Video: ಇಲ್ಲಿ ಬಂದು ಯುವತಿಯರಿಂದ ಕೋಲಿನಿಂದ ಹೊಡೆಸಿಕೊಂಡ್ರೆ ಮದುವೆ ಆಗುತ್ತೆ, ಇಲ್ಲಿದೆ ವಿಶಿಷ್ಟ ಆಚರಣೆ
ಈಗಿನ ಕಾಲದಲ್ಲಿ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟ. ಹೆಣ್ಣು ಸಿಕ್ಕರೂ ಮುಗಿಯದ ಡಿಮ್ಯಾಂಡ್. ಆದರೆ ಮದುವೆಯಾಗಲು ಕಷ್ಟ ಪಡುತ್ತಿರುವ ಗಂಡ್ಮಕ್ಕಳು ಇಲ್ಲಿಗೆ ಬಂದ್ರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಜೋಧಪುರದ ದಿಂಗಾ ಗವರ್ ಹಬ್ಬದಲ್ಲಿ ಪಾಲ್ಗೊಳ್ಳುವುದು ಈ ಸಮಸ್ಯೆಗೆ ಸುಲಭ ಹಾಗೂ ತ್ವರಿತ ಪರಿಹಾರವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದು, ಅದೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದ್ರೆ ಅದಕ್ಕೆ ಇಲ್ಲಿ ಉತ್ತರವಿದೆ.

ರಾಜಸ್ಥಾನ, ಆಗಸ್ಟ್ 20: ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅನ್ನೋದು ಹುಡುಗರ ಗೋಳು. ಒಂದು ವೇಳೆ ಹುಡುಗಿ ಸಿಕ್ಕಿದ್ದು ನಮ್ಮ ಪುಣ್ಯ ಅಂದುಕೊಂಡ್ರೆ ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ. ಆದರೆ ಮದ್ವೆ ಆಗದ ಹುಡುಗರು ಈ ಹಬ್ಬದಲ್ಲಿ ಭಾಗಿಯಾದ್ರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯಂತೆ. ರಾಜಸ್ಥಾನದ ಜೋಧ್‌ಪುರದಲ್ಲಿ (Jodhpur of Rajasthan) ನಡೆಯುವ ಈ ದಿಂಗಾ ಗವರ್ ಹಬ್ಬವು (Dhinga Gawar Festival) ವಿಶೇಷತೆಯಿಂದ ಗಮನ ಸೆಳೆದಿದೆ. ಹಬ್ಬದ ಪ್ರಮುಖ ಆಕರ್ಷಣೆ ಎಂದರೆ ಹದಿನಾರನೇ ದಿನ ನಡೆಯುವ ಮೆರವಣಿಗೆ.ಈ ದಿನ ಮಹಿಳೆಯರು ಮದುವೆಯಾಗದ ಯುವಕರಿಗೆ ಕೋಲಿನಿಂದ ಹೊಡೆಯುತ್ತಾರೆ. ಇದುವೇ ಈ ಸಮಸ್ಯೆಗೆ ಪರಿಹಾರವಂತೆ. ಈ ವಿಶಿಷ್ಟ ಆಚರಣೆಯ ವಿಡಿಯೋ ವೈರಲ್ ಆಗುತ್ತಿದೆ.
@WorkPandemic ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಮದುವೆಯಾಗಲು ಕಷ್ಟಪಡುತ್ತಿರುವ ಪುರುಷರಿಗೆ ಇಲ್ಲಿದೆ ಒಂದು ಪರಿಹಾರ. ಜೋಧಪುರದ ದಿಂಗಾ ಗವರ್ ಮೇಳವು ಒಂದು ವಿಶಿಷ್ಟ ಸಾಂಸ್ಕೃತಿಕ ಹಬ್ಬವಾಗಿದ್ದು, ಇಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ಈ ಹಬ್ಬದ ಕೊನೆಯ ದಿನ ಗವರ್ ಜಿ ಉಪವಾಸ ಆಚರಿಸುವ ಮಹಿಳೆಯರು ರಾತ್ರಿಯಲ್ಲಿ ಅವಿವಾಹಿತ ಪುರುಷರನ್ನು ಕೋಲಿನಿಂದ ಹೊಡೆಯುತ್ತಾರೆ. ಈ ಪದ್ಧತಿಯು ಅವಿವಾಹಿತ ಪುರುಷರ ತ್ವರಿತ ವಿವಾಹಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ ಎಂದು ಬರೆಯಲಾಗಿದೆ. ಮಹಿಳೆಯರು, ಯುವತಿಯರು ಸೇರಿದಂತೆ ಪುಟಾಣಿಗಳು ಅವಿವಾಹಿತ ಯುವಕರಿಗೆ ಕೋಲಿನಿಂದ ಹೊಡೆಯುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Men who are having difficulty in getting married, here is one solution
The Dhinga Gavar Mela of Jodhpur is a unique cultural festival where women worship Gavar Mata, and on the final day, women observing the Gavar Ji fast beat men with sticks at night. It is believed that this… pic.twitter.com/fKvDHkBOrq
— Woke Eminent (@WokePandemic) August 19, 2025
ಏನಿದು ದಿಂಗಾ ಗವರ್ ಹಬ್ಬ?
ರಾಜಸ್ಥಾನದ ಜೋಧಪುರದ ದಿಂಗಾ ಗವರ್ ಹಬ್ಬವು ವಿಶಿಷ್ಟ ಹಬ್ಬವಾಗಿದ್ದು ಇದನ್ನು ಮೋಸದ ಹಬ್ಬವೆಂದು ಕರೆಯಲಾಗುತ್ತದೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ವಿವಿಧ ವೇಷಭೂಷಣಗಳನ್ನು ಧರಿಸಿ ಕೈಯಲ್ಲಿ ಕೋಲು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮಹಿಳೆಯರು ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ಯುವಕರನ್ನು ತಮಾಷೆಯಾಗಿ ಕೋಲಿನಿಂದ ಹೊಡೆಯುತ್ತಾರೆ. ಇದು ಅವಿವಾಹಿತ ಪುರುಷರಿಗೆ ಶೀಘ್ರದಲ್ಲೇ ಮದುವೆಯಾಗುವ ಸೂಚನೆ ಎಂದು ನಂಬಲಾಗಿದೆ.
ಇದನ್ನೂ ಓದಿ:Video: ಅಬ್ಬಾ! ಏನ್ ಮಸ್ತ್ ಸ್ಟೆಪ್ ನೋಡಿ; ದೋಣಿಯ ತುದಿಯಲ್ಲಿ ನಿಂತು ಬಾಲಕನ ಜಬರ್ದಸ್ತ್ ಡ್ಯಾನ್ಸ್
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಭಾರತದಲ್ಲಿನ ಸಂಪ್ರದಾಯಗಳು ಆಶೀರ್ವಾದದೊಂದಿಗೆ ಗಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಕೆಲವು ವಿಚಿತ್ರವಾದ ಆದರೆ ತಮಾಷೆದಾಯಕ ಸಂಪ್ರದಾಯಗಳಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ದೇಶದಲ್ಲಿ ಪುರುಷರನ್ನು ಜಿರಳೆಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Wed, 20 August 25








