Video: ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ
ಹೆಬ್ಬಾವಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದರಿಂದ ಕಚ್ಚಿಸಿಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಹೆಬ್ಬಾವು ಇದೆ, ಸಾಕಷ್ಟು ಮಂದಿ ಸುತ್ತಮುತ್ತಲಿದ್ದಾರೆ. ಓರ್ವ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂ ದಾಗುತ್ತಿದ್ದಂತೆ ಕೈಯನ್ನು ಕಚ್ಚಿದೆ. ಜನರು ಆಘಾತಕ್ಕೊಳಗಾಗುತ್ತಾರೆ.

ಹೆಬ್ಬಾವೊಂದು(Python) ವ್ಯಕ್ತಿಗೆ ಬಲವಾಗಿ ಕಚ್ಚಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಡೀ ವ್ಯಕ್ತಿಯನ್ನೇ ನುಂಗುವ ಸಾಮರ್ಥ್ಯವಿರುವ ಹೆಬ್ಬಾವಿನ ಬಳಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು. ಇತ್ತೀಚೆಗೆ ಹೆಬ್ಬಾವೊಂದನ್ನು ವ್ಯಕ್ತಿ ರಕ್ಷಿಸಿದ್ದರು. ಹಾವನ್ನು ಕೈಯಲ್ಲಿ ಹಿಡಿದುಕೊಂಡಿರುವಾಗ ಇನ್ನೊಬ್ಬ ವ್ಯಕ್ತಿ ಪಕ್ಕಕ್ಕೆ ಬಂದು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹಾವು ಆ ವ್ಯಕ್ತಿಯ ತೋಳಿಗೆ ಬಲವಾಗಿ ಕಚ್ಚಿದೆ.
ವಿಡಿಯೋದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಹೆಬ್ಬಾವು ಇದೆ, ಸಾಕಷ್ಟು ಮಂದಿ ಸುತ್ತಮುತ್ತಲಿದ್ದಾರೆ. ಓರ್ವ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂ ದಾಗುತ್ತಿದ್ದಂತೆ ಕೈಯನ್ನು ಕಚ್ಚಿದೆ. ಜನರು ಆಘಾತಕ್ಕೊಳಗಾಗುತ್ತಾರೆ.
ಮತ್ತಷ್ಟು ಓದಿ: ಸಂಗಾತಿಯ ಕೊಂದವರ ಮನೆಗೆ ನುಗ್ಗಿ ಸೇಡು ತೀರಿಸಿಕೊಂಡ ಹೆಣ್ಣು ಹಾವು
ವೈರ್ ಆದ ಆ ವಿಡಿಯೋದಲ್ಲಿ ನೆಟ್ಟಿಗಳು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ, ಹೆಬ್ಬಾವು ಅದು ಅಣ್ಣಾ, ಇನ್ನೊಂದು ಸ್ವಲ್ಪ ಹತ್ತಿರ ಬರಬೇಕಿತ್ತು ನೀವು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿ ಆರೋಗ್ಯವಾಗಿದ್ದಾರೆಯೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
View this post on Instagram
ಹೆಬ್ಬಾವು ವಿಷಕಾರಿಯಲ್ಲದಿದ್ದರೂ ಕೂಡ ಅದು ಮನುಷ್ಯ ಹಾಗೂ ಪ್ರಾಣಿಗಳನ್ನು ನುಂಗಬಲ್ಲದು, ಅದು ಸಂರಕ್ಷಿತ ಪ್ರಭೇದವಾಗಿದೆ, ಅದಕ್ಕೆ ಹಾನಿ ಮಾಡುವುದು ಅಪರಾಧವಾಗುತ್ತದೆ. 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ, ಕಾನೂನಿನಡಿಯಲ್ಲಿ ಅತ್ಯುನ್ನತ ಮಟ್ಟದ ರಕ್ಷಣೆಯನ್ನು ನೀಡಲಾಗುತ್ತದೆ. ಗಾಯಗೊಳಿಸುವುದು ಅಥವಾ ತೊಂದರೆಗೊಳಿಸುವುದು ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಗಂಭೀರ ಶಿಕ್ಷೆಗೆ ಕಾರಣವಾಗಬಹುದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ