AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ, ಮುಂದೇನಾಯ್ತು ನೋಡಿ

ಹಾವು ಈ ಹೆಸರು ಕೇಳಿದರೆ ಒಂದು ಕ್ಷಣ ಬೆಚ್ಚಿ ಬೀಳುತ್ತೇವೆ. ಇನ್ನು ಮೈ ಮೇಲೆ ಹರಿದಾಡಿದರೆ ಹೇಗಿರುತ್ತದೆ, ಇನ್ನು ಊಹಿಸಲು ಕೂಡ ಅಸಾಧ್ಯ. ಆದರೆ ಇಲ್ಲೊಬ್ಬ ಯುವಕನು ಮಲಗಿದ್ದ ವೇಳೆ ಮೈ ಮೇಲೆ ಹಾವೊಂದು ಹರಿದಾಡಿದೆ. ಭಯಭೀತನಾದ ಈ ಯುವಕನು 30 ನಿಮಿಷಗಳ ಕಾಲ ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಮುಂದೇನಾಯ್ತು ಗೊತ್ತಾ? ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ, ಮುಂದೇನಾಯ್ತು ನೋಡಿ
ಯುವಕನ ಕೈಯಲ್ಲೇ ಹಾವು ಸಾವು
ಸಾಯಿನಂದಾ
|

Updated on: Aug 20, 2025 | 10:30 AM

Share

ಉತ್ತರ ಪ್ರದೇಶ, ಆಗಸ್ಟ್ 20: ಹಾವು (snake) ಎಂದರೆ ಮೈಯೆಲ್ಲಾ ನಡುಗಲು ಶುರುವಾಗುತ್ತದೆ. ಹೀಗಾಗಿ ಹಾವಿಗೆ ಭಯಪಡುವವರೇ ಹೆಚ್ಚು. ಈ ವಿಷಜಂತುಗಳನ್ನು ಕಂಡಾಗ ಎಷ್ಟೇ ಗಟ್ಟಿ ಗುಂಡಿಗೆ ಆಗಿದ್ದರೂ ಒಂದು ಕ್ಷಣ ನಡುಕ ಶುರುವಾಗುತ್ತದೆ. ಇದೀಗ ಇಲ್ಲೊಬ್ಬ ಯುವಕನ ಪರಿಸ್ಥಿತಿಯು ಇದೆ ಆಗಿದೆ. ಮಲಗಿದ್ದ ಯುವಕನ ಮೈ ಮೇಲೆ ಹಾವೊಂದು ಹರಿದಾಡಿದ್ದು, ಇದರಿಂದ ಭಯಗೊಂಡ ಯುವಕನು ಹಾವಿನ ದಾಳಿಯಿಂದ ತಪ್ಪಿಸಿಕೊಳ್ಳಲು ಅದರ ತಲೆಯನ್ನು ಮೂವತ್ತು ನಿಮಿಷಗಳ ಕಾಲ ಕೈಯಲ್ಲೇ ಹಿಡಿದುಕೊಂಡಿದ್ದಾನೆ. ಆದರೆ ಆಮೇಲೆ ಆಗಿದ್ದೇ ಬೇರೆ ಅಂದ್ರೆ ನೀವು ನಂಬಲೇ ಬೇಕು. ಈ ಘಟನೆಯು ಉತ್ತರ ಪ್ರದೇಶದ ಲಲಿತಪುರದ ತಿಸ್ಗಾನಾ ಗ್ರಾಮದಲ್ಲಿ (Tisgana village in Lalitpur of Uttar Pradesh) ನಡೆದಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಯುವಕನ ಮೈ ಮೇಲೆ ಹರಿದಾಡಿದ ಹಾವು

ಮಲಗಿದ್ದ ವೇಳೆಯಲ್ಲಿ ಯುವಕನ  ಮೈ ಮೇಲೆ ಹಾವೊಂದು ಹತ್ತಿದ್ದು, ತಕ್ಷಣವೇ ಹಾವಿನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಮೂವತ್ತು ನಿಮಿಷಗಳ ಕಾಲ ಹಾವಿನ ತಲೆ ಹಿಡಿದುಕೊಂಡಿದ್ದಾನೆ. ಹಾವು ಆತನ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಆದರೆ ಬಿಗಿಯಾಗಿ ಹಾವಿನ ತಲೆ ಹಿಡಿದ ಪರಿಣಾಮ ಹಾವು ಸತ್ತು ಹೋಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಚೀನಾದ ಯುವತಿಯ ಈ ಹವ್ಯಾಸದ ಬಗ್ಗೆ ತಿಳಿದ್ರೆ ನೀವು ಶಾಕ್ ಆಗ್ತೀರಾ?
Image
ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ
Image
ಹೂವು ಹಿಡಿದಷ್ಟು ಸಲೀಸಾಗಿ ನಾಗರಹಾವು ಹಿಡಿದ ವ್ಯಕ್ತಿ
Image
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ

ಇದನ್ನೂ ಓದಿ: Video: ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ

ಆಸ್ಪತ್ರೆಗೆ ದಾಖಲಾದ ಯುವಕ

ಈ ಯುವಕನನ್ನು 32 ವರ್ಷದ ಗೋವಿಂದ ಎಂದು ಗುರುತಿಸಲಾಗಿದೆ. 30 ನಿಮಿಷಗಳ ಕಾಲ ಹಾವಿನ ತಲೆಯನ್ನು ಕೈಯಲ್ಲೇ ಹಿಡಿದುಕೊಂಡಿದ್ದ ಯುವಕನು ಭಯಭೀತನಾಗಿ ಕಿರುಚಲು ಪ್ರಾರಂಭಿಸಿದ್ದಾನೆ. ಇದರಿಂದಾಗಿ ಕುಟುಂಬದ ಸದಸ್ಯರು ಗೋವಿಂದನಿಗೆ ಹಾವು ಕಚ್ಚಿದೆ ಎಂದು ಭಾವಿಸಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಸಿಎಚ್‌ಸಿ ಮಾದವರಕ್ಕೆ ದಾಖಲಿಸಿದ್ದಾರೆ. ವೈದ್ಯರ ಬಳಿ ಈ ಯುವಕನು ಡಾಕ್ಟರ್, ದಯವಿಟ್ಟು ನನ್ನನ್ನು ಉಳಿಸಿ, ನನಗೆ ಹಾವು ಕಚ್ಚಿದೆ ಎಂದಿದ್ದಾನೆ. ವೈದ್ಯರ ತಂಡವು ಈ ಯುವಕನನ್ನು ಪರಿಶೀಲಿಸಿದಾಗ ಹಾವು ಅಥವಾ ಯಾವುದೇ ವಿಷಕಾರಿ ಕೀಟ ಕಚ್ಚಿಲ್ಲ ಎನ್ನುವುದು ದೃಢವಾಗಿದೆ. ಈ ಯುವಕನು ಆರೋಗ್ಯವಾಗಿದ್ದು, ಹಾವಿನ ವಿಷವು ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ