀರ್ ರಾಜೀನಾಮೆ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ಉದ್ಯೋಗಿಯ ಬ್ಯಾಂಕ್ ಅಕೌಂಟ್ ಗೆ ಸ್ಯಾಲರಿ ಕ್ರೆಡಿಟ್ ಆಗಿದೆ. ಆದರೆ 10.05ಕ್ಕೆ ಆತನಿಂದ ರಾಜೀನಾಮೆಯ ಮೇಲ್ ಬಂದಿದೆ. ಹೊಸ ಉದ್ಯೋಗಿಯನ್ನು ಸಂಸ್ಥೆಗಳಿಗೆ ಸೇರಿಸುವ ವೇಳೆ, ಅವರಿಗೆ ಸರಿಯಾದ ತರಬೇತಿಯನ್ನು ಕೊಡುತ್ತೇವೆ. ಆದರೆ ಈ ರೀತಿ ರಾಜೀನಾಮೆ ನೀಡುವುದೇ ಸರಿಯೇ. ಸಂಬಳ ಪಡೆದು ಐದೇ ನಿಮಿಷದಲ್ಲಿ ರಾಜೀನಾಮೆಯನ್ನು ನೀಡಿದ್ದಾರೆ, ಇದು ನೈತಿಕತೆಯೇ ಎಂದು ಪೋಸ್ಟ್ ನಲ್ಲಿ ಹಂಚಿಕೊಂಡು ಈ ಉದ್ಯೋಗಿಯ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Viral: ಗರ್ಭಿಣಿ ಪತ್ನಿಗಾಗಿ ಕೋಟಿ ಕೋಟಿ ಸಂಬಳದ ಕೆಲಸ ತ್ಯಜಿಸಿದ ವ್ಯಕ್ತಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆಲ ಬಳಕೆದಾರರು ಉದ್ಯೋಗಿಯ ಪರವಾಗಿ ನಿಂತರೆ, ಇನ್ನು ಕೆಲವರು ಉದ್ಯೋಗಿ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು, ಸ್ಯಾಲರಿ ಕ್ರೆಡಿಟ್ ಆದ ಕೆಲವೇ ಕ್ಷಣಗಳಲ್ಲಿ ಉದ್ಯೋಗಿ ರಾಜೀನಾಮೆ ನೀಡಿದ್ದು, ಇದು ಆತನ ಪ್ರಬುದ್ಧತೆ ಹಾಗೂ ಹೊಣೆಗಾರಿಕೆಯ ಕೊರತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಏನಾದ್ರು ಸಮಸ್ಯೆಯಿದ್ದರೆ ಅದನ್ನು ಹೆಚ್ ಆರ್ ಅಥವಾ ಮೇಲಿನ ಸಿಬ್ಬಂದಿಗಳೊಂದಿಗೆ ಹೇಳಿ ಸಹಾಯವನ್ನು ಕೇಳಬಹುದಿತ್ತು. ನೀವು ಮಾಡಿದ್ದು ಸರಿಯಲ್ಲ, ಒಳ್ಳೆಯ ರೀತಿಯಲ್ಲಿ ರಾಜೀನಾಮೆ ನೀಡಿ ಪ್ರಜ್ಞಾಪೂರ್ವಕವಾಗಿಯೇ ನಿರ್ಗಮಿಸಬಹುದಿತ್ತು ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಉದ್ಯೋಗಿಗೆ ತನ್ನದೇ ಸಮಸ್ಯೆ ಇದ್ದೀರಬಹುದು, ಹೀಗಾಗಿ ಆತ ಈ ನಿರ್ಧಾರ ತೆಗೆದುಕೊಂಡಿರಬಹುದು, ಆದರೆ ಆತನ ನಿರ್ಧಾರವನ್ನು ಗೌರವಿಸಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








