Video: ಇಂಟರ್ನ್‌ಶಿಪ್‌ಗೆಂದು ಬಂದು ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು
ಭಾರತಕ್ಕೆ ಬಂದ ವಿದೇಶಿಗರು ತಮ್ಮ ಒಳ್ಳೆಯ ನಡೆ ನುಡಿಯಿಂದಲೇ ಸುದ್ದಿಯಾಗುತ್ತಾರೆ. ಆದರೆ ಇದೀಗ ದೂರದ ಊರಿಂದ ಇಂಟರ್ನ್‌ಶಿಪ್‌ಗಾಗಿ ಬಂದ ವಿದೇಶಿಗರು ಶಾಲಾವಿದ್ಯಾರ್ಥಿಗಳ ಜೊತೆಗೆ ಬೆರೆದು ಅವರ ಅಗತ್ಯಕ್ಕೆ ಸ್ಪಂದಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಹಾಗಾದ್ರೆ ಈ ವಿದೇಶಿಗರು ಮಾಡಿದ ಕೆಲಸವೇನು? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಉಡುಪಿ, ಆಗಸ್ಟ್ 15: ವಿದೇಶಿಗರು (foreigners) ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ರುಚಿಕರ ಆಹಾರಗಳನ್ನು ಸವಿಯುವುದನ್ನು ನೋಡಿರುತ್ತೀರಿ. ಕೆಲವರು ಇಲ್ಲಿಯೇ ನೆಲೆಸುವ ಮೂಲಕ ಭಾರತವನ್ನು ತನ್ನದೇ ದೇಶ ಎನ್ನುವ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಹೀಗೆ ವಿದೇಶದಿಂದ ಬಂದ ಜನರು ಒಳ್ಳೆಯ ಕೆಲಸ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಭಾರತೀಯರಿಗೆ ಸ್ವಚ್ಛತೆಯ ಪಾಠ ಸೇರಿದಂತೆ ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ಇದೀಗ ವಿದೇಶಿಗರು ಇಂಟರ್ನ್‌ಶಿಪ್‌ಗೆಂದು ಉಡುಪಿಯ ಬೈಂದೂರು ವಲಯದ ಕನ್ಯಾನ ಗ್ರಾಮದ ಕೂಡ್ಲು (Kudlu of Kanyana village in Byndoor zone of Udupi) ಸರಕಾರಿ ಶಾಲೆಗೆ ಬಂದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವ ಮೂಲಕ ಎರಡು ತಿಂಗಳುಗಳ ಕಾಲ ಇಲ್ಲಿ ಕಳೆದಿದ್ದಾರೆ. ಕೊನೆಗೆ ಇಲ್ಲಿಂದ ತೆರಳುವಾಗ ಶಾಲಾ ಮಕ್ಕಳಿಗೆ ಅಗತ್ಯವಾಗಿರುವ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು elkaani ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಇವರು ದೂರದ ಊರಿನಿಂದ ಇಂಟರ್ನ್‌ಶಿಪ್‌ಗಾಗಿ ನಮ್ಮ ಊರಿಗೆ ಬಂದವರು. ಸುಮಾರು ಎರಡು ತಿಂಗಳುಗಳ ಕಾಲ ಬೈಂದೂರು ವಲಯದ ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲಾವಿದ್ಯಾರ್ಥಿಗಳ ಜೊತೆ ಆಟಪಾಠದಲ್ಲಿ ಭಾಗಿಯಾದ ಅವರು ಕೊನೆಯಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸಿದ್ದಾರೆ. ಮಕ್ಕಳಿಗೆ ಪಾಠ ಪ್ರವಚನ ಮಾಡಿದ ಈ ಫ್ರಾನ್ಸ್ ದೇಶದ ನಾಗರೀಕರು ಇಲ್ಲಿನ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಿದ್ದ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಹಾಗಂತ ಹಣ ಕೊಟ್ಟು ಕೆಲಸ ಮಾಡಿಸದೇ ಇವರು ಸ್ವತಃ ಶೌಚಾಲಯದ ಗುಂಡಿ ತೆಗೆಯುವುದರಿಂದ ಹಿಡಿದು ಶೌಚಗೃಹದ ಮೇಲ್ಪಾಡು ನಿರ್ಮಾಣವನ್ನು ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇಂಟರ್ನ್‌ಗಾಗಿ ವಿದೇಶದಿಂದ ಬಂದವರು ಶಾಲಾ ಮಕ್ಕಳ ಜೊತೆಗೆ ಬೆರೆಯುತ್ತಿರುವುದನ್ನು ಕಾಣಬಹುದು. ಈ ಶಾಲಾ ಮಕ್ಕಳಿಗೆ ಅಗತ್ಯವಿರುವ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದು, ತಾವೇ ಈ ಶೌಚಾಲಯ ನಿರ್ಮಾಣದ ಕೆಲಸ ಮಾಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: Viral: ಭಾರತದ ಜನರ ಮನೋಭಾವ ಬದಲಾಗಬೇಕು, 1 ತಿಂಗಳ ಕಸವನ್ನು 15 ಸೆಕೆಂಡುಗಳಲ್ಲಿ ಸ್ವಚ್ಛಗೊಳಿಸಿದ ವಿದೇಶಿಗ
ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಸಿವಿಲ್ ಇಂಜಿನಿಯರಿಂಗ್ ಎಂದು ಹೇಳಿದ್ದಾರೆ. ಇನ್ನೊಬ್ಬರು ನಿಮ್ಮ ಕೆಲಸಕ್ಕೆ ನನ್ನದೊಂದು ಮೆಚ್ಚುಗೆ ಇರಲಿ, ಅದ್ಭುತ ಎಂದಿದ್ದಾರೆ. ನಿಜಕ್ಕೂ ವಿದೇಶಿಗರು ನಮಗೆಲ್ಲರಿಗೂ ಮಾದರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಚಪ್ಪಾಳೆ ತಟ್ಟುವ ಸಿಂಬಲ್ ಕಳುಹಿಸುವ ಮೂಲಕ ವಿದೇಶಿಗರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Fri, 15 August 25




