AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹಲೋ ಒಳ್ಳೆಯ ಕಲ್ಲಂಗಡಿ ಹುಡುಕಲು ಸಹಾಯ ಮಾಡುತ್ತೀರಾ? ಎಂದು ChatGPTನ ಕೇಳಿದ ಮಹಿಳೆ

ChatGPT, Gemini ಮತ್ತು Grok ನಂತಹ AI ಉಪಕರಣಕ್ಕೆ ಹಲವು ಜನ ಸೋತಿದ್ದಾರೆ. ದೈನಂದಿನ ಜೀವನದಲ್ಲಿ ಅವುಗಳನ್ನು ಬಳಸಲು ಜನ ಮುಂದಾಗುತ್ತಿದ್ದಾರೆ. ಇದೀಗ ಇಲ್ಲೊಬ್ಭಳು ಮಹಿಳೆ ChatGPT ಬಳಸಿಕೊಂಡು ಉತ್ತಮ ಕಲ್ಲಂಗಡಿ ಯಾವುದು ಎಂಬುದನ್ನು ಕೇಳಿ, ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ಬಗ್ಗೆ ಭಾರೀ ವೈರಲ್​​ ಆಗುತ್ತಿದೆ. ಇಲ್ಲಿದೆ ನೋಡಿ

Viral: ಹಲೋ ಒಳ್ಳೆಯ ಕಲ್ಲಂಗಡಿ ಹುಡುಕಲು ಸಹಾಯ ಮಾಡುತ್ತೀರಾ? ಎಂದು ChatGPTನ ಕೇಳಿದ ಮಹಿಳೆ
ವೈರಲ್​ ವಿಡಿಯೋ
ಸಾಯಿನಂದಾ
|

Updated on:Aug 14, 2025 | 6:13 PM

Share

ಜನ ChatGPT, Gemini ಮತ್ತು Grok ನಂತಹ AIಗೆ ತಲೆಬಾಗುತ್ತಿದ್ದಾರೆ. ಅದರ ಸಹಾಯದಿಂದ ಎಲ್ಲವನ್ನು ಪಡೆಯುವ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ದೈನಂದಿನ ಜೀವನದಲ್ಲಿ ಅವುಗಳನ್ನು ಬಳಸಲು ಜನ ಮುಂದಾಗುತ್ತಿದ್ದಾರೆ. ಇದೀಗ ಇಂತಹದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮಹಿಳೆಯೊಬ್ಬರು ಈ ಬಗ್ಗೆ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಸೂಪರ್‌ಮಾರ್ಕೆಟ್ ಶಾಪಿಂಗ್ ವೇಳೆ ಈ ಮಹಿಳೆ ChatGPT ಸಹಾಯ ಕೇಳಿದ್ದಾರೆ. ರಾವಳಿ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಕೆಟ್‌ನಲ್ಲಿ ಹಲವಾರು ಕಲ್ಲಂಗಡಿಗಳನ್ನು (watermelon) ತೋರಿಸುವ ಫೋಟೋವನ್ನು ಕ್ಲಿಕ್ ಮಾಡಿ ಅದನ್ನು ಎಐಯಲ್ಲಿ ಹಾಕಿ, ಯಾವುದು ಉತ್ತಮ ಕಲ್ಲಂಗಡಿ? ಎಂದು ಕೇಳಿದ್ದಾರೆ. ಇದೀಗ ಎಐ ನೀಡಿದ ಉತ್ತರಕ್ಕೆ ಎಲ್ಲರೂ ಶಾಕ್​​ ಆಗಿದ್ದಾರೆ.

ಉತ್ತಮ ಕಲ್ಲಂಗಡಿಯನ್ನು ಗುರುತಿಸಲು ಸಾಮಾನ್ಯ ಕೆಲಸಕ್ಕೆ ಎಐ ಉತ್ತರಿಸಿದೆ. ದೊಡ್ಡ, ಹಳದಿ ಬಣ್ಣ, ದೊಡ್ಡ ಚುಕ್ಕೆಗಳಿರುವ ತುಲನಾತ್ಮಕವಾಗಿ ಏಕರೂಪದ ಆಕಾರವನ್ನು ಹೊಂದಿರುವ ಒಂದನ್ನು ಹುಡುಕುವಂತೆ ಹೇಳಿದೆ. ಅದರಂತೆ ಅಂತಹ ಕಲ್ಲಂಗಡಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ನಂತರ ಅದರ ಫೋಟೋವನ್ನು ತೆಗೆದು ಹಾಕಿದ್ದು, ಆದರೆ, ChatGPT ನಲ್ಲಿ ಒಂದು ಫೋಟೋವನ್ನು ಕಳಿಸಿದೆ. ನಂತರ ಕಲ್ಲಂಗಡಿಯನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ
Image
ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ
Image
IIM -B ಸಂಸ್ಥೆಯ ಜಾಕೆಟ್​​ ಹಾಕಿಕೊಂಡು ಆಟೋ ಓಡಿಸಿದ ಚಾಲಕ
Image
ಅವಾಚ್ಯ ಶಬ್ದ ಬಳಸುವುದರಲ್ಲಿ ದೆಹಲಿ ನಂಬರ್​​ ಒನ್
Image
1 ತಿಂಗಳ ಕಸವನ್ನು 15 ಸೆಕೆಂಡುಗಳಲ್ಲಿ ಸ್ವಚ್ಛಗೊಳಿಸಿದ ವಿದೇಶಿಗ

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​​​

ಇದನ್ನೂ ಓದಿ: ಹೆಣ್ಣಿನ ಆಸೆಗೆ 8 ಲಕ್ಷ ರೂ ಕಳೆದುಕೊಂಡ ಯುವಕ

ಈ ಬಗ್ಗೆ ಅವರು ತಮ್ಮ ಸೋಶಿಯಲ್​​ ಮೀಡಿಯಾದಲ್ಲಿ, ನಾವು ಒಂದು ಒಳ್ಳೆಯ ಕಲ್ಲಂಗಡಿಯನ್ನು ಆಯ್ಕೆ ಮಾಡುವಂತೆ ಕೇಳಿದ್ದು, ಆದರೆ ChatGPT  ಸಿಹಿ ಹಾಗೂ ಉತ್ತಮ ಕಲ್ಲಂಗಡಿಯನ್ನು ನೀಡಿದೆ. ಇದನ್ನು ಕತ್ತರಿಸಿ ತಿಂದಾಗ ಒಳ್ಳೆಯ ರುಚಿ ಹಾಗೂ ಆನಂದವನ್ನು ನೀಡಿದೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ 7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡು , ದೈನಂದಿನ ಜೀವನದಲ್ಲಿ AI ಪರಿಕರಗಳ ಈ ಬಳಕೆಯು ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ ಎಂದು ಹೇಳಲಾಗಿದೆ. ಇದು ಅದ್ಭುತವಾಗಿದೆ, ಆದರೆ ಅದೇ ಸಮಯದಲ್ಲಿ, ನಾವು ಫೋನ್ ಸಂಖ್ಯೆಗಳನ್ನು ನೆನಪಿಸಿಕೊಳ್ಳುವಂತಹ ಮೂಲಭೂತ ಕೌಶಲ್ಯಗಳನ್ನು ಮರೆತುಬಿಡುತ್ತಿದ್ದೇವೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Thu, 14 August 25

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್