Video: ನೋಡ ನೋಡ ಎಷ್ಟು ಚಂದ; ಖುಷಿ ಖುಷಿಯಾಗಿ ಚೆಂಡಾಟ ಆಡಿದ ಆನೆ
ಪುಟಾಣಿಗಳಿಗೆ ಚೆಂಡು ಕೊಟ್ಟರೆ ಖುಷಿಯಿಂದ ಆಡುವುದನ್ನು ನೀವು ನೋಡಿರಬಹುದು. ಈ ಆನೆಯು ಅಷ್ಟೇ ಉತ್ಸಾಹ ಹಾಗೂ ಖುಷಿಯಿಂದಲೇ ಚೆಂಡಾಟ ಆಡಿದೆ. ಚೆಂಡು ಕೈಗೆ ಸಿಗುತ್ತಿದ್ದಂತೆ ಈ ಆನೆ ಆಟ ಆಡುವುದರಲ್ಲೇ ಮಗ್ನವಾಗಿದೆ. ಈ ಮುದ್ದಾದ ಕ್ಲಿಪಿಂಗ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತದೆ, ಮನಸ್ಸಿಗೆ ಹಿತವೆನಿಸುತ್ತದೆ. ಈ ಆನೆಗಳ ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಮನುಷ್ಯನ ಭಾವನೆಗೆ ಸ್ಪಂದಿಸುವ ಆನೆಯ ಚೆಂಡಾಟದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಚೆಂಡಿನೊಂದಿಗೆ ಆನೆಯೊಂದು ಉರುಳುತ್ತಿದ್ದು ಆಟ ಆಡುವುದರಲ್ಲೇ ಬ್ಯುಸಿಯಾಗಿದೆ. ಮನಸ್ಸಿಗೆ ಹತ್ತಿರವಾಗುವ ಈ ವಿಡಿಯೋ ನೋಡಿದ ಬಳಕೆದಾರ ಈ ಆನೆ ಆಟ ಆಡುವ ರೀತಿಗೆ ಕಳೆದೇ ಹೋಗಿದ್ದಾರೆ.
ಚೆಂಡಾಟ ಆಡೋದ್ರಲ್ಲಿ ಬ್ಯುಸಿ ಆನೆ saveelephantfoundation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಚೊಂಪುವಿನ ಹೊಸ ನೆಚ್ಚಿನ ಆಟಿಕೆ – ಅವಳು ಅದನ್ನು ಎಷ್ಟು ಪ್ರೀತಿಸುತ್ತಾಳೆಂದು ಅವಳು ಆಡುವ ರೀತಿಯಿಂದ ನೀವು ಹೇಳಬಹುದು ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಆನೆಯೊಂದು ಚೆಂಡಾಟ ಆಡುವುದನ್ನು ನೀವು ನೋಡಬಹುದು. ಆನೆ ಹುಲ್ಲಿನ ಮೇಲೆ ಮಲಗಿ ಚೆಂಡಿನ ಸುತ್ತಲೂ ತನ್ನ ಸೊಂಡಿಲನ್ನು ಸುತ್ತಿಕೊಂಡು, ಉತ್ಸಾಹದಿಂದ ಅದನ್ನು ತಳ್ಳುತ್ತಿದೆ. ಆ ಬಳಿಕ ಎದ್ದು ನಿಂತು ಆನೆಯು ಚೆಂಡನ್ನು ತನ್ನ ಸೊಂಡಿಲಿನಿಂದ ಮುಂದಕ್ಕೆ ತಳ್ಳುವುದನ್ನು ನೋಡಬಹುದು. ಈ ವಿಡಿಯೋ ಶಕ್ತಿ ಹಾಗೂ ಮುಗ್ಧತೆ ಎರಡನ್ನೂ ಪ್ರದರ್ಶಿಸುವಂತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Video: ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಮರಿಯಾನೆ
ಈ ವಿಡಿಯೋ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ಎಷ್ಟು ಮುದ್ದಾಗಿವೆ ಈ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು ಚೊಂಪುವಿನ ಚೆಂಡಾಟ ನೋಡಲು ಖುಷಿಯಾಗುತ್ತದೆ. ಬಹಳ ಖುಷಿಯಿಂದ ಆಟ ಆಡುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಆನೆಗಳ ಆಟ ತುಂಟಾಟಗಳೇ ಮನಸ್ಸಿಗೆ ಹಿತವೆನಿಸುತ್ತದೆ ಎಂದು ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ಆನೆಯ ಚೆಂಡಾಟವನ್ನು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








