Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್
ವಿದೇಶದಿಂದ ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಆಹಾರ ಪದಾರ್ಥಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಕೆಲವರು ಇಲ್ಲಿನ ಖಾದ್ಯದ ರುಚಿಗೆ ಕಳೆದೇ ಹೋಗುತ್ತಾರೆ. ಆದರೆ ಇದೀಗ ಬೆಂಗಳೂರಿನ ವಿದ್ಯಾರ್ಥಿ ಭವನದ ಬಗ್ಗೆ ಅಮೆರಿಕನ್-ಭಾರತೀಯ ವ್ಲಾಗರ್ ದಂಪತಿ ಪ್ರಾಮಾಣಿಕ ರೇಟಿಂಗ್ಸ್ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು, ಆಗಸ್ಟ್ 25: ಭಾರತದಲ್ಲಿ ಭಾರತೀಯ ಶೈಲಿಯ ಅಡುಗೆಯ (Indian food style) ಜೊತೆಗೆ ವಿದೇಶಿ ಅಡುಗೆಗಳೂ ಜನಪ್ರಿಯವಾಗಿದೆ. ಆದರೆ ವಿದೇಶದಿಂದ ಇಲ್ಲಿಗೆ ಬಂದವರು ಇಲ್ಲಿನ ವಿವಿಧ ಬಗೆಯ ಖಾದ್ಯಗಳನ್ನು ರುಚಿ ಸವಿಯುತ್ತಾರೆ. ಆದರೆ ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ (Bengaluru Vidyarthi Bhavan) ಹೋಗಿದ್ದ ದೀಪಕ್ ಮತ್ತು ಹನ್ನಾ ಎಂಬ ವ್ಲಾಗರ್ ದಂಪತಿ ಇಲ್ಲಿನ ವಿವಿಧ ಆಹಾರ ಪದಾರ್ಥಗಳನ್ನು ಸವಿದು ಪ್ರಾಮಾಣಿಕವಾಗಿ ರೇಟಿಂಗ್ಸ್ ನೀಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನ ಐಕಾನಿಕ್ ರೆಸ್ಟೋರೆಂಟ್ ಆಹಾರ ಸವಿದ ಅಮೆರಿಕನ್ ವ್ಲಾಗರ್
@deepakandhannah ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಹನ್ನಾ ಅಮೆರಿಕದವರು ಮತ್ತು ದೀಪಕ್ ಭಾರತದವರಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಈ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ಐಕಾನಿಕ್ ರೆಸ್ಟೋರೆಂಟ್ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿನ ಕೆಲವು ಸಿಗ್ನೇಚರ್ ಡಿಶ್‌ಗಳನ್ನು ಸವಿದಿದ್ದಾರೆ. ಹನ್ನಾ ಅವರು ಇಲ್ಲಿನ ವಿವಿಧ ಖಾದ್ಯಗಳನ್ನು ಸವಿದು ಪ್ರಾಮಾಣಿಕವಾಗಿ ಆಹಾರ ರುಚಿ ಹೇಗಿದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇಲ್ಲಿನ ಪ್ರಸಿದ್ಧ ಮಸಾಲ ದೋಸೆಯನ್ನು ಪ್ರಯತ್ನಿಸಲು ನಾನು ತುಂಬಾ ಉತ್ಸುಕನಾಗಿದ್ದೆ. ನಾವು ನಿರೀಕ್ಷಿಸಿದಂತೆ ಇರಲಿಲ್ಲ. ಆದರೆ ದೋಸೆಯ ವಿನ್ಯಾಸವು ಬಹುತೇಕ ಪರಿಪೂರ್ಣವಾಗಿತ್ತು. ಆದರೂ ನಮಗೆ ಅದು ಸ್ವಲ್ಪ ಎಣ್ಣೆಯುಕ್ತವಾಗಿದ್ದು, ರುಚಿಯಿಲ್ಲ ಎಂದೆನಿಸಿತು ಎಂದಿದ್ದು ಹತ್ತಕ್ಕೆ ಏಳು ರೇಟಿಂಗ್ಸ್ ನೀಡಿದ್ದಾರೆ. ದೋಸೆಗೆ ನೀಡಿದ ತೆಂಗಿನಕಾಯಿ ಚಟ್ನಿಗಾಗಿ ಹನ್ನಾರವರು ರುಚಿಕರ ಎಂದಿದ್ದಾರೆ. ಇದಕ್ಕೆ ಹತ್ತಕ್ಕೆ ಒಂಬತ್ತು ರೇಟಿಂಗ್ಸ್ ನೀಡಿದ್ದು, ಟೇಬಲ್ ಮೇಲೆ ಇರಿಸಲಾದ ವಿವಿಧ ವಿನ್ಯಾಸದ ಪ್ಲೇಟ್ ಕಂಡು ಹನ್ನಾರವರಿಗೆ ಖುಷಿಯಾಗಿದೆ.
ಹನ್ನಾರವರ ಪತಿ ಭಾರತೀಯ ದೀಪಕ್ ಸಾಂಬಾರ್ ಜೊತೆ ಉದ್ದಿನ ವಡೆಯ ರುಚಿ ಸವಿದಿದ್ದು, ರುಚಿಕರವಾಗಿದ್ದು, ಅಷ್ಟೇನು ವಿಶೇಷವಾಗಿಲ್ಲ ಎಂದು ಹೇಳಿದ್ದು ಇದಕ್ಕೆ ಹತ್ತಕ್ಕೆ ಏಳೂವರೇ ರೇಟಿಂಗ್ಸ್ ನೀಡಿದ್ದು, ಆ ಬಳಿಕ ಕರ್ನಾಟಕದಲ್ಲಿ ಜನಪ್ರಿಯ ಖಾದ್ಯ ಖಾರಾ ಬಾತ್ ಸವಿದಿದ್ದಾರೆ. ಹನ್ನಾರವರು ಇಷ್ಟ ಪಟ್ಟು ಸವಿದು ಹತ್ತಕ್ಕೆ ಹತ್ತು ಅಂಕ ನೀಡಿದ್ದಾರೆ. ನಾವು ಇಲ್ಲಿಯವರೆಗೆ ಸವಿದ ಆಹಾರವಿದು ಎಂದು ಹೇಳಿದ್ದಾರೆ. ದೀಪಕ್ ಮತ್ತು ಹನ್ನಾ ತಮ್ಮ ಈ ಊಟವನ್ನು ದಕ್ಷಿಣ ಭಾರತದ ಫಿಲ್ಟರ್ ಕಾಫಿಯೊಂದಿಗೆ ಮುಗಿಸಿದ್ದು, ಅಷ್ಟೇನು ಚೆನ್ನಾಗಿಲ್ಲ ಎಂದು ಹೇಳಿದ್ದು ಹತ್ತಕ್ಕೆ ಆರು ಅಂಕ ನೀಡಿದ್ದಾರೆ. ತನ್ನ ಎರಡು ಕೈಗಳಲ್ಲಿಯೇ 20 ದೋಸೆಗಳನ್ನು ಕೈಯಲ್ಲಿಡುಕೊಂಡು ಸರ್ವರ್ ಸರ್ವ್ ಮಾಡುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದು, ಸರ್ವರ್ ಉತ್ತಮ ಕೌಶಲ್ಯ ಹೊಂದಿದ್ದಾರೆ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ:Video: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಇದು ಮೊದಲು ನಿಜಕ್ಕೂ ಒಂದು ಐಕಾನಿಕ್ ಸ್ಥಳವಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಆಹಾರವು ಉತ್ತಮವಾಗಿಲ್ಲ ಹಾಗೂ ತುಂಬಾ ದುಬಾರಿಯಾಗಿದೆ ಎಂದು ಹೇಳಿದ್ದಾರೆ. ಇಲ್ಲಿನ ಫ್ಲಿಟರ್ ಕಾಫಿ ಸೂಪರ್ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ನಿಮ್ಮ ಪ್ರಾಮಾಣಿಕ ಆಹಾರ ವಿಮರ್ಶೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Mon, 25 August 25








