AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕರ್ನಾಟಕ, ಕೇರಳ, ತಮಿಳುನಾಡಿಗೆ ಹಿಂದಿ ಬೇಡ, ಹೊಸ ಚರ್ಚೆ ಹುಟ್ಟು ಹಾಕಿದ ಅಯ್ಯೋ ಶ್ರದ್ಧಾ

ಹಾಸ್ಯಮಯ ವಿಡಿಯೋಗಳ ಮೂಲಕ ಕನ್ನಡಿಗರು ಮಾತ್ರವಲ್ಲದೆ ವಿದೇಶಿಗರ ಮನಸ್ಸನ್ನು ಗೆದ್ದವರರಲ್ಲಿ ಶ್ರದ್ಧಾ ಕೂಡ ಒಬ್ಬರು. ಇದೀಗ ಅಯ್ಯೋ ಶ್ರದ್ಧಾರವರ ವಿಡಂಬನಾತ್ಮಕ ಹಾಸ್ಯಮಯ ವಿಡಿಯೋವು ವಿವಾದವನ್ನು ಹುಟ್ಟುಹಾಕಿದೆ. ಶ್ರದ್ಧಾರವರು ಹಿಂದಿ ಹೇರಿಕೆಯ ಗಂಭೀರ ವಿಷಯವನ್ನು ಕ್ಷುಲ್ಲಕಗೊಳಿಸಿದ್ದಾರೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Video: ಕರ್ನಾಟಕ, ಕೇರಳ, ತಮಿಳುನಾಡಿಗೆ ಹಿಂದಿ ಬೇಡ, ಹೊಸ ಚರ್ಚೆ ಹುಟ್ಟು ಹಾಕಿದ  ಅಯ್ಯೋ ಶ್ರದ್ಧಾ
ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಶ್ರದ್ಧಾ ಜೈನ್Image Credit source: Youtube
ಸಾಯಿನಂದಾ
|

Updated on: Aug 18, 2025 | 2:19 PM

Share

ಅಯ್ಯೋ ಶ್ರದ್ಧಾ ಎಂದೇ ಮನೆಮಾತಾಗಿರುವ ಶ್ರದ್ಧಾ ಜೈನ್ (Shraddha Jain) ಅವರ ಸ್ಟ್ಯಾಂಡ್-ಅಪ್ ಕಾಮಿಡಿಯ ಮೂಲಕ ಎಲ್ಲರಿಗೂ ಚಿರಪರಿಚಿತ. ಆದರೆ 79 ನೇ ಸ್ವಾತಂತ್ರ್ಯ ದಿನಾಚರಣೆಗೂ (Independence Day) ಮುನ್ನ ಅವರು ತಮ್ಮ ಸೋ ಮಿನಿ ಥಿಂಗ್ಸ್ ಸರಣಿಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಸಿದ್ಧ ದೇಶಭಕ್ತಿ ಗೀತೆಯಾದ ಮಿಲೇ ಸುರ್ ಮೇರಾ ತುಮ್ಹಾರಾ ಮೂಲಕ ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸಿದ್ದು, ಹಿಂದಿ ಭಾಷೆಯ ಬಳಕೆಗೆ ಜನರ ಪ್ರತಿಕ್ರಿಯೆಗಳು ಹೇಗಿರುತ್ತದೆ ಎಂದು ತೋರಿಸಿದ್ದಾರೆ. ಹಿಂದಿ ಭಾಷೆ ಯಾರಿಗೂ ಬೇಡ ಎನ್ನುವ ಅವರ ಈ ವಿಡಿಯೋ ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

“ಎ ವಿಶ್ ಫಾರ್ ಇಂಡಿಯಾ” ಎಂಬ ಶೀರ್ಷಿಕೆಯ ನೀಡಲಾಗಿರುವ ಈ ವೀಡಿಯೊವು ಶ್ರದ್ಧಾ ಅವರು ಹಲವಾರು ಭಾರತೀಯ ಭಾಷೆಗಳನ್ನು ಕಲಿಯಲು ಸಹಾಯ ಮಾಡಿದ 1988 ರ ರಾಷ್ಟ್ರೀಯ ಏಕೀಕರಣ ಗೀತೆಗೆ ಮನ್ನಣೆ ನೀಡುವುದರೊಂದಿಗೆ ಪ್ರಾರಂಭವಾಗುತ್ತದೆ. ಆ ಬಳಿಕ ಇಂದು ಈ ಹಾಡು ಬಿಡುಗಡೆಯಾದರೆ ಎದುರಿಸಬಹುದಾದ ಕಲ್ಪಿತ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮುಂತಾದ ರಾಜ್ಯಗಳು ಹಿಂದಿಯನ್ನು ವಿರೋಧಿಸುತ್ತಿವೆ ಎಂದು ತಮಾಷೆಯಾಗಿಯೇ ಹೇಳಿದ್ದಾರೆ. “ಈ ಹಾಡಿನಲ್ಲಿ ಇಷ್ಟೊಂದು ಹಿಂದಿ ಏಕೆ?” ಎಂದು ಹೇಳುವವರೇ ಹೆಚ್ಚು, ಹೀಗಾಗಿ ಯಾವ ರಾಜ್ಯಕ್ಕೂ ಹಿಂದಿ ಬೇಡ ಎಂದು ಹಾಸ್ಯಮಯ ಮಾತುಗಳಿಂದ ಹೇಳಿದ್ದಾರೆ.

ಶ್ರದ್ಧಾರವರ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
Image
ಭಾರತೀಯರಿಗೆ ಉದ್ಯೋಗ ದೊರಕಿಸಿಕೊಟ್ಟ ವ್ಯಕ್ತಿಗೆ ಭವ್ಯ ಸ್ವಾಗತ
Image
ಅಪ್ಪನಿಗಿದ್ದ ಓದುವ ಹವ್ಯಾಸವೇ ಈ ಪುಟಾಣಿಯೂ ಜ್ಯೂಸ್‌ ಶಾಪ್‌ ತೆರೆಯಲು ಕಾರಣ
Image
ಹೋಮ್ ವರ್ಕ್ ವಿಷ್ಯ ಮಾತಾಡಿದ್ದೇ ತಡ, ಈ ಹುಡುಗ ಏನ್‌ ಮಾಡಿದ ನೋಡಿ
Image
ವಿದೇಶಿ ಮಹಿಳೆಯನ್ನು ಮದುವೆಯಾದುದ್ದರ ಹಿಂದಿನ ಕಾರಣ ತಿಳಿಸಿದ ಭಾರತೀಯ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದಿ ಹೇರಿಕೆಯನ್ನು ವಿರೋಧಿಸುವವರಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹಾಸ್ಯವನ್ನು ಬಳಸಿಕೊಂಡು ಶ್ರದ್ಧಾ ಅವರ ಹೃದಯ ಸ್ಪರ್ಶಿ ಸಂದೇಶವು ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಈ ವಿಡಿಯೋ 1.3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕನ್ನಡ ಬರಹಗಾರ ಗುರುಪ್ರಸಾದ್ ಡಿಎನ್, ಮೂಲತಃ ಕನ್ನಡದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಸಮಾಜವು ಕ್ರಮೇಣ ಸ್ವಲ್ಪ ವಿವೇಚನೆಯನ್ನು ಪಡೆಯುತ್ತಿದ್ದಂತೆ, ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಬೇಕು; ಯಾವುದೇ ಕಲಾವಿದನಿಗೆ ಯಾವ ಹಾಸ್ಯ ಅಥವಾ ವಿಡಂಬನೆಯನ್ನು ವಿರುದ್ಧ ಅಥವಾ ಅದರ ಬಗ್ಗೆ ನಿರ್ದೇಶಿಸಬೇಕು ಎಂಬ ವಿಷಯವು ಅತ್ಯಂತ ಮಹತ್ವದ್ದಾಗಿರಬೇಕು. ಇಂದು, ಹಿಂದಿ ಹೇರಿಕೆ ಬಹಳ ಗಂಭೀರ ವಿಷಯವಾಗಿದೆ. ಕೇಂದ್ರ ಸರ್ಕಾರವು ಇತರ ಭಾಷೆಗಳ ಮೇಲೆ ಹಿಂದಿ ಪ್ರಾಬಲ್ಯ ಸಾಧಿಸುವ ನೀತಿಯನ್ನು ಅನುಸರಿಸುತ್ತಿದೆ. ಇದು ಸಾಮಾನ್ಯ ಜನರ ಜೀವನದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: Video: ಭಾರತೀಯರಿಗೆ ಉದ್ಯೋಗ ನೀಡಿದ ಪುಣ್ಯಾತ್ಮ ಈ ವ್ಯಕ್ತಿ, 51 ವರ್ಷದ ಬಳಿಕ ಕೇರಳಕ್ಕೆ ಎಂಟ್ರಿ, ಹೇಗಿತ್ತು ನೋಡಿ ಸ್ವಾಗತ

ಒಬ್ಬ ಬಳಕೆದಾರರು ವಿಮರ್ಶಾತ್ಮಕ ದೃಷ್ಟಿಕೋನದಿಂದ ವೀಡಿಯೊವನ್ನು ಮರುಪರಿಶೀಲಿಸಿ ಎಂದಿದ್ದಾರೆ. ಇನ್ನೊಬ್ಬರು, ಮಂಗಳೂರಿನಿಂದ ಬಂದು ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಶ್ರದ್ಧಾ ಕನ್ನಡ ಭಾಷಾಭಿಮಾನದ ಆಳವನ್ನು ಗ್ರಹಿಸಲು ವಿಫಲರಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ನಗುವಿಗೆ ಯಾವುದೇ ಭಾಷೆಯಿಲ್ಲ, ಆನಂದದಾಯಕ ಪ್ರದರ್ಶನ ಎಂದು ಮತ್ತೊಬ್ಬ ಬಳಕೆದಾರ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ