AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ಮರಳುವ ಸಮಯ ಬಂತು, ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ

ಟ್ರಿಪ್ ಎಂದು ಭಾರತಕ್ಕೆ ಬರುವ ವಿದೇಶಿಗರು ಇಲ್ಲಿಂದ ಹೊರಡುವಾಗ ಭಾವುಕರಾಗುವುದು ಸಹಜ. ಕೆಲವರಿಗೆ ಭಾರತ ಬಿಟ್ಟು ತಮ್ಮ ಹುಟ್ಟೂರಿಗೆ ಹೋಗಲು ಇಷ್ಟವಿರುವುದಿಲ್ಲ. ಆದರೆ ಹೋಗುವುದು ಅನಿವಾರ್ಯ. ಹೌದು, ಭಾರತದಲ್ಲಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ನೆಲೆಸಿರುವ ಅಮೆರಿಕನ್ ಮಹಿಳೆ ಕುಟುಂಬ ಸಮೇತ ಭಾರತಕ್ಕೆ ಗುಡ್ ಬೈ ಹೇಳಲು ಸಿದ್ಧರಾಗಿದ್ದಾರೆ. ಈ ವೇಳೆ ವಿದೇಶಿ ಮಹಿಳೆ ಭಾವುಕರಾಗಿದ್ದು ತಮ್ಮ ಕೊನೆಯ ದಿನ ಹೇಗಿತ್ತು ಎಂದು ವಿವರಿಸಿದ್ದಾರೆ.

Video: ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ಮರಳುವ ಸಮಯ ಬಂತು, ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ
ಭಾರತದಲ್ಲಿ ಅಮೆರಿಕನ್‌ ಮಹಿಳೆಯ ಕೊನೆಯ ದಿನImage Credit source: Instagram
ಸಾಯಿನಂದಾ
|

Updated on: Aug 29, 2025 | 11:51 AM

Share

ಭಾರತದ ಅಂದ್ರೆ ವಿದೇಶಿಗರಿಗೆ ಅದೇನೋ ಸೆಳೆತ. ಇಷ್ಟ ಪಟ್ಟು ಇಲ್ಲಿಗೆ ಭೇಟಿ ನೀಡುವ ವಿದೇಶಿಗರು ಟ್ರಿಪ್ ಎಂಜಾಯ್ ಮಾಡ್ತಾರೆ. ಕೆಲವರು ಇಲ್ಲಿ ಜೀವನ ನಡೆಸಲು ಮುಂದಾಗುತ್ತಾರೆ. ಇಲ್ಲಿನ ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಜನರೊಂದಿಗೆ ಬೆರೆಯುವ ವಿದೇಶಿಗರು ಇಲ್ಲಿಂದ ಹೊರಡುವ ಸಮಯ ಬಂದಾಗ ಭಾವುಕರಾಗ್ತಾರೆ. ಅಮೆರಿಕನ್ ಮಹಿಳೆಗೂ (American lady) ಇದೇ ಪರಿಸ್ಥಿತಿ ಎದುರಾಗಿದೆ. ಭಾರತದಲ್ಲಿ ಕೊನೆಯ ದಿನದ ವಿಡಿಯೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ದೈನಂದಿನ ದಿನಚರಿಯಿಂದ ಹಿಡಿದು ಭಾರತದಲ್ಲಿನ ಕೊನೆಯ ಕ್ಷಣದವರೆಗಿನ ವಿಡಿಯೋ ಹಂಚಿಕೊಂಡು ಡ್ಯಾನೆಲ್ ಟಿಬೆರಿ (Danelle Tiberi) ಭಾರವಾದ ಮನಸ್ಸಿನಿಂದ ಭಾರತದಿಂದ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತೆ ಭಾರತಕ್ಕೆ ಬನ್ನಿ ಎಂದು ಸಮಾಧಾನ ಮಾಡಿದ್ದಾರೆ.

ಭಾರತದಲ್ಲಿ ಕೊನೆಯ ದಿನ ಎಂದ ವಿದೇಶಿ ಮಹಿಳೆ

ಇದನ್ನೂ ಓದಿ
Image
ಬೆಂಗಳೂರಿನ ಈ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ
Image
ಭಾರತಕ್ಕೆ ಹೋಲಿಸಿದ್ರೆ ಲಂಡನ್‌ ದುಬಾರಿ, ವೈರಲ್‌ ಆಯ್ತು ಪೋಸ್ಟ್‌
Image
ಭಾರತ ಎಷ್ಟು ಸುಂದರವಾಗಿದೆ ಎಂದು ತೋರಿಸಿಕೊಟ್ಟ ವಿದೇಶಿ ವ್ಲಾಗರ್
Image
ವಿದ್ಯಾರ್ಥಿ ಭವನದ ಊಟ ಸವಿದು ಪ್ರಾಮಾಣಿಕ ರೇಟಿಂಗ್ಸ್‌ ನೀಡಿದ ವ್ಲಾಗರ್

global momma ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಭಾರತದಲ್ಲಿನ ತನ್ನ ಕೊನೆಯ ದಿನಚರಿ ಹೇಗಿತ್ತು ಎಂದು ವಿವರಿಸುವುದನ್ನು ನೋಡಬಹುದು. ನಾನು ಭಾರತದಲ್ಲಿ ವಾಸಿಸುತ್ತಿರುವ ಅಮೇರಿಕನ್ ಮಹಿಳೆ, ಇಂದು ನನ್ನ ಕೊನೆಯ ದಿನ. ನಾವು ಭಾರತದಿಂದ ನಮ್ಮ ಹುಟ್ಟೂರಿಗೆ ತೆರಳುತ್ತಿದ್ದೇವೆ. ಹೀಗಾಗಿ ಇದು ನನ್ನ ಕೊನೆಯ ದಿನದ ಭಾರತದ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಕೊನೆಯ ದಿನದಲ್ಲಿ ತಾನು ಏನೆಲ್ಲಾ ಮಾಡಿದೆ ಎಂದು ವಿಡಿಯೋ ಸಹಿತ ವಿವರಿಸಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಕೊನೆಯ ದಿನದ ಸ್ವಿಗ್ಗಿ ಆರ್ಡರ್ ಪಡೆದೆ, ಇದು ನನ್ನ ದೈನಂದಿನ ಜೀವನದ ಒಂದು ಸಣ್ಣ ಭಾಗವೆಂದು ಹೇಳಿಕೊಂಡಿದ್ದಾರೆ. ನಾನು ಮಕ್ಕಳನ್ನು ಎಬ್ಬಿಸಿ ಶಾಲೆಗೆ ರೆಡಿ ಮಾಡಿದೆ. ಮಕ್ಕಳ ಶಾಲೆಯ ಕೊನೆಯ ದಿನವಾಗಿದ್ದು ನಾನು ನನ್ನ ಮಕ್ಕಳ ಊಟದ ಪ್ಯಾಕ್ ಮಾಡಿದೆ. ಶಾಲೆಯ ಕೊನೆಯ ದಿನಕ್ಕೆ ಮಗಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನಾಳೆ ಹೊರಡುವ ಕಾರಣ ಬ್ಯಾಗ್ ಪ್ಯಾಕ್ ಮಾಡಿಕೊಂಡೆವು. ನಂತರದಲ್ಲಿ ಜಿಮ್ ಗೆ ಹೊರಟೆನು. ಆ ವೇಳೆಯಲ್ಲಿ ನೆರೆಹೊರೆಯ ಬೀದಿ ನಾಯಿಯೊಂದಿಗಿನ ಆಕಸ್ಮಿಕ ಭೇಟಿಯು ಹೃದಯವನ್ನು ಭಾರವಾಗಿಸಿತು ಎಂದು ಹೇಳಿದ್ದಾರೆ.

ಇನ್ನು ಟಿಬೇರಿ ತನ್ನ ಸ್ಥಳೀಯ ಮಾಲ್‌ಗೆ ಭೇಟಿ ನೀಡಿದ್ದು, ತಾನು ಇಷ್ಟಪಡುತ್ತಿದ್ದ ವರ್ಣರಂಜಿತ ಉಡುಗೆಯನ್ನು ಮೆಚ್ಚಿಕೊಂಡಿದ್ದು, ಇಂತಹ ಫ್ಯಾಷನ್ ಉಡುಗೆಗಳು ಇನ್ನು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಆ ಬಳಿಕ ತನ್ನ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದು, ನೆಚ್ಚಿನ ಸ್ಥಳೀಯ ಚಾಕೊಲೇಟ್ ಅಂಗಡಿಯಲ್ಲಿ ಐಸ್ ಕ್ರೀಮ್ ಮಕ್ಕಳಿಗೆ ಕೊಡಿಸಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ವೈನ್ ನೊಂದಿಗೆ ಸಂಜೆ ಕಳೆದಿರುವ ಬಗ್ಗೆ ಹೇಳಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ:Video: ವಾವ್ಹ್​​​​​ ವಂಡರ್‌ಫುಲ್‌​, ಭಾರತ ಎಷ್ಟು ಸುಂದರವಾಗಿದೆ ನೋಡಿ ಎಂದ ವಿದೇಶಿಗ

ಈ ವಿಡಿಯೋವನ್ನು ಎಪ್ಪತ್ತು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು, ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ. ಭಾರತಕ್ಕೆ ನಿಮ್ಮ ಭೇಟಿ, ನಿಮ್ಮನ್ನು ತಿಳಿದುಕೊಳ್ಳುವ ಅವಕಾಶವಾಗಿತ್ತು. ನೀವು ಮತ್ತೆ ಇಲ್ಲಿಗೆ ಹಿಂತಿರುವಾಗ ತಿಳಿಸಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರಯಾಣ ಸುಖಕರವಾಗಿರಲಿ, ದೇವರಿ ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದ್ದಾರೆ. ನಾವು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ತೇವೆ.ಪ್ರಯಾಣ ಸುಖಕರವಾಗಿರಲಿ, ಮತ್ತೆ ಭಾರತಕ್ಕೆ ಬನ್ನಿ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ