Video: ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ, ಬೆಲೆ ಸಹಿತ ವಿವರಿಸಿದ ಭಾರತೀಯ ಮಹಿಳೆ
ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ ಜೀವನ ನಡೆಸುವುದು ತುಂಬಾ ಸುಲಭ. ಕೈ ತುಂಬಾ ಸಂಬಳ ಸಿಗುತ್ತದೆ, ಹೀಗಾಗಿ ಆರಾಮಾದಾಯಕವಾಗಿ ಜೀವನ ನಡೆಸಬಹುದು ಎಂದುಕೊಂಡವರೇ ಹೆಚ್ಚು. ಆದರೆ ಇದೀಗ ಕೆನಾಡದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆ ಇಲ್ಲಿನ ಬದುಕು ಎಷ್ಟು ಕಷ್ಟ ಹಾಗೂ ಭಾರತಕ್ಕೆ ಹೋಲಿಸಿದ್ರೆ ಇಲ್ಲಿ ದಿನಸಿ ವಸ್ತುಗಳು ದುಬಾರಿ ಎನ್ನುತ್ತಾ, ಬೆಲೆಯ ಬಗ್ಗೆ ಹಂಚಿಕೊಂಡಿದ್ದಾರೆ. ಇಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇತ್ತೀಚೆಗಿನ ದಿನಗಳಲ್ಲಿ ಎಲ್ಲವು ದುಬಾರಿಯಾಗಿದೆ. ಹೀಗಾಗಿ ದಿನನಿತ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ತಿಂಗಳ ಸಂಬಳ ಸಾಲುವುದಿಲ್ಲ. ದಿನಸಿ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ ಎಂದು ಭಾರತೀಯ ಹೆಣ್ಣು ಮಕ್ಕಳು ಹೇಳುವುದನ್ನು ನೋಡಿರಬಹುದು. ಆದರೆ ವಿದೇಶಕ್ಕೆ ಹೋಲಿಸಿದ್ರೆ ಇಲ್ಲಿ ದಿನಸಿ ವಸ್ತುಗಳ (Grocery items) ಬೆಲೆ ಕಡಿಮೆ ಎಂದೇಳಬಹುದು. ಕೆನಡಾದಲ್ಲಿ (Canada) ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ವಿಡಿಯೋ ಮಾಡಿ ಇಲ್ಲಿ ದಿನಸಿ ವಸ್ತುಗಳು ಎಷ್ಟು ದುಬಾರಿ ಎನ್ನುವುದನ್ನು ತಿಳಿಸಿದ್ದಾಳೆ. ಈ ವಿಡಿಯೋ ನೋಡಿದ ಬಳಕೆದಾರರು ಕಡಿಮೆ ಸಂಬಳ ಆದ್ರೂ ಭಾರತದಲ್ಲಿ ಜೀವನ ನಡೆಸೋದು ಸುಲಭ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಕನುಪ್ರಿಯಾ ಎಂಬ ಮಹಿಳೆ kanutalescanada ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಬ್ರೆಡ್ ಹಾಗೂ ಹಾಲು ಖರೀದಿಸಿದ ನಂತರ ನೀವು ಎಂದಾದರೂ ಬೇಸರಗೊಂಡಿದ್ದೀರಾ?. ಕೆನಡಾಕ್ಕೆ ಸ್ವಾಗತ, ಭಾರತ ಹಾಗೂ ಕೆನಡಾದ ದಿನಸಿ ವಸ್ತುಗಳ ಬೆಲೆ ನೋಡಿ ನೀವು ಆಘಾತಗೊಳ್ಳಲು ಸಿದ್ಧರಾಗಿ!. ಈ ವಿಡಿಯೋ ಹೃದಯಹೀನರಿಗೆ ಅಲ್ಲ ಎಂದು ಬರೆದುಕೊಂಡಿದ್ದಾರೆ.
ವಿದೇಶದಲ್ಲಿ ದಿನಸಿ ವಸ್ತುಗಳು ಬಲು ದುಬಾರಿ
ಈ ವಿಡಿಯೋದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮಹಿಳೆ, ಕೊತ್ತಂಬರಿ ಸೊಪ್ಪಿನ ಬೆಲೆ ಕೆನಡಾದಲ್ಲಿ 90 ರೂಪಾಯಿಗಳು ಎಂದು ಹಂಚಿಕೊಳ್ಳುವ ಮೂಲಕ ವಿಡಿಯೋ ಪ್ರಾರಂಭಿಸಿದ್ದಾರೆ. ಈ ಮಹಿಳೆ ಹೂಕೋಸು, ಕ್ಯಾರೆಟ್, ಸೇಬು, ಹಾಲು ಹಾಗೂ ಇತರ ಉತ್ಪನ್ನಗಳ ಬೆಲೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ 20 ರೂಬೆಲೆಗೆ ಸಿಗುವ ಹೂಕೋಸು ಕೆನಡಾದಲ್ಲಿ 3.76 ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ಹೇಳುವುದಾದರೆ 237.25 ರೂ ಆಗುತ್ತದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಒಂದು ಕ್ಯಾರೆಟ್ ಬೆಲೆ $1.06 (66.88 ರೂ), ಒಂದು ಮಾವಿನ ಬೆಲೆ $1.68, (106 ರೂ), ಒಂದು ಸೇಬು ಬೆಲೆ $1.25, ( 78.87 ರೂ), ಒಂದು ಆಲೂಗಡ್ಡೆ ಬೆಲೆ $1.24 (78.24 ರೂ) ಎಂದು ಹೇಳುತ್ತಿದ್ದಾಳೆ. ಅದೇ ರೀತಿ, 1 ಪೌಂಡ್ ಬೆಳ್ಳುಳ್ಳಿ ಬೆಲೆ $6.27 ( 395.62 ರೂ) 4 ಪೌಂಡ್ ಹಾಲು ಬೆಲೆ $6.28( 396.25 ರೂ), ಒಂದು ಪ್ಯಾಕೆಟ್ ಬ್ರೆಡ್ ಬೆಲೆ $3.64 (230 ರೂ), 750 ಗ್ರಾಂ ಮೊಸರು ಬೆಲೆ $3.18 (200.65 ರೂ) ದಿನಸಿ ವಸ್ತುಗಳ ಬೆಲೆಯನ್ನು ಭಾರತದ ರೂಗಳಿಗೆ ಹೋಲಿಸಿರುವುದನ್ನು ನೋಡಬಹುದು.
ಇದನ್ನೂ ಓದಿ: Video: ಭಾರತದಲ್ಲಿ ಹೇಗೆ ರಸ್ತೆ ದಾಟಬೇಕೆಂದು ತನ್ನ ಸ್ನೇಹಿತೆಗೆ ಹೇಳಿಕೊಟ್ಟ ರಷ್ಯನ್ ಮಹಿಳೆ
ಈ ವಿಡಿಯೋ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಬಳಕೆದಾರರೊಬ್ಬರು, ಭಾರತದಲ್ಲಿ ತರಕಾರಿಗಳನ್ನು ಖರೀದಿಸಿದ್ರೆ ಕೊತ್ತಂಬರಿ ಸೊಪ್ಪಿನ ಕಟ್ಟನ್ನು ಉಚಿತವಾಗಿ ನೀಡಲಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕೆನಡಾದಲ್ಲಿ ನಿಮ್ಮ ತಿಂಗಳ ಸಂಬಳ ಎಷ್ಟೇಂದು ಭಾರತೀಯ ರೂಗಳಲ್ಲಿ ಹೇಳಬಹುದೇ ಎಂದು ಕೇಳಿದ್ದಾರೆ. ಇಲ್ಲಿ ಬೆಲೆ ಮುಖ್ಯ ಆಗಲ್ಲ, ಕೆಲವು ವಸ್ತುಗಳು ಭಾರತಕ್ಕೆ ಹೋಲಿಸಿದ್ರೆ ದುಬಾರಿಯಾಗಿದೆ. ಆದರೆ ಕ್ವಾಲಿಟಿಯೂ ಭಾರತಕ್ಕಿಂತ ಉತ್ತಮವಾಗಿದೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








