Video: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
ಭಾರತಕ್ಕೆ ಜಗತ್ತಿನ ಇತರ ದೇಶಗಳನ್ನು ಆಕರ್ಷಣೆ ಮಾಡುವ ಶಕ್ತಿ ಇದೆ. ಇದರಿಂದಲೇ ಭಾರತ ವಿಶ್ವ ಮಟ್ಟದ ಸಾಧನೆಗಳನ್ನು ಇಂದಿಗೂ ಮಾಡುತ್ತಿದೆ. ಭಾರತದ ಆಚರಣೆ, ಬೆಳವಣಿಗೆ, ಎಲ್ಲವನ್ನು ನೋಡಿ ಅದೆಷ್ಟೋ ವಿದೇಶಿಗರು ಭಾರತಕ್ಕೆ ಬಂದು ಶಾಶ್ವತವಾಗಿ ನೆಲೆಸಿದ್ದಾರೆ. ಇದೀಗ ಇಲ್ಲೊಂದು ವಿದೇಶಿ ದಂಪತಿಗಳು ಭಾರತದಲ್ಲಿ ಬಂದು ನೆಲೆಸಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ

ಭಾರತಕ್ಕೆ (India) ಇಡೀ ಜಗತ್ತನ್ನು ಸೆಳೆಯುವ ಶಕ್ತಿ ಇದೆ. ಇಲ್ಲಿನ ಆಚರಣೆ, ಜನರಿಗೆ ಅಂತಹ ಮಹತ್ವವಿದೆ. ಭಾರತ “ಅತಿಥಿ ದೇವೋ ಭವ” ಎಂಬ ಮಾತಿನಂತೆ ನಡೆದುಕೊಳ್ಳುತ್ತದೆ. ಭಾರತ ಇಂತಹ ಸ್ವಭಾವವನ್ನು ಹಿಂದಿನಿಂದಲ್ಲೂ ಹೊಂದಿದೆ. ನಮ್ಮ ಹಿರಿಯರು ಮಾಡಿದ ಆಚರಣೆಗಳೇ ಅದೆಷ್ಟೋ ಜನ ಭಾರತದಲ್ಲಿ ಉಳಿಯುವಂತೆ ಮಾಡಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಿ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರತದ ಬಗ್ಗೆ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ, ಅಮೆರಿಕದ ಮಹಿಳೆಯೊಬ್ಬರು (American woman) ಭಾರತದ ಭಾಷೆಯನ್ನು, ಇಲ್ಲಿ ಆಚರಣೆಗಳನ್ನು ಕಲಿತುಕೊಂಡ ಒಬ್ಬ ಪರಿಪೂರ್ಣ ಭಾರತೀಯರಾಗಿದ್ದಾರೆ. ಕ್ರಿಸ್ಟನ್ ಫಿಷರ್ ಎಂಬುವವರು ತಮ್ಮ ಕುಟುಂಬದ ಜತೆಗೆ ಭಾರತಕ್ಕೆ ಬಂದ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
ಈ ಬಗ್ಗೆ ಕ್ರಿಸ್ಟನ್ ಫಿಷರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕ್ಯಾಮರದಲ್ಲಿ ಸೆರೆಹಿಡಿಯಲಾದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೆಸರು ಕ್ರಿಸ್ಟನ್, ಮತ್ತು ಇದು ನನ್ನ ಕಥೆ. ನಾನು ಮೂಲತಃ ಯುನೈಟೆಡ್ ಸ್ಟೇಟ್ಸ್‌ನವಳು, ಮತ್ತು ನಾನು ಎಂಟು ವರ್ಷಗಳ ಹಿಂದೆ ನನ್ನ ಪತಿಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದೆ, ನಾವು ಭಾರತವನ್ನು ಪ್ರೀತಿಸುತ್ತಿದ್ದೆವು. ನಾವು ಮೂರು ತಿಂಗಳು ಇಲ್ಲೇ ಇದ್ದೆವು, ಈ ಮೂರು ತಿಂಗಳ ಪ್ರವಾಸ ನಮ್ಮನ್ನು ಬದಲಾವಣೆ ಮಾಡಿದೆ. ಅಮೆರಿಕಕ್ಕೆ ಹಿಂದಿರುಗಿ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತ ನಂತರವೂ ಭಾರತಕ್ಕೆ ಮರಳುವ ಬಯಕೆ ಎಂದಿಗೂ ಕಡಿಮೆಯಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಇದೀಗ ತನ್ನ ಎಲ್ಲ ಆಸ್ತಿಯನ್ನು ಮಾರಿ ಶಾಶ್ವತವಾಗಿ ಭಾರತಕ್ಕೆ ಬಂದಿದ್ದಾರೆ. ಮೊದಲು ಭಯವಿತ್ತು. ಆದರೆ ಇದೀಗ ಎಲ್ಲವೂ ಕೂಡ ಸರಿಯಾಗಿದೆ. ಹೊಸ ದೇಶಕ್ಕೆ ಹೊಂದಿಕೊಳ್ಳುವುದು ಸವಾಲಿನ ವಿಷಯ, ಇಲ್ಲಿನ ಭಾಷೆ, ಆಚರಣೆ, ಕಾನೂನು ಎಲ್ಲವನ್ನು ತಿಳಿದುಕೊಳ್ಳಬೇಕು. ಕ್ರಿಸ್ಟನ್ ಹಿಂದಿ ಕಲಿಯಬೇಕು, ಸ್ಥಳೀಯ ಪಾಕಪದ್ಧತಿಗಳಿಗೆ ಹೊಂದಿಕೊಳ್ಳಬೇಕು ಮತ್ತು ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. ಕಾಲಾನಂತರದಲ್ಲಿ ಒಂದಿಷ್ಟು ಭಾತೀಯರು ಸ್ನೇಹಿತರಾದರು. ಅವರಿಂದ ಎಲ್ಲವನ್ನು ಕಲಿತು, ನಂತರದಲ್ಲಿ ಇಲ್ಲಿ ಸ್ವತಃ ವ್ಯವಹಾರವನ್ನು ನಡೆಸಿದರು, ನಂತರ ಮೂರನೇ ಹೆಣ್ಣು ಮಗುವಿಗೆ ಭಾರತದಲ್ಲಿ ಜನ್ಮ ನೀಡಿದರು.
ಅವರ ಕುಟುಂಬದ ಕಥೆ ಇಲ್ಲಿಗೆ ಮುಗಿಯಲಿಲ್ಲ, ನಮಗೆ ಮೊದಲಿನಿಂದಲ್ಲೂ ಒಂದು ಕನಸಿತ್ತು ಒಂದು ಮಗುವನ್ನು ದತ್ತು ಪಡೆದು ಅದರ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು ಎಂದು. ಸುಮಾರು ಒಂದು ವರ್ಷದ ಹಿಂದೆ ಅಂದರೆ ತಮಗೆ ಮಗು ಆಗುವುದಕ್ಕಿಂತಲೂ ಮೊದಲು ಭಾರತೀಯ ಮಗುವನ್ನು ದತ್ತು ಪಡೆದಿದ್ದೇವೆ. ಆ ಮಗುವನ್ನು ತಮ್ಮ ಮಗುವಿನಂತೆ ಪಾಲನೆ ಮಾಡಿದಲ್ಲದೆ, ಆ ಮಗುವನ್ನು ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ರಿತಿಯಲ್ಲಿ ಬೆಳೆಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಇನ್ಸ್ಟಾ ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಇಂಟರ್ನ್‌ಶಿಪ್‌ಗೆಂದು ಬಂದು ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು
ಈ ಪೋಸ್ಟ್ 285,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಒಬ್ಬ ಬಳಕೆದಾರ, ಇಂದು ನಾನು ನೋಡಿದ ಅತ್ಯಂತ ಸುಂದರವಾದ ವಿಷಯ ಇದು ಎಂದು ಹೇಳಿದ್ದಾರೆ. ನೀವು ಅನೇಕರಿಗೆ ಸ್ಫೂರ್ತಿ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕಥೆ ನನ್ನ ಕಣ್ಣಲ್ಲಿ ನೀರು ತರಿಸಿತು. ಮಾನವೀಯತೆಯ ಮೇಲಿನ ನಂಬಿಕೆಯನ್ನು ಪತ್ತೆ ಹುಟ್ಟಿಸಿದೆ. ನಿಮ್ಮ ಕುಟುಂಬಕ್ಕೆ ಅಂತ್ಯವಿಲ್ಲದ ಸಂತೋಷವನ್ನು ಬಯಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








