AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸ ನೋಡಿ ಫಿದಾ ಆದ ಆಸ್ಟ್ರೇಲಿಯಾದ ಮಹಿಳೆ

ಬೇರೆಯವರಿಗೆ ಒಳ್ಳೆಯದ್ದನ್ನು ಬಯಸುವ, ಸಹಾಯ ಮಾಡುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯೆನಿಸುತ್ತದೆ. ಇದೀಗ ಭಾರತೀಯ ಮೂಲದ ಪೋಸ್ಟ್ ಮ್ಯಾನ್ ಒಬ್ಬರ ಹೃದಯ ಶ್ರೀಮಂತಿಕೆಯನ್ನು ಆಸ್ಟ್ರೇಲಿಯಾದ ಮಹಿಳೆಯು ಮೆಚ್ಚಿಕೊಂಡಿದ್ದಾಳೆ. ಪಾರ್ಸೆಲ್ ಕೊಡಲು ಈ ಮಹಿಳೆಯ ಮನೆಗೆ ಬಂದಿದ್ದ ಪೋಸ್ಟ್ ಮ್ಯಾನ್ ಮಾಡಿದ ಕೆಲಸ ಕೇಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸ ನೋಡಿ ಫಿದಾ ಆದ ಆಸ್ಟ್ರೇಲಿಯಾದ ಮಹಿಳೆ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Aug 20, 2025 | 6:38 PM

Share

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಮ್ಮ ಬಗ್ಗೆ ಯೋಚಿಸುವುದು ಬಿಟ್ಟರೆ, ಬೇರೆಯವರಿಗೆ ಒಳ್ಳೆಯದು ಮಾಡುವ ಮನಸ್ಸುಳ್ಳ ವ್ಯಕ್ತಿಗಳು ಸಿಗುವುದು ಅಪರೂಪ. ಈಗಿನ ಕಾಲದಲ್ಲಿ ಒಳ್ಳೆಯ ಗುಣ, ಒಳ್ಳೆತನಕ್ಕೆ ಬೆಲೆಯಿಲ್ಲ ಎಂದೇಳಬಹುದು. ಆದರೆ ಭಾರತೀಯ ಮೂಲದ ಈ ಪೋಸ್ಟ್ ಮ್ಯಾನ್ ನ ಒಳ್ಳೆತನ ಎಷ್ಟಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಪಾರ್ಸೆಲ್ ಕೊಡಲು ವಾಂಡಲ್ (Wandel) ಎಂಬ ಮಹಿಳೆಯ ಮನೆಗೆ ಪೋಸ್ಟ್ ಮ್ಯಾನ್ (post man) ಬಂದಿದ್ದು, ಈ ವೇಳೆ ಮಳೆ ಬರುತ್ತಿರುವುದನ್ನು ನೋಡಿ,  ಮನೆಯ ಹೊರಭಾಗದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆದು ಮನೆಯೊಳಗೆ ಇಟ್ಟು ಹೋಗಿದ್ದಾರಂತೆ. ಈ ಬಗ್ಗೆ ಸ್ವತಃ ವಾಂಡಲ್ ಹೇಳಿಕೊಂಡಿದ್ದು, ಈ ಪೋಸ್ಟ್ ಮ್ಯಾನ್ ಒಳ್ಳೆಯ ನಡೆಗೆ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

verritywandel ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಟ್ರೇಲಿಯಾ ಮಹಿಳೆಯ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಇಲ್ಲಿ ಪೋಸ್ಟ್ ಮ್ಯಾನ್ ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಹೇಳಿಕೊಂಡಿದ್ದು, ಶೀರ್ಷಿಕೆಯಲ್ಲಿ ಪೋಸ್ಟ್ ಮ್ಯಾನ್ ಮನೆ ಆವರಣದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಿ ಅದನ್ನು ಮಡಚಿ ಮನೆಯೊಳಗೆ ಇಟ್ಟು ಹೋಗಿದ್ದಾರೆ. ಇದು ನಿಜಕ್ಕೂ ಅದ್ಭುತ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ
Image
ಭಾರತೀಯರಿಗೆ ಉದ್ಯೋಗ ದೊರಕಿಸಿಕೊಟ್ಟ ವ್ಯಕ್ತಿಗೆ ಭವ್ಯ ಸ್ವಾಗತ
Image
3 ತಿಂಗಳು ಭಾರತದಲ್ಲಿ ಸುತ್ತಾಟ, ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
Image
ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು
Image
ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ್ದೇನು ನೋಡಿ

ಹೌದು, ಮನೆಗೆ ವಾಪಾಸ್ಸಾದ ವೇಳೆ ವಾಂಡಲ್ ಗೆ ಆಶ್ಚರ್ಯವೊಂದು ಕಾದಿತ್ತು. ಒಣಗಲು ಹಾಕಿದ್ದ ಬಟ್ಟೆಗಳನ್ನು ಯಾರೋ ಮಡಚಿ ಇಟ್ಟಿದ್ದಾರೆ. ಹೀಗಾಗಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮನೆಗೆ ಪಾರ್ಸೆಲ್ ತಂದಿದ್ದ ಪೋಸ್ಟ್ ಮ್ಯಾನ್ ಈ ಕೆಲಸ ಮಾಡಿ ಹೋಗಿದ್ದಾರೆ ಎಂದು ತಿಳಿದಿದೆ. ಇನ್ನು ಪಾರ್ಸೆಲ್ ಜೊತೆಗೆ ಪೋಸ್ಟ್ ಮ್ಯಾನ್ ಬರೆದಿದ್ದ ಪತ್ರವೊಂದು ಈ ಮಹಿಳೆಯ ಕೈಗೆ ಸಿಕ್ಕಿದೆ. ಈ ಪತ್ರದಲ್ಲಿ ಮಳೆಯಿಂದಾಗಿ ನೆನೆಯುತ್ತಿದ್ದ ಬಟ್ಟೆಗಳನ್ನು ತಂದು ಮನೆಯೊಳಗೆ ಇಟ್ಟಿರುವ.  ಆಸ್ಟ್ರೇಲಿಯಾದ ಮಹಿಳೆ ಹಂಚಿಕೊಂಡ ಈ ವಿಡಿಯೋದಲ್ಲಿ ಮಳೆಯಿಂದ ನೆನೆಯುತ್ತಿದ್ದ ಬಟ್ಟೆಗಳನ್ನು ತೆಗೆದು ಪೋಸ್ಟ್ ಮ್ಯಾನ್ ಮನೆಗೆ ಒಳಗೆ ತಂದು ಇಡುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: Video: ಭಾರತೀಯರಿಗೆ ಉದ್ಯೋಗ ನೀಡಿದ ಪುಣ್ಯಾತ್ಮ ಈ ವ್ಯಕ್ತಿ, 51 ವರ್ಷದ ಬಳಿಕ ಕೇರಳಕ್ಕೆ ಎಂಟ್ರಿ, ಹೇಗಿತ್ತು ನೋಡಿ ಸ್ವಾಗತ

ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ವಿಡಿಯೋ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಈ ವ್ಯಕ್ತಿಯ ಒಳ್ಳೆಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ ಇದು ನಿಜಕ್ಕೂ ಒಳ್ಳೆಯ  ಕೆಲಸ ಎಂದಿದ್ದಾರೆ. ಇವನು ಸಿಖ್ ಎಂದು ಮತ್ತೊಬ್ಬರು ಹೇಳಿದರೆ, ಇಂತಹ ವಿಡಿಯೋಗಳನ್ನು ನೋಡಿ ಕಲಿಯಬೇಕಾದ್ದು ತುಂಬಾನೇ ಇದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ಪೋಸ್ಟ್ ಮ್ಯಾನ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Wed, 20 August 25